ಬಿಗ್ ನ್ಯೂಸ್- ಮೋದಿಯಿಂದ ಕಾರ್ಮಿಕರಿಗಾಗಿ ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಕ್ಷಣಗಣನೆ

ನರೇಂದ್ರ ಮೋದಿ ರವರು ಕಳೆದ ಬಾರಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎಲ್ಲ ರೀತಿಯ ವರ್ಗದ ಜನರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದಕ್ಕಾಗಿಯೇ ಇದೀಗ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿದ್ದಾರೆ, ಅದರಲ್ಲಿಯೂ ಮಧ್ಯಮವರ್ಗದವರ ಮೇಲೆ ಇದ್ದ ಬಾರಿ ತೆರಿಗೆಯನ್ನು ಇಳಿಸಿ, 5 ಲಕ್ಷದವರೆಗೆ ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂಬ ಆದೇಶ ಹೊರಡಿಸಿದ್ದು, ಇಡೀ ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ನಿರ್ಧಾರ. ಇದೀಗ ಅದೇ ಹಾದಿಯಲ್ಲಿ ನರೇಂದ್ರ ಮೋದಿ ಅವರು ಮತ್ತೊಂದು ದಿಟ್ಟ ಹೆಜ್ಜೆ ಇಡುವತ್ತ ಸಾಗಿದ್ದಾರೆ. ಈ ಬಾರಿ ವಿಶೇಷವಾಗಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್ ನೀಡಲಿರುವ ಸಿದ್ದರಾಗಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿವಸ ಸರ್ಕಾರಿ ಅಧಿಕಾರಿಗಳು ಹಾಗೂ ದೊಡ್ಡಮಟ್ಟದ ಕಾರ್ಖಾನೆಗಳ ಕಾರ್ಮಿಕರು ಪಡೆಯುತ್ತಿದ್ದ ಇಪಿಎಫ್ ಪಿಎಸ್ಐ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪ್ರತಿಯೊಬ್ಬ ಕಾರ್ಮಿಕನು ಪಡೆಯಬೇಕು ಎಂಬುದನ್ನು ಈ ಕಾನೂನು ಸಾರಲಿದೆ. ಒಂದು ವೇಳೆ ಅದೇ ನಡೆದಲ್ಲಿ ಕಾರ್ಮಿಕ ವರ್ಗದ ಜನರು ಮೋದಿ ರವರಿಗೆ ಪ್ರಶಂಸೆಗಳ ಸುರಿಮಳೆಯನ್ನು ಸುರಿಸಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಮೊದಲಿನಿಂದಲೂ ಹೂಡಿಕೆದಾರರನ್ನು ಆಕರ್ಷಿಸಿ ಲಕ್ಷಾಂತರ ಕೋಟಿಗಳಷ್ಟು ಹಣವನ್ನು ವಿದೇಶಗಳಿಂದ ತಂದು ಭಾರತದ ಅಭಿವೃದ್ಧಿಗೆ ನಾಂದಿ ಹಾಡಿರುವ ನರೇಂದ್ರ ಮೋದಿ ಅವರು ಇದೀಗ ಮತ್ತೊಮ್ಮೆ ಹೂಡಿಕೆದಾರರನ್ನು ಉತ್ತೇಜಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಸಹಕಾರ ಮಾಡಿ, ಉದ್ಯೋಗವಕಾಶಗಳನ್ನು ಹೆಚ್ಚಿಸಲು ನೂತನ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ಕಾರ್ಮಿಕ ಕಾನೂನು ಇಡೀ ದೇಶದೆಲ್ಲೆಡೆ ತ್ವರಿತವಾಗಿ ಜಾರಿಗೆ ಬಂದಲ್ಲಿ ಕಾರ್ಮಿಕರ ಬಾಳು ಬೆಳಗಲಿದೆ.ಪ್ರತಿಯೊಂದು ರಾಜ್ಯದಲ್ಲಿಯೂ ಈ ಕಾನೂನು ಜಾರಿಗೆ ತರುವ ಮುನ್ನ, ಕಾರ್ಮಿಕ ಸಂಘಟನೆಗಳನ್ನು ಸಂಪರ್ಕಿಸಿ, ಎಲ್ಲಾ ರೀತಿಯ ಬೇಡಿಕೆಗಳನ್ನು ಮನದಲ್ಲಿಟ್ಟುಕೊಂಡು ಹೊಸ ಕಾನೂನನ್ನು ಜಾರಿಗೆ ತರಲಾಗುವುದು.

ಪ್ರಸ್ತುತ ಕಾರ್ಮಿಕರಿಗಾಗಿ ಇರುವ 44 ಕಾನೂನುಗಳನ್ನು ಪ್ರತ್ಯೇಕವಾಗಿ ನಾಲ್ಕು ವರ್ಗಗಳಾಗಿ ವಿಂಗಡಿಸಿ, ಪ್ರತಿಯೊಬ್ಬ ಕಾರ್ಮಿಕನನ್ನು ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸುರಕ್ಷತೆ ಹಾಗೂ ಕಲ್ಯಾಣ ಮತ್ತು ಕೈಗಾರಿಕಾ ಸಂಬಂಧ ಎಂದು ಪ್ರತ್ಯೇಕ ವಿಭಾಗಗಳಿಗೆ ವರ್ಗೀಕರಣ ಮಾಡಲು ಇಂದು ನರೇಂದ್ರ ಮೋದಿರವರ ನೇತೃತ್ವದ ಸರ್ಕಾರ ಕೇಂದ್ರ ಗೃಹ ಸಚಿವರಾಗಿ ರುವ ಅಮಿತ್ ಶಾ ರವರ ನೇತೃತ್ವದಲ್ಲಿ ಹಲವಾರು ಸಚಿವರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗಿದೆ.ಸಚಿವೆ ನಿರ್ಮಲಾ ಸೀತಾರಾಮನ್, ಕಾರ್ಮಿಕ ಸಚಿವ ಸಂತೋಷ್ ಗಂಗವಾರ್, ವಾಣಿಜ್ಯ ಮತ್ತು ರೈಲ್ವೆ ಸಚಿವ ಪಿಯುಷ್ ಗೊಯಲ್ ಇತರರು ಭಾಗಿಯಾಗಿದ್ದ ಈ ಸಭೆಯಲ್ಲಿ ಮುಂಬರುವ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಇಡೀ ದೇಶದೆಲ್ಲೆಡೆ ಪ್ರಮುಖ ಕಾರ್ಮಿಕ ಒಕ್ಕೂಟಗಳನ್ನು ಸಂಪರ್ಕಿಸಿ, ಸಾಮಾಜಿಕ ಭದ್ರತೆ, ಇಪಿಎಫ್, ಇಎಸ್ಐ ಮತ್ತಿತರ ಕಾರ್ಮಿಕರಿಗೆ ಅನುಕೂಲವಾಗುವಂತಹ ವಿಷಯಗಳ ಆಧಾರದ ಮೇಲೆ ಹೊಸ ರೀತಿಯ ಕಾನೂನು ಜಾರಿಗೆ ತರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

Post Author: Ravi Yadav