ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್! ಸರ್ಕಾರ ಉರುಳಿಸಿ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಮಾಡಲು ಬಿಗ್ ಸ್ಕೆಚ್ !! ಬಿಜೆಪಿ ಲೆಕ್ಕ ಏನು ಗೊತ್ತಾ?

ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್! ಸರ್ಕಾರ ಉರುಳಿಸಿ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಮಾಡಲು ಬಿಗ್ ಸ್ಕೆಚ್ !! ಬಿಜೆಪಿ ಲೆಕ್ಕ ಏನು ಗೊತ್ತಾ?

ಇದೀಗ ಇಡೀ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿದೆ. ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ನಂತರ ಮೈತ್ರಿ ಸರ್ಕಾರದ ಹಲವಾರು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ದೋಸ್ತಿ ಪಕ್ಷದ ನಾಯಕರು ಇದ್ಯಾವುದಕ್ಕೂ ಸೊಪ್ಪು ಹಾಕದೆ ತಮ್ಮ ಕೆಲಸಗಳಲ್ಲಿ ತಾವು ನಿರತರಾಗಿದ್ದರು. ಬಹಳ ಕೂಲ್ ಹಾಗೂ ರಿಲಾಕ್ಸ್ ಮೂಡಲ್ಲಿ ಇದ್ದೇವೆ ಎಂಬಂತೆ ಇತ್ತ ಕುಮಾರಸ್ವಾಮಿ ರವರು ಅಮೆರಿಕ ಪ್ರವಾಸವನ್ನು ಮುಂದುವರೆಸಿದರೆ ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು ಪ್ರವಾಸಕ್ಕೆ ಜರ್ಮನಿಗೆ ಹಾರಿದ್ದರು. ಇದನ್ನು ಕಂಡ ಜನ ಈ ಬಾರಿಯೂ ಎಲ್ಲಾ ಊಹಾಪೋಹಗಳು ಕೇಳಿಬರುತ್ತಿವೆ ಎಂದು ಸುಮ್ಮನಾಗಿದ್ದರು.

ಆದರೆ ಇಂದು 12 ಶಾಸಕರು ರಾಜೀನಾಮೆ ನೀಡಿ, ಈಗಾಗಲೇ ರೆಸಾರ್ಟ್ ಸೇರಿಕೊಂಡಿದ್ದಾರೆ. ಮುಂಬೈ ನಗರದ ಹೋಟೆಲ್ನಲ್ಲಿ ತಂಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಕರ್ನಾಟಕ ರಾಜ್ಯದಲ್ಲಿ ಅಂತೂ 10 ಶಾಸಕರು ಇಲ್ಲ ಎಂಬುದು ಖಚಿತವಾಗಿದೆ. ಇನ್ನುಳಿದ ನಾಲ್ಕು ಶಾಸಕರು ಬೆಂಗಳೂರಿನಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಗೆ ದೊರೆತಿದೆ. ಇದೀಗ ಎಲ್ಲವೂ ಮುಗಿದು ಹೋದ ಮೇಲೆ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ವೇಣುಗೋಪಾಲ್ ರವರು ರಾಜ್ಯಕ್ಕೆ ಆಗಮಿಸಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಜೊತೆ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ ರವರ ನಡುವಿನ ಭಿನ್ನಮತ ಭುಗಿಲೆದ್ದಿದ್ದು, ಒಬ್ಬರ ಮೇಲೆ ಒಬ್ಬರು ನೇರವಾಗಿ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಅಷ್ಟೇ ಅಲ್ಲದೆ ಕೆಸಿ ವೇಣುಗೋಪಾಲ್ ರವರು, ಸಿದ್ದರಾಮಯ್ಯ ರವರ ಬಳಿ ಮುಂದಿನ ನಡೆಯೇನು ಎಂದು ಪ್ರಶ್ನಿಸಿದಾಗ, ಕರ್ನಾಟಕ ರಾಜ್ಯದಲ್ಲಿ ಇನ್ನು ಮುಂದೆ ಮೈತ್ರಿ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಿಲ್ಲ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಯಾವುದೇ ಲಾಭವಿಲ್ಲ. ಇನ್ನು ಭಿನ್ನಮತೀಯ ಶಾಸಕರನ್ನು ಕರೆತರುವುದು ಅಸಾಧ್ಯವಾದ ಮಾತು, ಎಲ್ಲರ ಕೂಗು ಸಿದ್ದರಾಮಯ್ಯರವರು ಸಿಎಂ ಆಗಬೇಕು ಎಂಬುವುದು, ಈಗಾಗಲೇ ಜೆಡಿಎಸ್ ಪಕ್ಷಕ್ಕೆ ನಾವು ಐದು ವರ್ಷಗಳ ಕಾಲ ಸಿಎಂ ಕುರ್ಚಿಯನ್ನು ಬಿಟ್ಟುಕೊಟ್ಟಿದ್ದೇವೆ. ಆದ್ದರಿಂದ ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದರೆ ಕರ್ನಾಟಕ ರಾಜ್ಯವು ಮತ್ತೊಂದು ಚುನಾವಣೆಯನ್ನು ಎದುರಿಸಬೇಕು ಎಂದು ಉತ್ತರ ನೀಡಿದ್ದಾರೆ.

ಹೌದು, ಮೈತ್ರಿ ತೊರೆದುಕೊಂಡು ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಯನ್ನು ಎದುರಿಸುವುದು ಉತ್ತಮ ಎಂದು ಸಿದ್ದರಾಮಯ್ಯರವರು ಕೆಸಿ ವೇಣುಗೋಪಾಲ್ ರವರ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಒಂದು ವೇಳೆ ಈ ಕ್ಷಣದಲ್ಲಿ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೆ ದೋಸ್ತಿಗಳ ಕಿತ್ತಾಟದಿಂದ ಬೇಸತ್ತಿರುವ ಕರ್ನಾಟಕ ಜನತೆಯು ಬಿಜೆಪಿ ಪಕ್ಷದ ಕೈ ಹಿಡಿಯಲಿದ್ದಾರೆ ಹಾಗೂ ಬಿಜೆಪಿ ಪಕ್ಷವು ಕನಿಷ್ಠ 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಾಣಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದ ಕಾರಣದಿಂದ ದೋಸ್ತಿಗಳು ಚುನಾವಣೆಗೆ ಹೋಗದೆ ಇದ್ದರೆ ಒಳಿತು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಆದರೆ ಸಿದ್ದರಾಮಯ್ಯರವರ ಲೆಕ್ಕಾಚಾರವೇ ಬೇರೆಯಾಗಿದ್ದು ಒಂದು ವೇಳೆ ಕೆಸಿ ವೇಣುಗೋಪಾಲ್ ರವರು ಸಿದ್ದರಾಮಯ್ಯರವರ ಮಾತು ಕೇಳಿ ಹೈಕಮಾಂಡ್ ಬಳಿ ತಮ್ಮ ನಿರ್ಧಾರವನ್ನು ಪ್ರಕಟನೆ ಮಾಡಿದ್ದಲ್ಲಿ ಕರ್ನಾಟಕ ರಾಜ್ಯವು ಮತ್ತೊಂದು ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಕಾಣಲಿದೆ.