ಬಿಜೆಪಿಗೆ ಕರ್ನಾಟಕದಲ್ಲಿ ಆನೆಬಲ: ಪ್ರಭಾವಿ ಶಾಸಕನಿಂದ ಬೆಂಬಲ ! ಮೈತ್ರಿ ವಿಲವಿಲ

ಬಿಜೆಪಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಮುನ್ನೂರಕ್ಕೂ ಹೆಚ್ಚು ಸೀಟು ಪಡೆದುಕೊಂಡು ಅಧಿಕಾರದ ಗದ್ದುಗೆ ಏರಲು ಸಿದ್ಧವಾಗುತ್ತಿದೆ. ನರೇಂದ್ರ ಮೋದಿ ರವರು ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದರೆ ಇತ್ತ ಕರ್ನಾಟಕ ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆ ಏರಲು ಪ್ರಯತ್ನ ಪಟ್ಟಿತ್ತು. ಆದರೆ ಅಮಿತ್ ಶಾ ರವರು ಕರ್ನಾಟಕ ಬಿಜೆಪಿಯ ಚಟುವಟಿಕೆಗಳಿಗೆ ಬ್ರೇಕ್ ಹಾಕಿ, ನೀವಾಗಿಯೇ ಯಾವುದೇ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಕರೆತರಬೇಡಿ, ಬಂದವರು ಬರಲಿ ಇಲ್ಲವಾದಲ್ಲಿ ಮೈತ್ರಿ ಸರ್ಕಾರದ ಕಚ್ಚಾಟವನ್ನು ಜನರು ನೋಡಲಿ ಎಂದು ಕಿವಿಮಾತು ಹೇಳಿದ್ದರು. ತದನಂತರ ತಾನಾಗಿಯೇ ಸರ್ಕಾರ ಉರುಳಿದ ಬಳಿಕ ಚುನಾವಣೆಯನ್ನು ಎದುರಿಸಲು ಸಿದ್ಧರಾಗಿ ಎಂಬ ಆದೇಶ ಹೊರಡಿಸಿದ್ದರು.

ಈ ರೀತಿಯ ಆದೇಶಗಳು ಹೊರಬೀಳುತ್ತಿದ್ದಂತೆ ಕರ್ನಾಟಕ ಬಿಜೆಪಿ ಪಕ್ಷದ ನಾಯಕರು ಸಹ ಒಪ್ಪಿಗೆ ಸೂಚಿಸಿದ್ದರು. ಇದೀಗ ಆರಂಭದಲ್ಲಿ ದೋಸ್ತಿ ಗಳಿಗೆ ಬೆಂಬಲ ನೀಡಿ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದ ರಾಜ್ಯದ ಏಕೈಕ ಬಿಜೆಪಿ ಪಕ್ಷದ ಶಾಸಕರಾಗಿರುವ ಕೊಳ್ಳೇಗಾಲ ಕ್ಷೇತ್ರದ ಎನ್ ಮಹೇಶ್ ರವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆಗಳು ಇದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆಪರೇಷನ್ ಕಮಲ ನಡೆಯದೆಯೇ ಎನ್ ಮಹೇಶ್ ರವರು ಬಿಜೆಪಿ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿ, ಸಚಿವ ಸ್ಥಾನದ ಆಫರ್ ನೀಡಿದರೆ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿರುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಇದೀಗ ಕೇಳಿ ಬಂದಿದೆ. ಕೇಂದ್ರದಲ್ಲಿ ಬಿಜೆಪಿ ಹಾಗೂ ಬಿಎಸ್ಪಿ ಪಕ್ಷಗಳು ಬದ್ಧ ವೈರಿಗಳಾಗಿದ್ದರೂ ತಾವು ಕರ್ನಾಟಕ ರಾಜ್ಯದ ಮಟ್ಟಿಗೆ ಬಿಜೆಪಿ ಪಕ್ಷದ ಮೈತ್ರಿ ಮಾಡಿಕೊಳ್ಳಲು ಸಿದ್ಧವಿದ್ದೇವೆ ಎಂದು ಮುಂದೆ ಬಂದಿರುವುದಾಗಿ ಮಾಹಿತಿಗಳು ಲಭ್ಯವಾಗುತ್ತಿವೆ.

Post Author: Ravi Yadav