ಬಿಗ್ ಬ್ರೇಕಿಂಗ್- ಮಹಾಘಟಬಂಧನ್ ಗೆ ಮರ್ಮಾಘಾತ – ಮೋದಿಗೆ ಬೆಂಬಲ ನೀಡಲು ಮತ್ತೊಂದು ಪಕ್ಷ ಸಜ್ಜು!

ಇನ್ನು ಕೇವಲ ಕೆಲವೇ ಕೆಲವು ದಿನಗಳಲ್ಲಿ ದೇಶದ ಭವಿಷ್ಯವನ್ನು ನಿರ್ಧರಿಸಿರುವ ಚುನಾವಣೆಯೆಂದೇ ಬಿಂಬಿತವಾಗುತ್ತಿರುವ 2019 ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಇಡೀ ದೇಶವೇ ಇಂದು ಚುನಾವಣೋತ್ತರ ಸಮೀಕ್ಷೆಯ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಫಲಿತಾಂಶಕ್ಕೂ ಮುನ್ನ ಬಿಜೆಪಿ ಪಕ್ಷಕ್ಕೆ ಮತ್ತೊಂದು ಪಕ್ಷ ಬೆಂಬಲ ನೀಡಲು ಸಿದ್ಧವಾಗಿದ್ದು ಮಹಾಘಟಬಂಧನ್ ರಂಗಕ್ಕೆ ಬಾರಿ ಆಘಾತ ಎದುರಾಗಿದೆ. ಈ ಮೂಲಕ ಬಿಜೆಪಿ ಮೈತ್ರಿಕೂಟಕ್ಕೆ ಮತ್ತೊಂದು ಪಕ್ಷ ಸೇರುವುದು ಖಚಿತವಾಗಿದ್ದು ನರೇಂದ್ರ ಮೋದಿ ಅವರು ಪ್ರಧಾನಿ ಮಂತ್ರಿಯ ಕುರ್ಚಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಬಹುಮತ ಸಾಧಿಸುತ್ತೇನೆ ಎಂಬ ಆತ್ಮವಿಶ್ವಾಸವನ್ನು ಹೊಂದಿರುವ ನರೇಂದ್ರ ಮೋದಿ ಅವರು ಒಂದು ವೇಳೆ ಬಿಜೆಪಿ ಪಕ್ಷವು ಮ್ಯಾಜಿಕ್ ನಂಬರ್ ಬಳಿ ಬಂದು ಸಂಖ್ಯಾಬಲ ಸಾಧಿಸುವಲ್ಲಿ ವಿಫಲವಾದರೆ ಈಗಾಗಲೇ ಒಡಿಸ್ಸಾ ರಾಜ್ಯದ ಪ್ರಮುಖ ಪಕ್ಷ ಬೆಂಬಲ ನೀಡಲು ಸಿದ್ಧವಾದಂತೆ ಕಾಣುತ್ತಿದೆ, ಇದರ ಜೊತೆಗೆ ಈಗ ಆಂಧ್ರ ಪ್ರದೇಶದಲ್ಲಿ ಕನಿಷ್ಠ ಹದಿಮೂರರಿಂದ ಹದಿನಾರು ಸೀಟುಗಳನ್ನು ಗೆಲ್ಲುವ ಎಲ್ಲಾ ಸಾಧ್ಯತೆಗಳನ್ನು ಹೊಂದಿರುವ ವೈಎಸ್ಸಾರ್ ಪಕ್ಷದ ಜಗನ್ ಮೋಹನ್ ರೆಡ್ಡಿ ರವರು ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುವುದು ಖಚಿತ ವಾಗಿದೆ. ಈ ಮೂಲಕ ನರೇಂದ್ರ ಮೋದಿರವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತವಾದಂತೆ ಕಾಣುತ್ತಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.

Post Author: Ravi Yadav