ನಿಖಿಲ್ ಹೊಸ ವರಸೆ! ಸುಮಲತಾ ರವರೇ ಟಾರ್ಗೆಟ್.. ಸೋತ ಬಳಿಕ ಯು-ಟರ್ನ್ ಹೊಡೆದ ನಿಖಿಲ್ ಕುಮಾರಸ್ವಾಮಿ

ಇಡೀ ದೇಶದಲ್ಲಿ ಬಹಳ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುಮಲತ ಅಂಬರೀಶ್ ಅವರು ಮುಖ್ಯಮಂತ್ರಿಗಳಾದ ಕುಮಾರಸ್ವಾಮಿರವರ ಪುತ್ರ ನಿಖಿಲ್ ಕುಮಾರಸ್ವಾಮಿ ರವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ. ಚುನಾವಣೆ ಸಮಯದಲ್ಲಿ ಮಂಡ್ಯ ಜಿಲ್ಲೆಯ ಜನರು ಕುಟುಂಬದ ಸದಸ್ಯರು ಇದ್ದಂತೆ ಸದಾ ಅವರ ಜೊತೆಗೆ ನಾನು ಇರುತ್ತೇನೆ ಎಂದೆಲ್ಲ ಭಾಷಣಗಳನ್ನು ಮಾಡಿ ತದನಂತರ ಸೋಲಿನ ಬಳಿಕ ನಾನು ಇಷ್ಟಕ್ಕೆ ಸುಮ್ಮನೆ ಕೂರುವುದಿಲ್ಲ ಬದಲಾಗಿ ಐದು ವರ್ಷಗಳ ಕಾಲ ಹೊಸ ಸಂಸದರ ಕೈಯಲ್ಲಿ ಕೆಲಸ ಮಾಡಿಸಲು ಪ್ರಯತ್ನ ಪಡುತ್ತೇನೆ. ಮಂಡ್ಯ ಜನರ ಅಭಿವೃದ್ಧಿಯ ಹೋರಾಟಕ್ಕೆ ಕೈ ಜೋಡಿಸುತ್ತೇನೆ ಎಂದೆಲ್ಲ ಭಾಷಣಗಳನ್ನು ಮಾಡಿದ್ದರು. ಆದರೆ ಇದೀಗ ಇದ್ದಕ್ಕಿದ್ದಹಾಗೆ ನಿಖಿಲ್ ಕುಮಾರಸ್ವಾಮಿ ರವರು ವರಸೆ ಬದಲಾಯಿಸಿದ್ದಾರೆ.

ಇತ್ತೀಚೆಗಷ್ಟೇ ಸುಮಲತಾ ಅಂಬರೀಶ್ ಅವರು ಗೆದ್ದ ಮೇಲೆ ಪ್ರತಿಯೊಬ್ಬ ನಾಯಕರು ಸುಮಲತಾ ಅಂಬರೀಶ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಪ್ರತಿಯೊಂದು ವಿಚಾರಕ್ಕೂ ಸುಮಲತಾ ಅಂಬರೀಶ್ ರವರು ಎಳೆದು ತರುವ ಕೆಲವು ರಾಜಕೀಯ ನಾಯಕರು ಸುಖಾಸುಮ್ಮನೆ ಸುಮಲತಾ ಅಂಬರೀಶ್ ರವರ ಮೇಲೆ ಹಾಗೂ ಅವರನ್ನು ಚುನಾಯಿಸಿದ ಪ್ರಜೆಗಳ ಮೇಲೆ ವ್ಯಂಗ್ಯದ ಮಾತುಗಳನ್ನು ಆಡುತ್ತಿದ್ದಾರೆ. ತಾನೊಬ್ಬ ಜನರಿಂದ ಆಯ್ಕೆಯಾದ ಶಾಸಕ ಎಂಬುದನ್ನು ಮರೆತು ಜನರು ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದಾಗ, ಶಾಸಕ ಸ್ಥಾನದಲ್ಲಿದ್ದುಕೊಂಡು ಜನರಿಗೆ ಅಭಿವೃದ್ಧಿಗೆ ಮಾತ್ರ ನಮ್ಮ ಬಳಿ ಬರುತ್ತೀರಿ ಆದರೆ ಮತ ಸುಮಲತ ಅಂಬರೀಶ್ ರವರಿಗೆ ನೀಡುತ್ತೀರಿ, ಹೋಗಿ ಅವರ ಬಳಿಯೇ ಅಭಿವೃದ್ಧಿಯ ಬಗ್ಗೆ ಮಾತನಾಡಿ ನಮ್ಮನ್ನು ಏನು ಕೇಳಲು ಬರಬೇಡಿ ಎಂದು ಇತ್ತೀಚೆಗೆ ಶಾಸಕರೊಬ್ಬರು ಹೇಳಿಕೆ ನೀಡಿರುವುದು ನಿಮಗೆಲ್ಲರಿಗೂ ತಿಳಿದಿರಬಹುದು.

ಇಷ್ಟೇ ಅಲ್ಲದೆ ಇನ್ನೂ ಹಲವಾರು ಇದೇ ರೀತಿಯ ವಿಷಯಗಳಲ್ಲಿ ಸುಮಲತಾ ಅಂಬರೀಶ್ ರವರನ್ನು ಇಷ್ಟು ದಿವಸ ಜೆಡಿಎಸ್ ಪಕ್ಷದ ನಾಯಕರು ಎಳೆದು ತರುತ್ತಿದ್ದರು. ಖುದ್ದು ಕುಮಾರಸ್ವಾಮಿ ರವರೇ ಜೆಡಿಎಸ್ ಪಕ್ಷದ ನಾಯಕರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಯಾರು ಈ ರೀತಿ ಮಾತನಾಡಬಾರದು ಎಂದು ಮನವಿ ಮಾಡಿಕೊಂಡಿದ್ದರು, ಅಷ್ಟೇ ಅಲ್ಲದೆ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ಒಟ್ಟಾಗಿ ನಿಲ್ಲಬೇಕು ಎಂಬ ಹೇಳಿಕೆಯನ್ನು ಸಹ ನೀಡಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ರವರು ಕುಮಾರಸ್ವಾಮಿರವರ ಮಾತುಗಳನ್ನು ಮರೆತಂತೆ ಕಾಣುತ್ತಿದೆ. ಇದೀಗ ಸುಮಲತಾ ಅಂಬರೀಶ್ ಅವರನ್ನು ವ್ಯಂಗ್ಯವಾಗಿ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ ರವರು ಏನು ಹೇಳಿದ್ದಾರೆ ಗೊತ್ತಾ?

ಕಾವೇರಿ ನದಿಗೆ ನೀರು ಬಿಡುವ ವಿಚಾರವಾಗಿ ಈಗಾಗಲೇ ಸುಮಲತಾ ಅಂಬರೀಶ್ ಅವರು ಕೇಂದ್ರದ ಕದ ತಟ್ಟಿದ್ದಾರೆ. ಬಿಜೆಪಿ ಸಂಸದರನ್ನು ಬೆಂಬಲಕ್ಕೆ ತೆಗೆದುಕೊಂಡು ಕೇಂದ್ರಕ್ಕೆ ವಿಶೇಷ ಮನವಿ ಮಾಡಿರುವ ಸುಮಲತಾ ಅಂಬರೀಶ್ ರವರನ್ನು ಇದೀಗ ಇದೇ ವಿಚಾರದಲ್ಲಿ ನಿಖಿಲ್ ಕುಮಾರಸ್ವಾಮಿ ಕಾವೇರಿ ನದಿಯ ನೀರಿನ ಬಗ್ಗೆ ಈಗ ಮಂಡ್ಯ ಜನರಿಗೆ ಚಿಂತೆ ಬಂದುಬಿಟ್ಟಿದೆ, ಆರಿಸಿ ಕಳುಹಿಸಿದ್ದಾರಲ್ಲಾ ಸಂಸದರು ಅವರೇ ನೋಡಿಕೊಳ್ಳುತ್ತಾರೆ ಬಿಡಿ, ಅವರು ಬಿಜೆಪಿ ಬೆಂಬಲಿತ ಸದಸ್ಯರು. ನರೇಂದ್ರ ಮೋದಿ ರವರ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದ್ದರೆ ನಾವೆಲ್ಲ ಯಾರು, ನಾವೆಲ್ಲ ಸಣ್ಣ ಬರುವ ಜನ ಹಾರಿಸಿರುವ ಸಂಸದರಿಗೂ ಜವಾಬ್ದಾರಿಯಿದೆ ಜನರ ನಿರೀಕ್ಷೆಯನ್ನು ಕಾಪಾಡಲಿ ಎಂದು ವ್ಯಂಗ್ಯವಾಡಿದ್ದಾರೆ. ಚುನಾವಣೆಗೂ ಮುನ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಂಡ್ಯ ಜನರಿಗೆ ನೀರು ನೀಡಿ, ಇದೀಗ ಅಭಿವೃದ್ಧಿಯ ವಿಷಯ ಬಂದಾಗ ಮಾತ್ರ ಸಂಸದರನ್ನು ಪ್ರತಿಬಾರಿಯೂ ಎಳೆದು ತಂದು ವ್ಯಂಗ್ಯ ವಾಡುತ್ತಿರುವುದು ಎಷ್ಟು ಸರಿ ಎಂಬುದು ನಮ್ಮ ಅಭಿಪ್ರಾಯ.

Post Author: Ravi Yadav