ಬಿಗ್ ನ್ಯೂಸ್: ಪಾಪಿಗಳಿಗೆ ಉತ್ತರ ನೀಡಲು ಮತ್ತೊಂದು ಸರ್ಜಿಕಲ್ ಸ್ಟ್ರೈಕ್? ಸುಳಿವು ನೀಡಿದ ರಾಜನಾಥ ಸಿಂಗ್

ಗಡಿಯಲ್ಲಿ ಭಾರತ ಸೇನೆಯು ಜಮಾವಣೆಗೊಂಡು ಇದ್ದರೂ ಸಹ ಪಾಕಿಸ್ತಾನವು ತನ್ನ ಕುತಂತ್ರ ನೀತಿಯನ್ನು ಅನುಸರಿಸುವುದನ್ನು ನಿಲ್ಲಿಸಿಲ್ಲ. ಈಗಾಗಲೇ ತನ್ನ ಸೇನೆಗೆ ಯುದ್ಧಕ್ಕೆ ಸಿದ್ದರಾಗಿ ಇರುವಂತೆ ಘೋಷಿಸಿರುವ ಪಾಕಿಸ್ತಾನವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ, ಭಾರತೀಯ ವಾಯುಪಡೆಯ ದಾಳಿಯ ನಂತರ ಶಾಂತಿ ಮಾತುಕತೆ ಮಾಡಲು ಆಸಕ್ತಿ ವಹಿಸಿದ್ದ ಪಾಕಿಸ್ತಾನವು ಉಗ್ರರ ದಮನ ಮಾಡಲು ಮಾತ್ರ ಸಿದ್ಧವಿಲ್ಲ. ಬದಲಾಗಿ ಉಗ್ರರನ್ನು ತನ್ನ ಸೇನೆಗೆ ಸೇರಿಸಿಕೊಂಡು ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ ಎಂಬ ಆರೋಪಗಳು ಸಹ ಪಾಕಿಸ್ತಾನದ ಮೇಲೆ ಕೇಳಿ ಬಂದಿವೆ. ಇಷ್ಟು ಸಾಲದು ಎಂಬಂತೆ ಪಾಕಿಸ್ತಾನ ದೇಶವು ಕಳೆದ 15 ದಿನಗಳಲ್ಲಿ ಮೂರು ಬಾರಿ ಡ್ರೋನ್ ಗಳ ಮೂಲಕ ವಾಯು ಗಡಿಯ ಉಲ್ಲಂಘನೆ ಮಾಡಲು ಪ್ರಯತ್ನಪಟ್ಟಿದೆ.

ಇಷ್ಟೆಲ್ಲಾ ವಿದ್ಯಮಾನಗಳು ತದನಂತರ ಪಾಕಿಸ್ತಾನವು ಉಗ್ರರ ಬೆಂಬಲಕ್ಕೆ ನಿಂತಿರುವುದು ಈಗ ವಿಶ್ವದ ಮುಂದೆ ಸ್ಪಷ್ಟವಾಗಿ ತಿಳಿದುಬಂದಿದೆ. ಇತ್ತ ಭಾರತ ದೇಶವು ಹಲವಾರು ಎಚ್ಚರಿಕೆಗಳನ್ನು ನೀಡಿದ್ದರೂ ಸಹ ಪಾಕಿಸ್ತಾನವು ಉಗ್ರರ ಸದೆಬಡಿಯಲು ಸಿದ್ಧವಿಲ್ಲ ಈ ಎಲ್ಲಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತ ದೇಶವು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಇಡೀ ವಿಶ್ವವೇ ಕಾದುಕುಳಿತಿದೆ,ಈಗಾಗಲೇ ಹಲವಾರು ದೇಶಗಳು ಭಾರತಕ್ಕೆ ಬೆಂಬಲ ಘೋಷಿಸಿರುವ ಕಾರಣ ಭಾರತ ಯಾವ ನಿರ್ಧಾರ ತೆಗೆದುಕೊಂಡರು ವಿಶ್ವದ ಬಲಾಢ್ಯ ರಾಷ್ಟ್ರಗಳು ಭಾರತದ ಜೊತೆ ಕೈಜೋಡಿಸಲು ಇವೆ. ಗಾಡಿಯಲ್ಲಿ ಇನ್ನು ಅಪ್ರಚೋದಿತ ದಾಳಿಗಳು ನಿಂತಿಲ್ಲ, ಸೇನೆ ಸಿದ್ಧವಿದೆ ಯುದ್ಧ ಮಾಡಿಬಿಡುವ ಎಂದು ಸೇನೆ ಒಂದು ಕ್ಷಣ ಆಲೋಚನೆ ಮಾಡಿದರು ಸಹ ಪಾಕಿಸ್ತಾನ ಅಂತ್ಯ ಕಾಣುವುದು ಖಚಿತ, ಆದರೆ ಭಾರತದ ನಡೆ ಇನ್ನು ನಿಗೂಢವಾಗಿಯೇ ಉಳಿದಿದೆ. ಇಂತಹ ಸಮಯದಲ್ಲಿ ರಾಜ್ನಾಥ್ ಸಿಂಗ್ ರವರ ಹೇಳಿಕೆ ಬಾರಿ ಚರ್ಚೆಗೆ ಗ್ರಾಸವಾಗಿದೆ

ಈಗ ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುತ್ತದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ಎಂದು ರಾಜನಾಥ್ ಸಿಂಗ್ ಅವರು ನೀಡಿರುವ ಹೇಳಿಕೆಯನ್ನು ನೋಡಿದರೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಭಾರತ ದೇಶವು ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಮುಗಿ ಬೀಳಲಿದೆ. ಅಷ್ಟಕ್ಕೂ ರಾಜನಾಥ ಸಿಂಗ್ ರವರು ಹೇಳಿದ್ದಾದರೂ ಏನು ಗೊತ್ತಾ ಸಂಪೂರ್ಣ ವಿಷಯಗಳಿಗಾಗಿ ಕೆಳಗಡೆ ಓದಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ, ಹಾಗು ಒಂದು ವೇಳೆ ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಲ್ಲಿ ಸಾಕ್ಷಿ ಕೇಳುತ್ತಿರುವ ಕೆಲವು ದೇಶ ದ್ರೋಹಿಗಳನ್ನು ಕರೆದು ಕೊಂಡು ಹೋಗಿ ದಾಳಿಯ ನಂತರ ಶವ ಎಣಿಸಲು ಅಲ್ಲೇ ಬಿಟ್ಟು ಬರಬೇಕೆಂದು ಕೋರಿಕೊಳ್ಳುತ್ತೇವೆ.

ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಪಕ್ಷವು ಇಂದು ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ಲಸ್ಟರ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಿದ್ದು, ಇದಕ್ಕೆ ಖುದ್ದು ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ರವರು ಆಗಮಿಸಿದ್ದರು. ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್ ಅವರು ಐದು ವರ್ಷದಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಎರಡು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಮೊದಲನೆಯದು ಉರಿ ಎರಡನೆಯದು ಬಾಲ ಕೋಟ್, ಮೂರನೆಯದ್ದು ಏನು ಎಂದು ನಾನು ಹೇಳಲಾರೆ ಆದರೆ ಸದ್ಯದಲ್ಲೇ ಎಲ್ಲರಿಗೂ ತಿಳಿಯಲಿದೆ ಎಂದು ಹೇಳುವ ಮೂಲಕ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನ ಸುಳಿವು ನೀಡಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರವು ಯಾವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡರೂ ಸಹ ಜನತೆಯ ಬೆಂಬಲ ಹಾಗೂ ವಿಶ್ವದ ಬೆಂಬಲವಿರುವ ಕಾರಣ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಕಲಿಸುವುದು ನಿಶ್ಚಿತ.

Post Author: Ravi Yadav