ನರೇಂದ್ರ ಮೋದಿ ಅವರಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ- ಮೋದಿ ಕಂಡು ವಿಶ್ವವೇ ಬೆರಗು

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಬಹಳ ಹೆಚ್ಚಳವಾಗಿದೆ. ಇಡೀ ಭಾರತದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ಕಾತರದಿಂದ ಕಾದು ಕುಳಿತಿದೆ, ವಿಶ್ವದ ಬಲಾಢ್ಯ ರಾಷ್ಟ್ರಗಳು ಸಹ ನರೇಂದ್ರ ಮೋದಿರವರ ರಾಜತಾಂತ್ರಿಕತೆಗೆ ಈಗಾಗಲೇ ಮರುಳಾಗಿದ್ದಾರೆ. ಇಷ್ಟೇ ಅಲ್ಲದೆ ನರೇಂದ್ರ ಮೋದಿ ರವರ ರಾಜತಾಂತ್ರಿಕತೆ ಗೆ ಮರುಳಾಗಿ ಈಗಾಗಲೇ ವಿಶ್ವದ ಬಲಾಢ್ಯ ರಾಷ್ಟ್ರಗಳು ನರೇಂದ್ರ ಮೋದಿ ಅವರನ್ನು ಹಲವಾರು ಪ್ರಶಸ್ತಿ ಗಳ ಮೂಲಕ ಗೌರವಿಸಿದ್ದಾರೆ.

ಇದೀಗ ವಿಶ್ವದ ಬಲಾಡ್ಯ ರಾಷ್ಟ್ರಗಳಲ್ಲಿ ಪ್ರಮುಖ ರಾಷ್ಟ್ರವಾದ ರಷ್ಯಾ ದೇಶವು ನರೇಂದ್ರ ಮೋದಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದೆ. ಇದರಿಂದ ಭಾರತದ ವರ್ಚಸ್ಸು ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಹೆಚ್ಚಾಗಿದ್ದು, ನರೇಂದ್ರ ಮೋದಿ ರವರ ಚಾಕಚಕ್ಯತೆಗೆ ಏನೆಂಬುದು ಇಡೀ ವಿಶ್ವಕ್ಕೆ ಸಾರಿ ದಂತಾಗಿದೆ. ಈ ಮೂಲಕ ರಷ್ಯಾದ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾರತದ ಹೆಮ್ಮೆಯ ಪ್ರಧಾನ ಸೇವಕರು ಎನಿಸಿಕೊಂಡಿರುವ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ.

ರಷ್ಯಾ ದೇಶವು ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಭಾರತದ ಜೊತೆ ಸಂಬಂಧವನ್ನು ಬಲಪಡಿಸಲು ಕಾತರದಿಂದ ಕಾಯುತ್ತಿದೆ. ಅದರಲ್ಲಿ ಪ್ರಮುಖವಾಗಿ ದೇಶದ ಭದ್ರತೆಗೆ ಬೇಕಾಗಿರುವಂತಹ  ಆಯುಧಗಳು ಹಾಗೂ  ಸೇನೆಗೆ ಸಕಲ ಸೌಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ರಷ್ಯಾದ ಜೊತೆ ಈಗಾಗಲೇ ನರೇಂದ್ರ ಮೋದಿಯವರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದೇ ಕಾರಣಕ್ಕಾಗಿ ನರೇಂದ್ರ ಮೋದಿರವರು ರಷ್ಯಾದ ಜೊತೆ ಸಂಬಂಧ ವನ್ನು ಬಲಪಡಿಸಲು ಕೈಗೊಂಡ ಕ್ರಮಗಳು ಹಾಗೂ ಸಹಭಾಗಿತ್ವಕ್ಕೆ ರಷ್ಯಾ ದೇಶವು ಇಂದು ನರೇಂದ್ರ ಮೋದಿ ಅವರಿಗೆ ಅತ್ಯುನ್ನತ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

ಇದು ರಷ್ಯಾದ ಅಧ್ಯಕ್ಷರಾಗಿರುವ ಪುಟಿನ್ ರವರು ನರೇಂದ್ರ ಮೋದಿ ಅವರಿಗೆ ‘ಆರ್ಡರ್‌ ಆಫ್‌ ಸೇಂಟ್‌ ಆಂಡ್ರ್ಯೂ ದ ಅಪೋಸ್ಲ್’ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ಸಾರ್ವಜನಿಕ ರಂಗದಲ್ಲಿರುವ ವ್ಯಕ್ತಿಗಳಿಗೆ ಮತ್ತು ವಿಜ್ಞಾನ ಸಂಸ್ಕೃತಿ ಹಾಗೂ ಕಲಾರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿ ರಷ್ಯಾ ದೇಶದ ಪ್ರಗತಿ ಹಾಗೂ ವೈಭವವನ್ನು ಹೆಚ್ಚು ಮಾಡುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ನರೇಂದ್ರ ಮೋದಿರವರು ಈ ಪ್ರಶಸ್ತಿಗೆ ಭಾಜನರಾಗಿರುವುದು ಭಾರತೀಯರಿಗೆ ಒಂದು ಹೆಮ್ಮೆಯ ಸಂಗತಿಯಾಗಿದೆ. ನೀವು ಯಾರ ಅಭಿಮಾನಿಗಳೇ ಆಗಿರಿ ನರೇಂದ್ರ ಮೋದಿರವರು ಅಧಿಕಾರಕ್ಕೆ ಬಂದಮೇಲೆ ಭಾರತದ ವರ್ಚಸ್ಸು ಅಂತಾರಾಷ್ತ್ರೀಯ ಮಟ್ಟದಲ್ಲಿ ಬಹಳ ಹೆಚ್ಚಾಗಿದೆ ಎಂಬುದು ಸತ್ಯ.

Post Author: Ravi Yadav