ರಾಜ್ಯಪಾಲರು ಅಖಾಡಕ್ಕೆ ! ಡಿಕೆಶಿಗೆ ಮತ್ತೊಂದು ಬಿಗ್ ಶಾಕ್ ! ಸಚಿವ / ಶಾಸಕ ಸ್ಥಾನ ಢಮಾರ್??

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಮೈತ್ರಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದುಕೊಂಡಿದ್ದ ಡಿಕೆ ಶಿವಕುಮಾರ್ ಅವರಿಗೆ ಇದೀಗ ಕ್ಷಣಕ್ಕೊಂದು ಸವಾಲುಗಳು ಎದುರಾಗುತ್ತಿವೆ. ಒಂದೆಡೆ ಮೈತ್ರಿ ಸರ್ಕಾರದ 12ಶಾಸಕರು ರಾಜೀನಾಮೆ ನೀಡಿದ್ದಾರೆ, ಅತೃಪ್ತ ಶಾಸಕರನ್ನು ಇಷ್ಟು ದಿವಸ ಸೋಲಿಲ್ಲದೆ ಮನವೊಲಿಸಿದ್ದ ಡಿ ಕೆ ಶಿವಕುಮಾರ್ ಅವರು ಇಂದು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಯಾವೊಬ್ಬ ಶಾಸಕನ ಮನವೊಲಿಸಲು ಸಾಧ್ಯವಾಗಿಲ್ಲ. ಈ ಎಲ್ಲಾ ವಿದ್ಯಮಾನಗಳ ನಡುವೆ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಸ್ವಲ್ಪ ಯಾಮಾರಿದರೂ ಡಿಕೆ ಶಿವಕುಮಾರ್ ರವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದೀಗ ಚೆಂಡು ಕರ್ನಾಟಕ ರಾಜ್ಯಪಾಲರ ಅಂಗಳದಲ್ಲಿ ಬಿದ್ದಿದ್ದು ರಾಜ್ಯಪಾಲರ ನಿರ್ಧಾರ ಡಿಕೆ ಶಿವಕುಮಾರ್ ಅವರ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧಾರ ಮಾಡಲಿದೆ ಎಂದರೆ ತಪ್ಪಾಗಲಾರದು.

ಇಂದು ಡಿಕೆ ಶಿವಕುಮಾರ್ ರವರು, ಅತೃಪ್ತ ಶಾಸಕರು ವಿಧಾನಸೌಧದಲ್ಲಿ ಸ್ಪೀಕರ್ ಕಚೇರಿಗೆ ತೆರಳುವ ವೇಳೆಯಲ್ಲಿ ಎದುರಾಗಿ ಮನವೊಲಿಸಲು ಪ್ರಯತ್ನಪಟ್ಟಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇದೇ ವಿಚಾರವಾಗಿ ಇದೀಗ ಡಿಕೆ ಶಿವಕುಮಾರ್ ಅವರಿಗೆ ಅತಿದೊಡ್ಡ ಕಂಟಕ ಎದುರಾಗಿದೆ. ಈ ಕಂಟಕದಿಂದ ಡಿಕೆ ಶಿವಕುಮಾರ್ ರವರು ಪಾರಾಗುವುದು ಅಷ್ಟು ಸುಲಭದ ಮಾತಲ್ಲ, ಯಾಕೆಂದರೆ ಕರ್ನಾಟಕದ ರಾಜ್ಯಪಾಲರು ನಿಷ್ಪಕ್ಷವಾಗಿ ಧೃಡ ನಿರ್ಣಯ ಕೈಗೊಳ್ಳುವುದರಲ್ಲಿ ಎತ್ತಿದ ಕೈ, ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ತಮ್ಮ ಪಕ್ಷದ ಮುಖ್ಯಮಂತ್ರಿ ಎಂಬುದನ್ನು ನೋಡದೆ ಬಿಎಸ್ ಯಡಿಯೂರಪ್ಪ ನವರಿಗೆ ಕೆಲವೇ ಕೆಲವು ಗಂಟೆಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ಆದೇಶ ನೀಡಿದ್ದ ಘಟನೆ. ಹೌದು, ಆಪರೇಷನ್ ಕಮಲ ನಡೆಯುತ್ತದೆ ಎಂಬ ಭೀತಿಯಿಂದ ಕಳೆದ ಬಾರಿ ಕೆಲವೇ ಕೆಲವು ಗಂಟೆಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ಬಿಎಸ್ವೈ ರವರಿಗೆ ಆದೇಶ ನೀಡಿದ್ದರು.

ಇದೀಗ ಮೊದಲಿನಿಂದಲೂ ಡಿಕೆ ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡು ಬಂದಿದ್ದ ಶಾಸಕ ಮುನಿರತ್ನ ಅವರು ಬೇರೆ ತಂಡದೊಂದಿಗೆ ಸೇರಿಕೊಂಡು, ಡಿಕೆ ಶಿವಕುಮಾರ್ ಅವರ ಮೇಲೆ ಹೊಸ ದೂರನ್ನು ನೀಡಿದ್ದಾರೆ. ಹೌದು ಶಾಸಕ ಮುನಿರತ್ನ ಅವರು ರಾಜೀನಾಮೆ ನೀಡಲು ತೆರಳುತ್ತಿದ್ದ ವೇಳೆಯಲ್ಲಿ ಮನವೊಲಿಸಲು ಪ್ರಯತ್ನಪಟ್ಟಿದ್ದ ಡಿಕೆ ಶಿವಕುಮಾರ್ ರವರು, ಮುನಿರತ್ನ ರವರು ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಇದೀಗ ಎಲ್ಲಾ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಡಿಕೆ ಶಿವಕುಮಾರ್ ಅವರ ನಡೆಗೆ ಭಾರೀ ಟೀಕೆಗಳು ಕೇಳಿಬಂದಿದ್ದವು. ಇದನ್ನೇ ಬಳಸಿಕೊಂಡು ಇದೀಗ ರಾಜ್ಯಪಾಲರ ಕಟ್ಟಿರುವ ಮುನಿರತ್ನ ಮತ್ತು ಟೀಮ್ ಡಿಕೆ ಶಿವಕುಮಾರ್ ರವರ ವಿರುದ್ಧ ದಬ್ಬಾಳಿಕೆ ಹಾಗೂ ಬೆದರಿಕೆಯ ಆರೋಪವನ್ನು ರಾಜ್ಯಪಾಲರಿಗೆ ನೀಡಿದೆ. ಇಷ್ಟೇ ಅಲ್ಲದೆ ತನಗೆ ಸಂಪೂರ್ಣ ರಕ್ಷಣೆಯ ವ್ಯವಸ್ಥೆ ಮಾಡಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ಡಿ ಕೆ ಶಿವಕುಮಾರ್ ಅವರ ಈ ಅಶಿಸ್ತಿನ ನಡೆಯು ಡಿಕೆ ಶಿವಕುಮಾರ್ ರವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀಳಲಿದೆ. ಡಿಕೆ ಶಿವಕುಮಾರ್ ರವರ ಈ ಅಶಿಸ್ತಿನಿಂದ ಡಿಕೆ ಶಿವಕುಮಾರ್ ರವರು ಕೆಲವು ದಿನ ನಿರ್ಬಂಧ ಸಹ ಎದುರಿಸಬಹುದು, ಭಾರತ ಸಂವಿಧಾನದ ಪ್ರಕಾರ ರಾಜ್ಯಪಾಲರು ಸಚಿವ ಸ್ಥಾನದಿಂದ ಅನರ್ಹಗೊಳಿಸಿ, ಶಾಸಕ ಸ್ಥಾನವನ್ನು ಸಹ ಕಿತ್ತುಕೊಳ್ಳಬಹುದು. ಒಟ್ಟಿನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಶಾಕ್ ನೀಡಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ರಾಜ್ಯಪಾಲರಿಗೆ ಈ ವಿಷಯದಲ್ಲಿ ಸಂಪೂರ್ಣ ಅಧಿಕಾರವಿದ್ದು, ಒತ್ತಡ ಹೇರಲು ಪ್ರಯತ್ನ ಮಾಡಿದರೆ ಶಿಕ್ಷೆ ಮತ್ತಷ್ಟು ಕಠಿಣ ವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅಷ್ಟೇ ಅಲ್ಲದೆ ಇದೀಗ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಂದ ಪಕ್ಷದಲ್ಲಿ ಮಹತ್ವದ ಸ್ಥಾನಮಾನ ಪಡೆಯುವ ಚಿಂತನೆ ಮಾಡುತ್ತಿರುವ ಡಿಕೆ ಶಿವಕುಮಾರ್ ಅವರಿಗೆ, ಕಾಂಗ್ರೆಸ್ ಹೈಕಮಾಂಡ್ ಅವರು ಇದೇ ಅಶಿಸ್ತಿನ ಕಾರಣವನ್ನು ಮುಂದಿಟ್ಟುಕೊಂಡು ಈಗಾಗಲೇ ವಿಳಂಬವಾಗಿರುವ ಸ್ಥಾನಮಾನವನ್ನು ಮತ್ತಷ್ಟು ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಸರ್ಕಾರ ಉಳಿಸಲು ಪ್ರಯತ್ನಪಟ್ಟಿದ್ದ ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ಸವಾಲುಗಳು ಎದುರಾಗಿವೆ.

Post Author: Ravi Yadav