ದೇಶ ಗೆದ್ದ ಮೋದಿಗೆ ಶಾರುಖಾನ್ ಟ್ವೀಟ್ ಮಾಡಿದ್ದೇನು ಗೊತ್ತಾ?? ವೈರಲ್ ಆದ ಶಾರುಖ್ ಟ್ವೀಟ್

ದೇಶ ಗೆದ್ದ ಮೋದಿಗೆ ಶಾರುಖಾನ್ ಟ್ವೀಟ್ ಮಾಡಿದ್ದೇನು ಗೊತ್ತಾ?? ವೈರಲ್ ಆದ ಶಾರುಖ್ ಟ್ವೀಟ್

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವು ಐತಿಹಾಸಿಕ ಗೆಲುವನ್ನು ದಾಖಲಿಸಿದೆ. ಹಲವಾರು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷದ ಜೊತೆ ಸೇರಿಕೊಂಡು ನರೇಂದ್ರ ಮೋದಿ ರವರ ಅಲೆಯನ್ನು ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಇನ್ನು ಐದು ವರ್ಷಗಳ ಕಾಲ ನರೇಂದ್ರಮೋದಿ ರವರು ಪ್ರಧಾನಮಂತ್ರಿಯಾಗಿ ಉಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಹಳ ಸರಳವಾಗಿ ಬಹುಮತವನ್ನು ಗಳಿಸಿಕೊಂಡಿರುವ ಬಿಜೆಪಿ ಪಕ್ಷವು ಮುನ್ನೂರರ ಗಡಿ ದಾಟಿ ಐದುವರ್ಷ ವಿರೋಧ ಪಕ್ಷ ವಿಲ್ಲದೆ ಆಡಳಿತ ನಡೆಸುವ ಅಧಿಕಾರವನ್ನು ಹೊಂದಿದೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕೊಳ್ಳಲು ಇರಬೇಕಾದ ಸಂಖ್ಯೆಯನ್ನು ಯಾವುದೇ ಪಕ್ಷಗಳು ಗೆದ್ದಿಲ್ಲ.

ಹೀಗಿರುವಾಗ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುವ ಹಲವಾರು ನಟರು ನರೇಂದ್ರ ಮೋದಿ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದೀಗ ಮೊದಲಿನಿಂದಲೂ ಕೆಲವು ಘಟನೆಗಳನ್ನು ಆಧರಿಸಿ ಶಾರುಖ್ ಖಾನ್ ರವರು ನರೇಂದ್ರಮೋದಿ ರವರ ವಿರೋಧಿ ಎಂದು ಜನರು ಭಾವಿಸುತ್ತಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿರವರ ಕುರಿತು ಶಾರುಖಾನ್ ಮಾಡಿರುವ ಈ ಟ್ವೀಟ್ ವೈರಲ್ ಆಗಿದೆ, ಭಾರತದ ಜನರು ಸ್ಪಷ್ಟ ಬಹು ಮತದ ಬಹುಮತವನ್ನು ಆಯ್ಕೆ ಮಾಡಿದ್ದಾರೆ. ಮತ್ತು ಈಗ ನಾವು ಹಿಂದೆ ಬಂದು ನಮ್ಮ ಆಶಯ ಮತ್ತು ಕನಸುಗಳು ಈಡೇರಿಕೆ ಗಳಿಗಾಗಿ ಅವರೊಂದಿಗೆ ಕೆಲಸ ಮಾಡಬೇಕಾಗಿದೆ. ಚುನಾವಣೆಯ ತೀರ್ಪು ಮತ್ತು ಪ್ರಜಾಪ್ರಭುತ್ವ ಗೆದ್ದಿದೆ, ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಶಾರುಖಾನ್ ರವರ ಈ ಟ್ವೀಟ್ ವೈರಲ್ ಆಗಿದ್ದು, ಪ್ರಜಾಪ್ರಭುತ್ವ ಗೆದ್ದಿದೆ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.