ಡಿಕೆಶಿಗೆ ಗಂಡಸ್ತನ ಇಲ್ಲ ಎಂದು ಯತ್ನಾಳ್ ಹೇಳಿದ್ದು ಯಾಕೆ ಗೊತ್ತಾ??

ಕರ್ನಾಟಕದಲ್ಲಿ ದೋಸ್ತಿ ಪಕ್ಷಗಳ ಸರ್ಕಾರ ಉಳಿಯಬೇಕು ಎಂದರೆ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪ ಚುನಾವಣೆಯನ್ನು ಗೆಲ್ಲಲೇ ಬೇಕು ಎಂಬ ಲೆಕ್ಕಾಚಾರ ರಾಜಕೀಯ ಪಂಡಿತರದ್ದು. ಇದೇ ಕಾರಣಕ್ಕಾಗಿ ತಮ್ಮ ಪ್ರತಿಷ್ಠೆಯನ್ನು ಕಣಕ್ಕೆ ಇಟ್ಟು ಹೋರಾಡುತ್ತಿರುವ ದೋಸ್ತಿ ಪಕ್ಷಗಳಿಗೆ ಶಾಕ್ ನೀಡಲು ಅಧಿಕಾರಕ್ಕಾಗಿ ಹವಣಿಸುತ್ತಿರುವ ಬಿಜೆಪಿ ಪಕ್ಷವು ಇನ್ನಿಲ್ಲದ ತಯಾರಿಯನ್ನು ನಡೆಸುತ್ತಿರುವ ಕಾರಣ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯೂ ಇನ್ನಿಲ್ಲದ ಕುತೂಹಲವನ್ನು ಮೂಡಿಸುತ್ತಾ ಮುಂದೆ ಸಾಗುತ್ತಿದೆ. ಮತದಾನಕ್ಕೆ ಇನ್ನು ಕೇವಲ ಎಂಟು ದಿನಗಳು ಬಾಕಿ ಉಳಿದಿರುವ ಕಾರಣ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿಕೊಂಡು ಪ್ರಚಾರ ಮಾಡುತ್ತಿವೆ.

ಇದೇ ರೀತಿ ಪ್ರಚಾರ ಮಾಡುವ ಸಮಯದಲ್ಲಿ ಉತ್ತರ ಕರ್ನಾಟಕದ ಬಿಜೆಪಿ ಪಕ್ಷದ ಫೈಯರ್ ಬ್ರಾಂಡ್ ಖ್ಯಾತಿಯ ಯತ್ನಾಳ್ ರವರು ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊದಲಿನಿಂದಲೂ ಡಿಕೆ ಶಿವಕುಮಾರ್ ರವರು ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರು ಇಲ್ಲದ ಕಾರಣ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಸೆಳೆಯಲು ಲಕ್ಷ ಲಕ್ಷ ಹಣ ಸುರಿಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಬಿಜೆಪಿ ಪಕ್ಷದ ಪ್ರಭಾವಿ ನಾಯಕಿ ಶೋಭಾ ಕರಂದ್ಲಾಜೆ ರವರು ಸಹ ಇದೇ ರೀತಿ ಆರೋಪಗಳನ್ನು ಡಿಕೆ ಶಿವಕುಮಾರ್ ಅವರ ಮೇಲೆ ಹೊರಿಸಿದ್ದರು.

ಈಗ ಮತ್ತೊಮ್ಮೆ ಇದೇ ಆರೋಪವನ್ನು ಮಾಡಿ ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಯತ್ನಾಳ್ ರವರು ಡಿಕೆ ಶಿವಕುಮಾರ್ ರವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾರಿನ ಟೈಯರ್ ನಲ್ಲಿ ಹಣ ತುಂಬಿಕೊಂಡು ಬಂದಂತೆ ಈ ಬಾರಿಯೂ ಸಹ ಹಣ ತುಂಬಿಕೊಂಡು ಬಂದು ಕುಂದಗೋಳ ಜನರನ್ನು ಖರೀದಿ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಜನರು ಬಿಕರಿಗೆ ಬಿದ್ದಿಲ್ಲ, ಹಣದಿಂದ ಚುನಾವಣೆ ನಡೆಸಲು ಮುಂದಾಗಿರುವ ಡಿಕೆ ಶಿವಕುಮಾರ್ ಅವರಿಗೆ ಜನರು ಸರಿಯಾದ ಉತ್ತರ ನೀಡಲಿದ್ದಾರೆ.

ಡಿಕೆ ಶಿವಕುಮಾರ್ ರವರು ಹಣ ಬಲದಿಂದ ಏನನ್ನು ಬೇಕಾದರೂ ಖರೀದಿ ಮಾಡಬಹುದು, ಆದರೆ ಗಂಡು ಮೆಟ್ಟಿದ ನಾಡಿನ ಜನರನ್ನು ಖರೀದಿ ಮಾಡುವ ಗಂಡಸ್ತನ ಡಿಕೆ ಶಿವಕುಮಾರ್ ಅವರಿಗೆ ಇಲ್ಲ ಎಂದು ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಯತ್ನಾಳ್ ಅವರು ಒಂದು ವರ್ಷದಿಂದ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ರವರಿಗೆ ಕೇವಲ ಹಾಸನ, ಮಂಡ್ಯ ಕ್ಷೇತ್ರಗಳು ಮಾತ್ರ ಕಾಣಸಿಗುತ್ತವೆ ಆ ಭಾಗದ ಜನರು ಮಾತ್ರ ರೈತರಾ? ಕುಂದಗೋಳದಲ್ಲಿ ರೈತರು ಇಲ್ಲವೇ? ಅವರ ಕಷ್ಟ ಗಳು ಯಾಕೆ ಕುಮಾರಸ್ವಾಮಿ ರವರಿಗೆ ಕಾಣಿಸುತ್ತಿಲ್ಲ. ರೈತರ ಸಾಲ ಮನ್ನಾ ಮಾಡುವಲ್ಲಿ ಕುಮಾರಸ್ವಾಮಿ ಅವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಇದನ್ನು ಪ್ರಶ್ನೆ ಮಾಡುವ ಧೈರ್ಯ ಕಾಂಗ್ರೆಸ್ ಪಕ್ಷದವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸುವ ಮೂಲಕ ತಮ್ಮ ಚುನಾವಣಾ ಪ್ರಚಾರವನ್ನು ಮುಂದುವರಿಸಿದ್ದಾರೆ.

Post Author: Ravi Yadav