ಮೋದಿ ರವರನ್ನು ಭೇಟಿಯಾದ ಪ್ರತಿ ಬಾರಿ ಒಬಾಮಾ ಏನೆಂದು ಪ್ರಶ್ನೆ ಮಾಡುತ್ತಾರೆ ಗೊತ್ತಾ??

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದು ಕೊಂಡಿರುವ ಅಮೇರಿಕಾ ದೇಶವು ಭಾರತದ ಜೊತೆ ಹಲವಾರು ವ್ಯಾಪಾರ ವ್ಯವಹಾರಗಳಿಗೆ ಒತ್ತು ನೀಡಿದೆ. ಭಾರತದ ಜೊತೆ ಸದಾ ಇದೇ ರೀತಿಯ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಲು ಅಮೇರಿಕಾ ದೇಶವು ಇಚ್ಚಿಸುತ್ತದೆ ಎಂದು ಈಗಾಗಲೇ ಹಲವಾರು ಬಾರಿ ಮಾಜಿ ಅಧ್ಯಕ್ಷರಾದ ಒಬಾಮಾ ಹಾಗೂ ಇಂದಿನ ಅಧ್ಯಕ್ಷರಾಗಿರುವ ಟ್ರಂಪ್ ರವರು ಸಹ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ನರೇಂದ್ರ ಮೋದಿ ರವರ ನೆಚ್ಚಿನ ಗೆಳೆಯ ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮಾ ರವರು ಭಾರತ ಹಾಗೂ ಅಮೆರಿಕ ಸಂಬಂಧವನ್ನು ಮೆಚ್ಚಿಕೊಂಡು ಹಲವಾರು ಬಾರಿ ಭಾರತವನ್ನು ಹೊಗಳಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ನರೇಂದ್ರ ಮೋದಿರವರು ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸಲು ಇನ್ನಿಲ್ಲದ ಪ್ರಯತ್ನ ವನ್ನು ಮಾಡುವಾಗ ಒಬಾಮಾ ಅವರು ಸಹ ಭಾರತದ ಜೊತೆ ಕೈಜೋಡಿಸಿ ದನ್ನು ನಾವು ಇಲ್ಲಿ ಸ್ಮರಿಸಬಹುದು.

ಈ ರೀತಿಯ ಸ್ನೇಹಜೀವಿ ಗಳಾಗಿರುವ ಒಬಾಮಾ ಹಾಗೂ ನರೇಂದ್ರ ಮೋದಿರವರು ಹಲವಾರು ಬಾರಿ ಎರಡು ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಭೇಟಿಯಾಗಿದ್ದಾರೆ. ಈ ರೀತಿ ಭೇಟಿಯಾದ ಪ್ರತಿಯೊಂದು ಸಮಯದಲ್ಲೂ ಒಬಾಮಾ ರವರು ನರೇಂದ್ರ ಮೋದಿ ರವರನ್ನು ನೀವು ಯಾಕೆ ಹೆಚ್ಚು ಹೊತ್ತು ಮಲಗುವುದಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ದೇಹಕ್ಕೆ ಕನಿಷ್ಠ ದಿನಕ್ಕೆ ಏಳು ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಅವಶ್ಯಕ, ಆದರೆ ನೀವು ಯಾಕೆ ಕೇವಲ ಮೂರರಿಂದ ನಾಲ್ಕು ಗಂಟೆ ನಿದ್ದೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ ಎಂಬುದನ್ನು ನರೇಂದ್ರ ಮೋದಿ ಅವರು ಇಂದು ಅಕ್ಷಯ್ ಕುಮಾರ್ ರವರ ಜೊತೆ ನಡೆದ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ.

Post Author: Ravi Yadav