ಶೋಭಾ ಕರಂದ್ಲಾಜೆ ರವರಿಗೆ ಬಿಗ್ ಗಿಫ್ಟ್ ನೀಡಿದ ಮೋದಿ!

ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಶೋಭಾ ಕರಂದ್ಲಾಜೆ ಅವರು ಇದೀಗ ಎರಡನೇ ಬಾರಿಗೆ ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದಾರೆ. ಇವರು ಎರಡನೇ ಬಾರಿ ಗೆದ್ದ ತಕ್ಷಣ ಕೇಂದ್ರ ಸರ್ಕಾರದಲ್ಲಿ ಶೋಭಾ ಕರಂದ್ಲಾಜೆ ರವರಿಗೆ ಮಂತ್ರಿಸ್ಥಾನ ಸಿಗುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಶೋಭಾ ಕರಂದ್ಲಾಜೆ ರವರೂ ಸಹ ಮಂತ್ರಿಗಿರಿಯ ನೀರೀಕ್ಷೆಯಲ್ಲಿ ಇದ್ದರು. ಆದರೆ ನರೇಂದ್ರ ಮೋದಿರವರ ಟೀಂನಲ್ಲಿ ಸ್ಥಾನ ಸಿಗದೆ ನಿರಾಸೆಗೊಂಡಿದ್ದರು. ಇದೀಗ ಶೋಭಾಕರಂದ್ಲಾಜೆ ಅವರಿಗೆ ಯಾರೂ ಊಹಿಸದ ರೀತಿಯಲ್ಲಿ ಅಚ್ಚರಿಯ ಹುದ್ದೆಯನ್ನು ಮೋದಿ ಗಿಫ್ಟ್ ನೀಡಿದ್ದಾರೆ ಈ ಮೂಲಕ ಮೊದಲ ಬಾರಿಗೆ ಶೋಭಾ ಕರಂದ್ಲಾಜೆ ರವರು ಕೇಂದ್ರದಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಲೋಕಸಭೆಯ ನಾಯಕತ್ವದ ಚುನಾವಣೆಗಳು, ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುವ ಮುಂತಾದ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸಿ, ಸಂಪೂರ್ಣ ಬಿಜೆಪಿ ಪಕ್ಷದ 303 ಸಂಸದರಿಗೆ ವಿಪ್ ಜಾರಿ ಮಾಡುವ ಮಹತ್ವದ ಹುದ್ದೆಯಾದ ಮುಖ್ಯ ಸಚೇತಕರಾಗಿ ಶೋಭಾ ಕರಂದ್ಲಾಜೆ ರವರು ಇದೀಗ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯಲ್ಲಿ ಅನುರಾಗ್ ಠಾಕೂರ್ ಅವರು ಈ ಹುದ್ದೆಯನ್ನು ಬಹಳ ಯಶಸ್ವಿಯಾಗಿ ನಿರ್ವಹಣೆ ಮಾಡಿದರು, ಇದೀಗ ಈ ಹೊಸ ಜವಾಬ್ದಾರಿ ಶೋಭಾ ಕರಂದ್ಲಾಜೆ ರವರ ಹೆಗಲೇರಿದ್ದು ಈ ಜವಾಬ್ದಾರಿಯನ್ನು ಶೋಭಾ ಕರಂದ್ಲಾಜೆ ರವರು ಯಾವ ರೀತಿ ನಿರ್ವಹಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದ ಶೋಭಾಕರಂದ್ಲಾಜೆ ರವರಿಗೆ ಸಂಪುಟಕ್ಕೆ ಸಂಬಂಧಿಸದೆ ಇರುವ ಹುದ್ದೆ ಸಿಕ್ಕಿದರೂ ಸಹ, ಈ ಹುದ್ದೆಯು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ಸಮಾಧಾನಕರ ಸಂಗತಿ.

Post Author: Ravi Yadav