ಬಿಗ್ ನ್ಯೂಸ್- ನಿಖಿಲ್ ಗೆ ಬಿಗ್ ಶಾಕ್, ಕುಮಾರಸ್ವಾಮಿ ಒತ್ತಡಕ್ಕೆ ಮಣಿದರೇ ಚುನಾವಣಾಧಿಕಾರಿ- ಹೈ ಕೋರ್ಟ್ ಗೆ ಚೆಂಡು? ನಿಖಿಲ್ ಭವಿಷ್ಯ ಮತ್ತಷ್ಟು ಕಗ್ಗಂಟು.

ಬಿಗ್ ನ್ಯೂಸ್- ನಿಖಿಲ್ ಗೆ ಬಿಗ್ ಶಾಕ್, ಕುಮಾರಸ್ವಾಮಿ ಒತ್ತಡಕ್ಕೆ ಮಣಿದರೇ ಚುನಾವಣಾಧಿಕಾರಿ- ಹೈ ಕೋರ್ಟ್ ಗೆ ಚೆಂಡು? ನಿಖಿಲ್ ಭವಿಷ್ಯ ಮತ್ತಷ್ಟು ಕಗ್ಗಂಟು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆಯಷ್ಟೇ ನಿಖಿಲ್ ಕುಮಾರಸ್ವಾಮಿ ರವರಿಗೆ ಬಹು ದೊಡ್ಡ ಆತಂಕ ಎದುರಾಗಿತ್ತು. ಚುನಾವಣಾ ಆಯೋಗದ ಅಧಿಕಾರಿಗಳು ನೇರವಾಗಿ ಕುಮಾರಸ್ವಾಮಿ ಹಾಗೂ ಮಂಡ್ಯ ಜಿಲ್ಲೆಯ ಚುನಾವಣೆ ಅಧಿಕಾರಿ/ಜಿಲ್ಲಾಧಿಕಾರಿ ಮಂಜುಶ್ರೀ ರವರ ವಿರುದ್ಧ ತನಿಖೆ ನಡೆಸಲು ಆಗಮಿಸಿದ್ದರು. ಇದೇ ಪ್ರಕರಣದಲ್ಲಿ ಇದೀಗ ಒಂದು ಕಡೆ ಮುಖ್ಯಮಂತ್ರಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಮಾತು ಮತ್ತಷ್ಟು ಬಲವಾಗಿ ಕೇಳಿಬರುತ್ತಿದೆ.ಯಾಕೆಂದರೆ ಮಂಜುಶ್ರೀ ರಾವ್ರ ಹಾಗು ಚುನಾವಣಾ ಅಧಿಕಾರಿಗಳ ನಡೆ ಅಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಳೆ ಮಾದರಿಯಲ್ಲಿ ನಿಖಿಲ್ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಸುಮಲತಾ ರವರ ಅಭಿಮಾನಿಗಳು ಚುನಾವಣಾ ಆಯೋಗದ ಮೊರೆ ಹೋಗಿದ್ದರು. ತನಿಖೆ ಆರಂಭಿಸಿದ ಚುನಾವಣಾ ಅಧಿಕಾರಿಗಳು ನಿಖಿಲ್ ರವರ ನಾಮಪತ್ರದ ವೇಳೆ ಮಾಡಲಾದ ವಿಡಿಯೋ ಬಹಿರಂಗಗೊಳಿಸಿ ಎಂದು ಮಂಜುಶ್ರೀ ರವರಿಗೆ ತಾಕೀತು ಮಾಡಿದ್ದರು. ಇರುವ ವಿಡಿಯೋವನ್ನು ತೋರಿಸಲು ಮಂಜುಶ್ರೀ ರವರು ಮೊದಲು ಮೂರು ಗಂಟೆಗಳ ಕಾಲ ಅನುಮತಿ ಕೇಳಿದ ನಂತರ ಮರುದಿನ 10.30 ಅಂದರೆ ಇಂದು ಬೆಳಗ್ಗೆ 10:30 ಕ್ಕೆ ವಿಡಿಯೋ ತೋರಿಸುತ್ತೇನೆ ಎಂದು ಮನವಿ ಮಾಡಿಕೊಂಡಿದ್ದರು.

ಕಾನೂನಿನ ಪ್ರಕಾರ ಚುನಾವಣಾ ಅಧಿಕಾರಿಗಳು ಇದಕ್ಕೆ ಸಮ್ಮತಿಸಿರಬಾರಾದಿತ್ತು, ಆದರೆ ಚುನಾವಣಾ ಅಧಿಕಾರಿಗಳು ಮಂಜುಶ್ರೀ ರವರಿಗೆ ಸಮಯ ನೀಡಿದ್ದರು. ಇಷ್ಟು ಸಮಯ ನೀಡಿದರೂ ಸಹ ಮಂಜುಶ್ರೀ ರವರು ಇದುವರೆಗೂ ಯಾವುದೇ ವಿಡಿಯೋ ದಾಖಲಾತಿಯನ್ನು ಚುನಾವಣಾ ಆಯೋಗಕ್ಕೆ ನೀಡಿಲ್ಲ. ಇಷ್ಟಾದರೂ ಸಹ ರಾಜ್ಯದ ಚುನಾವಣಾ ಅಧಿಕಾರಿಗಳು ಯಾವುದೇ ಕಠಿಣ ನಿರ್ಧಾರವನ್ನು ತೆಗೆದು ಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಸಾಮಾನ್ಯವಾಗಿ ಸುಮಲತಾ ಅಂಬರೀಶ್ ರವರ ಅಭಿಮಾನಿಗಳು ಕೆರಳಿದ್ದಾರೆ. ಯಾಕೆ ಚುನಾವಣಾ ಅಧಿಕಾರಿಗಳಿಗೆ ನಿಖಿಲ್ ಕುಮಾರಸ್ವಾಮಿರವರ ಮೇಲೆ ಇಷ್ಟು ಮಮಕಾರ ಎಂಬುದು ಅರ್ಥವಾಗುತ್ತಿಲ್ಲ.

ಈಗಾಗಲೇ ಸಮಯ ಮೀರಿದ್ದರೂ ಸಹ ಸುಮಲತಾ ಬೆಂಬಲಿಗರು ಹಾಗೂ ದೂರುದಾರರು ಕಚೇರಿಯ ಹೊರಗೆ ಕಾಯುತ್ತಾ ಚುನಾವಣಾ ಅಧಿಕಾರಿ ಮಂಜುಶ್ರೀ ರವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಎಲ್ಲೋ ಒಂದು ಕಡೆ ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು ಚುನಾವಣಾ ಅಧಿಕಾರಿಗಳನ್ನು ಕಟ್ಟಿಹಾಕಿರುವ ಸಾಧ್ಯತೆಗಳು ಇದೆ ಎಂದು ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ಈ ಪ್ರಕರಣದಲ್ಲಿ ಅದೇ ನಡೆದಲ್ಲಿ ರಾಜ್ಯದ ಜನರಿಗೆ ಚುನಾವಣಾ ಆಯೋಗದ ಮೇಲೆ ಇರುವ ಭರವಸೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಇದೆ ಕಾರಣಾಕ್ಕಾಗಿಯೇ ಸುಮಲತಾ ಬೆಂಬಲಿಗಳು ಹೈ ಕೋರ್ಟ್ ಕದ ತಟ್ಟಲು ಮುಂದಾಗಿದ್ದಾರೆ, ಅಲ್ಲಾದರೂ ನ್ಯಾಯ ಸಿಕ್ಕರೆ ಕೊಂಚ ನಂಬಿಕೆ ಈ ವ್ಯವಸ್ಥೆಯ ಮೇಲೆ ಬರುತ್ತದೆ. ಎಷ್ಟೋ ಜನರಿಗೆ ರಾಜಕೀಯ ನಾಯಕರ ಮೇಲೆ ನಂಬಿಕೆ ಇಲ್ಲ ಆದರೆ ಚುನಾವಣಾ ಅಧಿಕಾರಿಗಳನ್ನು ನಂಬುತ್ತಾರೆ, ಇವರೇ ಈಗೆ ಮಾಡಿದರೆ ನಾವು ಯಾರನ್ನು ನಂಬಬೇಕು??ದಯವಿಟ್ಟು ಶೇರ್ ಮಾಡಿ ಎಲ್ಲರಿಗೂ ತಲುಪಿಸಿ. ನ್ಯಾಯಕ್ಕೆ ಬೇಡಿಕೆ ಇಡೀ