ಪ್ರಜ್ವಲ್ ಗೆ ಮಾತಿನ ಏಟು ಕೊಟ್ಟು ಸವಾಲೆಸೆದ ಪ್ರೀತಂಗೌಡ !

ಪ್ರಜ್ವಲ್ ಗೆ ಮಾತಿನ ಏಟು ಕೊಟ್ಟು ಸವಾಲೆಸೆದ ಪ್ರೀತಂಗೌಡ !

ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ನಿಮಗೆ ಮತ್ತೊಮ್ಮೆ ಹೇಳಬೇಕು ಎಂದು ಏನೂ ಇಲ್ಲ, ಅಕ್ಷರಸಹ ಪ್ರಾದೇಶಿಕ ಪಕ್ಷಗಳ ಜೊತೆ ರಾಷ್ಟ್ರೀಯ ಪಕ್ಷಗಳು ಬಿಜೆಪಿ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿವೆ. ಹಲವಾರು ಘಟಾನುಘಟಿಗಳು ಸೋಲನ್ನು ಕಂಡಿದ್ದಾರೆ, ಮತದಾರರು ಕೇವಲ ನರೇಂದ್ರ ಮೋದಿ ರವರ ಮುಖನೋಡಿ ಹಲವಾರು ಸಂಸದರು ಇಂದು ಗೆಲುವಿನ ನಗೆ ಬೀರುವಂತೆ ಮತ ನೀಡಿದ್ದಾರೆ, ಎಷ್ಟೋ ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಬಗ್ಗೆ ಸ್ಪಷ್ಟವಾಗಿ ತಿಳಿಯದೆ ಇದ್ದರೂ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಕಾರಣದಿಂದ ಹಲವಾರು ಜನರು ಮತನೀಡಿ ಘಟಾನುಘಟಿ ಅಭ್ಯರ್ಥಿಗಳನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿಗೆ ಸಂಸತ್ ಪ್ರವೇಶಿಸುವ ಭಾಗ್ಯ ನೀಡಿದ್ದಾರೆ. ಆ ಘಟಾನುಘಟಿಗಳ ಸಾಲಿನಲ್ಲಿ ಭಾರತದ ಮಾಜಿ ಪ್ರಧಾನಿಗಳು ದೇವೇಗೌಡರು ಸಹ ಸೋಲನ್ನು ಕಂಡಿದ್ದಾರೆ.

ತಮ್ಮ ಭದ್ರಕೋಟೆಯಾದ ಹಾಸನ ಕ್ಷೇತ್ರವನ್ನು ತಮ್ಮ ಕುಟುಂಬದ ಮತ್ತೊಂದು ಕುಡಿ ಮೊಮ್ಮಗ ಪ್ರಜ್ವಲ್ ರೇವಣ್ಣ ರವರಿಗಾಗಿ ಬಿಟ್ಟುಕೊಟ್ಟು ತಾವು ತುಮಕೂರಿನಿಂದ ಸ್ಪರ್ಧಿಸಿ ಸೋಲನ್ನು ಕಂಡಿದ್ದಾರೆ. ಇತ್ತ ತಾತನ ಸೋಲಿನಿಂದ ಪ್ರಜ್ವಲ್ ರೇವಣ್ಣ ರವರು ಸಹ ಮನ ನೊಂದಿದ್ದಾರೆ ಎಂಬ ಮಾಹಿತಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಜೆಡಿಎಸ್ ಪಕ್ಷವು ಬಿಜೆಪಿ ಪಕ್ಷದ ಮುಂದೆ ಬಾರಿ ಹೀನಾಯವಾಗಿ ಸೋಲನ್ನು ಕಂಡಿದೆ, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು ಸಹ ಕೇವಲ ಒಂದು ಸೀಟಿಗೆ ಜೆಡಿಎಸ್ ಪಕ್ಷ ತನ್ನ ಲೋಕಸಭಾ ಚುನಾವಣೆಯನ್ನು ಅಂತ್ಯಗೊಳಿಸಿದೆ. ಹೀಗಿರುವಾಗ ಪ್ರಜ್ವಲ್ ರೇವಣ್ಣ ರವರು ತಾವು ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೊಮ್ಮೆ ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಾಣಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ಕೇಳಿ ಬಂದಿತ್ತು, ಇತ್ತ ವಿರೋಧಪಕ್ಷದ ನಾಯಕರು ಮಾತ್ರ ಇದನ್ನು ಬಹಳ ಉತ್ಸಾಹದಿಂದ ಸ್ವಾಗತ ಮಾಡಿದ್ದಾರೆ. ಯಾಕೆಂದರೆ ಮತ್ತೊಮ್ಮೆ ಲೋಕಸಭಾ ಚುನಾವಣೆಯನ್ನು ಎದುರಿಸಿ ಹಾಸನ ಕ್ಷೇತ್ರವನ್ನು ಸಹ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರೀತಂ ಗೌಡ ರವರು ಪ್ರಜ್ವಲ್ ರೇವಣ್ಣ ಅವರಿಗೆ ಮಾತಿನಲ್ಲಿ ಏಟು ನೀಡಿ ಸವಾಲೆಸೆದಿದ್ದಾರೆ. ದೇವೇಗೌಡರ ಕರ್ಮಭೂಮಿ ಹಾಸನ, ಅಲ್ಲಿಂದ ದೇವೇಗೌಡರಿಗೆ ಸ್ಪರ್ಧೆ ಮಾಡಲು ರೇವಣ್ಣ, ಭವಾನಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ರವರು ಅವಕಾಶ ನೀಡಲಿಲ್ಲ. ದೇವೇಗೌಡರಿಗೆ ಹಾಸನ ಬಿಟ್ಟು ಹೋಗಲು ಇಷ್ಟವಿರಲಿಲ್ಲ, ಅವರ ಮನಸ್ಸು ನೋಯಿಸಿ ಹೊರಗೆ ಕಳಿಸಿದ್ದಾರೆ.

ಇದೀಗ ಅಫಿಡೆವಿಟ್ ಸಮಸ್ಯೆ ಇರುವುದರಿಂದ ತಮ್ಮ ಸ್ಥಾನ ಕಳೆದುಕೊಳ್ಳುವ ಮುನ್ನ ಆ ಸ್ಥಾನವನ್ನು ದೇವೇಗೌಡರಿಗೆ ಬಿಟ್ಟುಕೊಟ್ಟು ರಾಜೀನಾಮೆ ನೀಡಿ ಮಾನ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನೆಲ್ಲವನ್ನು ಹೇಳುವುದು ಬಿಟ್ಟು ಮೊದಲು ರಾಜೀನಾಮೆ ನೀಡಲಿ, ತದನಂತರ ಎಲ್ಲಿ ಬೇಕಾದರೂ ಹೋಗಲಿ, ತಾತನನ್ನು ಓಡಿಸಿರುವುದರಿಂದ ಮುಂದಿನ ಚುನಾವಣೆಯಲ್ಲಿ ಅವರಿಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಆದ ಕಾರಣಕ್ಕೆ ರಾಜೀನಾಮೆ ನೀಡುವ ಮಾತನಾಡುತ್ತಿದ್ದಾರೆ. ಮೊದಲು ರಾಜೀನಾಮೆ ನೀಡಲಿ ಎಂದು ಪ್ರೀತಂ ಗೌಡ ರವರು ಪ್ರತಿಕ್ರಿಯಿಸಿದ್ದಾರೆ.