ಹೊರ ಬಿತ್ತು ಮಹಾ ಸಮೀಕ್ಷೆ- ಮೋದಿ ಮತ್ತೊಮ್ಮೆ ಖಚಿತ, ಮೋದಿ ಸುನಾಮಿಗೆ ಕೊಚ್ಚಿ ಕೊಂಡು ಹೋದ ವಿರೋಧ ಪಕ್ಷಗಳು !

2019 ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಪೂರ್ಣಗೊಂಡಿದ್ದು, ಇದೀಗ ಇಡೀ ವಿಶ್ವವೇ ಫಲಿತಾಂಶಕ್ಕಾಗಿ ಕಾದು ಕುಳಿತಿರುವ ಭಾರತದ ಭವಿಷ್ಯವನ್ನು ನಿರ್ಧರಿಸುವ ದೇಶದ ಭವಿಷ್ಯದ ಚುನಾವಣೆಯ ಎಕ್ಸಿಟ್ ಪೋಲ್ ಗಳು ಹೊರಬಿದ್ದಿವೆ. ವಿರೋಧ ಪಕ್ಷಗಳು ಎಷ್ಟೇ ಸರ್ಕಸ್ ಮಾಡಿದರೂ ನರೇಂದ್ರ ಮೋದಿಯವರ ಅಲೆಯನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದು ಚುನಾವಣೋತ್ತರ ಸಮೀಕ್ಷೆ ಗಳಲ್ಲಿ ಕಂಡು ಬಂದಿದೆ. ಈ ಬಾರಿ ನರೇಂದ್ರ ಮೋದಿ ಅವರ ಅಲೆ ಕೇವಲ ಅಲೆಯಾಗಿ ಉಳಿದುಕೊಂಡಿಲ್ಲ ಬದಲಾಗಿ ನರೇಂದ್ರ ಮೋದಿ ಅಲೆಯೂ ಸುನಾಮಿಯಾಗಿ ಪರಿವರ್ತನೆಗೊಂಡು ವಿರೋಧ ಪಕ್ಷಗಳನ್ನು ಅಕ್ಷರ ಸಹ ಕೊಚ್ಚಿಕೊಂಡು ಹೋಗುವಂತೆ ಮಾಡಿದೆ.

ಕಳೆದ ಬಾರಿ ಹಲವಾರು ಸಮೀಕ್ಷೆಗಳಲ್ಲಿ ಬಿಜೆಪಿ ಪಕ್ಷ ಬಹುಮತ ಸಾಧಿಸಲು ವಿಫಲವಾಗಿತ್ತು ಆದರೆ ಚುನಾವಣಾ ಫಲಿತಾಂಶದ ನಂತರ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಏರಿತು. ಈ ಬಾರಿ ಚುನಾವಣಾಪೂರ್ವ ಸಮೀಕ್ಷೆಯಲ್ಲಿಯೇ ಬಹುಮತವನ್ನು ಸಾಧಿಸಿರುವ ಬಿಜೆಪಿ ಪಕ್ಷವು ಹಲವಾರು ಸಮೀಕ್ಷೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಸೀಟುಗಳನ್ನು ಪಡೆಯುವುದು ಖಚಿತ ವಾಗಿದೆ. ಈ ಮೂಲಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಭಾರತವನ್ನು ಐದು ವರ್ಷಗಳ ಕಾಲ ಮುನ್ನಡೆಸುವುದು ಖಚಿತವಾದಂತೆ ಕಾಣುತ್ತಿದೆ. ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಹರ್ಷೋದ್ಗಾರ ಮುಗಿಲೆತ್ತರಕ್ಕೆ ಏರಿದ್ದು ನಮೋ ಭಕ್ತರು ಸಂಭ್ರಮದಲ್ಲಿ ತೊಡಗಿಕೊಂಡಿದ್ದಾರೆ.

ಒಟ್ಟಿನಲ್ಲಿ ಹಲವಾರು ಕುತೂಹಲಗಳಿಗೆ ಚುನಾವಣೋತ್ತರ ಸಮೀಕ್ಷೆ ತೆರೆ ಎಳೆದಿದ್ದು ನರೇಂದ್ರ ಮೋದಿರವರು ಪ್ರಧಾನಿಯಾಗುವುದು ಖಚಿತವಾಗಿದೆ. ಇದೀಗ ಎಕ್ಸಿಟ್ ಪೋಲ್ ಗಳು ಹೊರಬಿದ್ದಿದ್ದು  ಸಂಪೂರ್ಣ ವಿವರಗಳನ್ನು ಕೆಳಗಡೆ ನೀಡಲಾಗಿದೆ ಒಮ್ಮೆ ಓದಿ, ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗಳಲ್ಲಿ ತಿಳಿಸಿ.

2019 ರ ಚುನಾವನ್ನೊತ್ತರ ಸಮೀಕ್ಷೆ: 

News X: ಬಿಜೆಪಿ ಮೈತ್ರಿಕೂಟ:- 298, ಕಾಂಗ್ರೆಸ್ ಮೈತ್ರಿಕೂಟ:- 118, ಇತರೆ:- 126

Republic Jan ki baath: ಬಿಜೆಪಿ ಮೈತ್ರಿಕೂಟ:- 295-315, ಕಾಂಗ್ರೆಸ್ ಮೈತ್ರಿಕೂಟ:- 9122-125, ಇತರೆ:- 125-102

India TV-C Voter: ಬಿಜೆಪಿ ಮೈತ್ರಿಕೂಟ:- 287, ಕಾಂಗ್ರೆಸ್ ಮೈತ್ರಿಕೂಟ:- 128, ಇತರೆ:- 127

Times now and VMR: ಬಿಜೆಪಿ ಮೈತ್ರಿಕೂಟ:- 306, ಕಾಂಗ್ರೆಸ್ ಮೈತ್ರಿಕೂಟ:- 132, ಇತರೆ:- 104

ABP : ಬಿಜೆಪಿ ಮೈತ್ರಿಕೂಟ:- 336, ಕಾಂಗ್ರೆಸ್ ಮೈತ್ರಿಕೂಟ:- 55, ಇತರೆ:- 148

News Nation: ಬಿಜೆಪಿ ಮೈತ್ರಿಕೂಟ:-282-290, ಕಾಂಗ್ರೆಸ್ ಮೈತ್ರಿಕೂಟ:- 118-126, ಇತರೆ:- 130-138

NDTV: ಬಿಜೆಪಿ ಮೈತ್ರಿಕೂಟ:-306, ಕಾಂಗ್ರೆಸ್ ಮೈತ್ರಿಕೂಟ:- 132, ಇತರೆ:- 104

News 24- Chanakya: ಬಿಜೆಪಿ ಮೈತ್ರಿಕೂಟ:-340, ಕಾಂಗ್ರೆಸ್ ಮೈತ್ರಿಕೂಟ:- 70, ಇತರೆ:- 133

Post Author: Ravi Yadav