ಡಿಕೆಶಿಗೆ ಖಡಕ್ ಎಚ್ಚರಿಕೆ ನೀಡಿ ತೊಡೆತಟ್ಟಿದ ಎಂಬಿ ಪಾಟೀಲ್- ಚುನಾವಣೆ ಮುಗಿದ ಮೇಲೆ ತೋರಿಸ್ತೇನೆ

ಡಿಕೆಶಿಗೆ ಖಡಕ್ ಎಚ್ಚರಿಕೆ ನೀಡಿ ತೊಡೆತಟ್ಟಿದ ಎಂಬಿ ಪಾಟೀಲ್

ಇತ್ತೀಚಿಗೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರತಿಯೊಬ್ಬ ನಾಯಕರ ಹೇಳಿಕೆಗಳು ಬಹಳ ಮುಖ್ಯವಾಗಿರುತ್ತದೆ. ಮತಗಳನ್ನು ಪಡೆಯಲು ನಾಯಕರು ಇನ್ನಿಲ್ಲದ ಆಶ್ವಾಸನೆ ಹಾಗೂ ತಮ್ಮ ಪಕ್ಷದ ಬದ್ಧತೆಯ ಬಗ್ಗೆ ಮಾತುಗಳನ್ನು ಆಡುತ್ತಾರೆ. ಇದೇ ನಿಟ್ಟಿನಲ್ಲಿ ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ಬಾರಿ ವಿವಾದಗಳನ್ನು ಸೃಷ್ಟಿಸಿದೆ. ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷದ ನಿಲುವನ್ನು ಡಿಕೆ ಶಿವಕುಮಾರ್ ಅವರು ಬದಲಿಸಿ ಹೇಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.ಲಿಂಗಾಯಿತ ಧರ್ಮದ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಬೇರೆಯಾಗಿದ್ದು ಡಿಕೆ ಶಿವಕುಮಾರ್ ಅವರು ಮತಗಳನ್ನು ಸೆಳೆಯಲು ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವನ್ನು ಬದಲಿಸಿ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಎಂಬಿ ಪಾಟೀಲ್ ರವರು ಪದೇ ಪದೇ ಲಿಂಗಾಯತ ಧರ್ಮದ ವಿಚಾರದಲ್ಲಿ ಕೆಣಕಿದರೆ ಸುಮ್ಮನೆ ಕೂರುವುದಿಲ್ಲ ಎಂದು ಏಕವಚನದಲ್ಲಿ ಡಿಕೆ ಶಿವಕುಮಾರ್ ಅವರ ವಿರುದ್ಧ ಕಿಡಿಕಾರಿದ್ದಾರೆ. ಧರ್ಮದ ವಿಚಾರದಲ್ಲಿ ಕ್ಷಮೆ ಕೇಳಲು ಅವನ್ಯಾರು ಎಂದು ಪ್ರಶ್ನಿಸಿ ಲಿಂಗಾಯತ ಧರ್ಮಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಕ್ಷಮೆ ಕೇಳಲು ಅಧಿಕಾರ ಕೊಟ್ಟದ್ದು ಯಾರು? ಮೊದಲು ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿಕೊಳ್ಳಲಿ, ಡಿಕೆ ಶಿವಕುಮಾರ್ ಅವರ ಉದ್ದೇಶ ಏನು ಎಂಬುದು ನನಗೆ ಗೊತ್ತು ಅದನ್ನು ಬಹಿರಂಗ ಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುತ್ತದೆ. ಚುನಾವಣೆ ಇರುವುದರಿಂದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುವುದಿಲ್ಲ, ಚುನಾವಣೆ ಮುಗಿದ ಮೇಲೆ ನಾನೇ ಮಾಧ್ಯಮಗಳ ಮುಂದೆ ಬಂದು ಡಿಕೆ ಶಿವಕುಮಾರ್ ಅವರ ನೀತಿಯನ್ನು ಬಹಿರಂಗ ಪಡಿಸುತ್ತೇನೆ ಎಂದು ತೊಡೆ ತಟ್ಟಿದ್ದಾರೆ.