ಯಶ್-ರಾಧಿಕಾ ಪುತ್ರಿ ಯ ಹೆಸರೇನು ಗೊತ್ತಾ?

ಸ್ಯಾಂಡಲ್ ವುಡ್ ನ ಕಲಾ ಜೋಡಿ ಯಶ್ ಹಾಗೂ ರಾಧಿಕಾ ರವರಿಗೆ ಹೆಣ್ಣು ಮಗು ಜನಿಸಿರುವುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಈತನ್ಮಧ್ಯೆ ಯಶ್ ಹಾಗೂ ರಾಧಿಕಾ ಅವರ ಮುದ್ದು ಮಗಳಿಗೆ ಯಾವ ಹೆಸರು ಇಡುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಮುದ್ದು ಮಗಳ ಲಾಲನೆ ಹಾಗೂ ಪಾಲನೆಯಲ್ಲಿ ನಿರತವಾಗಿದ್ದ ರಾಧಿಕಾ ಪಂಡಿತ್ ಯಶ್ ದಂಪತಿಗಳು ಮಗಳಿಗೆ ಏನೆಂದು ಹೆಸರಿಡುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿರುವ ಸಮಯದಲ್ಲಿ ಕೊನೆಗೂ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಇಷ್ಟು ದಿವಸ ಅಭಿಮಾನಿಗಳು ಕಾದು ಕುಳಿತಿದ್ದ ಕ್ಕೆ ಕೊನೆಗೂ ಎಲ್ಲರಿಗೂ ಸಂತಸ ಸುದ್ದಿ ಹೊರಬಿದ್ದಿದೆ.

ತಮ್ಮ ಮುದ್ದು ಮಗಳಿಗೆ ಯಶ್ ಹಾಗೂ ರಾಧಿಕಾ ರವರು ಈಗಿನ ಟ್ರೆಂಡ್ ನಂತೆ ಅಪ್ಪ ಅಮ್ಮ ಇಬ್ಬರ ಹೆಸರನ್ನು ಸೇರಿಸಿಕೊಂಡು ಯಶಿಕಾ ಎಂದು ಹೆಸರು ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಜಾತಕದ ಪ್ರಕಾರ ‘ಬ’ ಎಂಬ ಅಕ್ಷರದ ಮೂಲಕ ಹೆಸರು ಆರಂಭವಾಗಬೇಕು, ಆದರೂ ಸಹ ಯಶ್ ಹಾಗೂ ರಾಧಿಕಾ ದಂಪತಿಗಳು ತಮ್ಮ ಮುದ್ದು ಮಗಳಿಗೆ ಯಶಿಕಾ ಎಂದು ಹೆಸರಿಡಲು ನಿರ್ಧರಿಸಲಾಗಿದ್ದು ತಮ್ಮ ಮನೆತನದ ಸಂಪ್ರದಾಯದ ಪ್ರಕಾರ ಮಗಳಿಗೆ ಐದು ತಿಂಗಳ ನಂತರ ನಾಮಕರಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Post Author: Ravi Yadav