ಒಂದೇ ಒಂದು ಪತ್ರದಿಂದ ಬಡ ರೈತನ ಮಗಳ ಜೀವ ಉಳಿಸಿದ ಮೋದಿ! ಶಭಾಷ್ ಮೋದಿ ಬಾಯ್

ನರೇಂದ್ರ ಮೋದಿ ರವರು ಕಳೆದ ಬಾರಿ 2014ರಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಬಳಿಕ, ಭಾರತದ ಸರ್ಕಾರ ಹಾಗೂ ಜನರ ನಡುವೆ ಇರುವ ಅಂತರ ಬಹಳ ಕಡಿಮೆಯಾದಂತೆ ಕಾಣುತ್ತಿದೆ. ಸರ್ಕಾರಕ್ಕೆ ಜನರ ಕೂಗು ಕೇಳಿಸುವುದೇ ಇಲ್ಲ ಎಂಬ ಹೇಳಿಕೆ ಇದೀಗ ಸತ್ಯಕ್ಕೆ ದೂರವಾದಂತೆ ಕಾಣುತ್ತಿದೆ. ಪ್ರಧಾನಿ ಕಚೇರಿಗೆ ದಿನಕ್ಕೆ ಲಕ್ಷ ಲಕ್ಷ ಪತ್ರಗಳು ಹರಿದು ಬಂದರು, ಅಗತ್ಯವಿರುವ ಪತ್ರಗಳಿಗೆ ಕೂಡಲೇ ಪ್ರಧಾನಮಂತ್ರಿ ಕಾರ್ಯಾಲಯದಿಂದ ಉತ್ತರ ನೀಡಿ, ನಡೆಯಬೇಕಾದ ಕೆಲಸಗಳನ್ನು ಕ್ಷಣಮಾತ್ರದಲ್ಲಿ ಮುಗಿಸಲಾಗುತ್ತಿದೆ. ಇದಕ್ಕೆ ಈಗಾಗಲೇ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಇತ್ತೀಚಿಗೆ ಕೆಲವು ದಿನಗಳ ಹಿಂದಷ್ಟೇ ಮೈಸೂರಿನ ರಸ್ತೆಯ ಕುರಿತಾದ ಪತ್ರಕ್ಕೆ ಹಾಗೂ ಕರ್ನಾಟಕದ ಯುವಕನ ಹಳ್ಳಿಗೆ ವಿದ್ಯುತ್ ನೀಡುವ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯ ಬಹುಬೇಗನೆ ಸ್ಪಂದಿಸಿದ್ದು ಈ ಮಾತಿಗೆ ಸ್ಪಷ್ಟ ನಿದರ್ಶನಗಳು.

ಹೀಗಿರುವಾಗ ಇದೇ ರೀತಿ ಅನಾರೋಗ್ಯದಿಂದ ಬಳಲುತ್ತಿದ್ದ ಬಡರೈತ ತನ್ನ ಜಮೀನನ್ನು ಮಾರಾಟ ಮಾಡಿ ತನ್ನ ಮಗಳಿಗೆ ಏಳು ಲಕ್ಷ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿ, ತದನಂತರ ಹಣವನ್ನು ಹೊಂದಿಸಲಾಗದೆ ಬೇರೆ ವಿಧಿ ಇಲ್ಲದೆ ಪ್ರಧಾನಿ ನರೇಂದ್ರ ಮೋದಿ ರವರಿಗೆ ಪತ್ರವನ್ನು ಬರೆಯುತ್ತಾನೆ. ಜೈಪುರದ ಸುಮೇರ್ ಸಿಂಗ್ ಎಂಬುವವರು ಬರೆದ ಪತ್ರಕ್ಕೆ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಮಗಳ ಚಿಕಿತ್ಸೆ ಹಣ 30 ಲಕ್ಷವನ್ನು ಪ್ರಧಾನಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಬಿಡುಗಡೆಮಾಡಿ ತಲುಪಿಸಲಾಗಿದೆ. ಒಟ್ಟಿನಲ್ಲಿ ಕೇವಲ ಒಂದೇ ಒಂದು ಪತ್ರದಿಂದ ಇಂದು ಸಿಂಗ್ ರವರ ಮಗಳ ಜೀವ ಉಳಿದಿದೆ, ಪತ್ರದಲ್ಲಿ ತನ್ನ ಮಗಳಿಗೆ ಇರುವ ಕಾಯಿಲೆ ಸಮೇತ ಸಂಪೂರ್ಣವಾಗಿ ವಿವರ ನೀಡಿದ ಕಾರಣ ಪ್ರಧಾನ ಮಂತ್ರಿ ಕಾರ್ಯಾಲಯ ಕೂಡಲೇ ಸ್ಪಂದಿಸಿದ್ದು ಇದೀಗ ರೈತನ ಮುಖದಲ್ಲಿ ಮಂದಹಾಸ ಮೂಡಿದೆ.

Post Author: Ravi Yadav