ಕರ್ನಾಟಕಕ್ಕೆ ಮತ್ತೊಂದು ಬಂಪರ್ ಆಫರ್ ಘೋಷಿಸಿದ ಮೋದಿ ಸರ್ಕಾರ

ಕರ್ನಾಟಕಕ್ಕೆ ಮತ್ತೊಂದು ಬಂಪರ್ ಆಫರ್ ಘೋಷಿಸಿದ ಮೋದಿ ಸರ್ಕಾರ

ನರೇಂದ್ರ ಮೋದಿ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಪ್ರಮುಖವಾಗಿ ಶಿಕ್ಷಣ ಕ್ಷೇತ್ರಕ್ಕೆ ಬಾರಿ ಪ್ರಾಮುಖ್ಯತೆ ನೀಡಿರುವ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಧಾರವಾಡದಲ್ಲಿ ಐಐಟಿ ಕಾಲೇಜ್ ಅನ್ನು ಸ್ಥಾಪಿಸಿ ಕರ್ನಾಟಕಕ್ಕೆ ಮತ್ತೊಂದು ಗರಿ ಸೇರಿಸಿತ್ತು. ಇನ್ನೂ ಹತ್ತು ಹಲವಾರು ಯೋಜನೆಗಳನ್ನು ಕರ್ನಾಟಕಕ್ಕೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರವು ಈಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ಕನ್ನಡಿಗರಿಗೆ ಡಬಲ್ ಉಡುಗೊರೆ ನೀಡಿದೆ. ಅಷ್ಟಕ್ಕೂ ಉಡುಗೊರೆಯ ಸಂಪೂರ್ಣ ಮಾಹಿತಿಗಳೇನು ಗೊತ್ತಾ?? ತಿಳಿಯಲು ಕೆಳಗಡೆ ಓದಿ.

ಇಡೀ ದೇಶದಾದ್ಯಂತ ಶಿಕ್ಷಣ ಕ್ಷೇತ್ರಕ್ಕೆ ಬಾರಿ ಪ್ರಾಮುಖ್ಯತೆ ಕೊಟ್ಟಿರುವ ನರೇಂದ್ರ ಮೋದಿರವರ ಸರ್ಕಾರವು ಮತ್ತೊಮ್ಮೆ 50 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಒಪ್ಪಿಗೆ ನೀಡಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯನ್ನು ನಿರೀಕ್ಷಿಸಿರುವ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿಯೂ 2 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಅಸ್ತು ಎಂದಿದೆ. ಕೇಂದ್ರದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಈ ತೀರ್ಮಾನವನ್ನು ಕೈಗೊಂಡಿದ್ದು, ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಬೆಂಗಳೂರಿನ ಯಶವಂತಪುರ ಹಾಗೂ ಬೆಳಗಾವಿಯ ಸದಲಾಗ ಸ್ಥಳಗಳಲ್ಲಿ ಕೇಂದ್ರೀಯ ವಿದ್ಯಾಲಯಗಳು ರಾರಾಜಿಸಲಿವೆ. ಕೇಂದ್ರ ಸರ್ಕಾರದ ಈ ಯೋಜನೆಗೆ ಕನ್ನಡಿಗರ ಪರವಾಗಿ ಹೃತ್ಪೂರ್ವಕ ವಂದನೆಗಳು.