ನರೇಂದ್ರ ಮೋದಿ ರವರ ಆಸೆ ಏನಾಗಿತ್ತು ಗೊತ್ತಾ?? ಪ್ರಧಾನಿಯಾಗುವುದು ಅಲ್ಲವೇ ಅಲ್ಲ

ನರೇಂದ್ರ ಮೋದಿ ಅವರು ಜೀವನದ ಬಗ್ಗೆ ಎಲ್ಲರಿಗೂ ಈಗಾಗಲೇ ತಿಳಿದಿದೆ. ಒಬ್ಬ ಸಾಮಾನ್ಯ ಟೀ ಮಾರುವ ವ್ಯಕ್ತಿ, ರಾಜಕೀಯದಲ್ಲಿ ಹಂತಹಂತವಾಗಿ ಬೆಳೆದು ಗುಜರಾತ್ ರಾಜ್ಯದ ಸಿಎಂ ಆಗಿ ಕಾರ್ಯನಿರ್ವಹಿಸಿದ ನಂತರ ಇಡೀ ದೇಶದಲ್ಲೆಡೆ ನರೇಂದ್ರ ಮೋದಿ ಚಾಯ್ ವಾಲಾ ಎಂಬ ಅಲೆಯನ್ನು ಸೃಷ್ಟಿಸಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶಗಳಲ್ಲಿ ಒಂದಾಗಿರುವ ಭಾರತದ ಪ್ರಧಾನ ಮಂತ್ರಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ತಾನು ಎಂದು ರಾಜಕೀಯ ವ್ಯಕ್ತಿಯಾಗಿ ಬೆಳೆಯಬೇಕು ಎಂದು ನರೇಂದ್ರ ಮೋದಿರವರು ಆಸೆ ಪಟ್ಟಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಇದೀಗ ನರೇಂದ್ರ ಮೋದಿರವರ ನಿಜವಾದ ಕನಸು ಏನಾಗಿತ್ತು ಎಂಬುದು ಹೊರಬಿದ್ದಿದೆ..

ರಾಜಕೀಯ ವಿಷಯಗಳನ್ನು ಹೊರತುಪಡಿಸಿ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಜೊತೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರು ಎಲ್ಲರೂ ಅಚ್ಚರಿ ಬೀಳುವಂತಹ ಹಲವಾರು ಸಂಗತಿಗಳನ್ನು ಹೊರಹಾಕಿದ್ದಾರೆ. ಇದೇ ಸಮಯದಲ್ಲಿ ನಿಮ್ಮ ಕನಸು ಏನಾಗಿತ್ತು ಎಂದು ಅಕ್ಷಯ್ ಕುಮಾರ್ ರವರು ಪ್ರಶ್ನಿಸಿದಾಗ, ನಾನು ಭಾರತೀಯ ಸೇನೆಯನ್ನು ಸೇರಿ ಸೈನಿಕನಾಗಿ ಕಾರ್ಯನಿರ್ವಹಿಸಬೇಕು, ದಂಡನಾಯಕನಾಗಿ ಕಾರ್ಯನಿರ್ವಹಿಸಿ ಭಾರತದ ರಕ್ಷಣೆ ಮಾಡಬೇಕು ಎಂಬ ಕನಸಿತ್ತು ನಾನು ಎಂದಿಗೂ ಪ್ರಧಾನಿಯಾಗಬೇಕು ಎಂದು ಆಸೆ ಪಟ್ಟಿಲ್ಲ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

Post Author: Ravi Yadav