ಜೂಡೋ ಪಟುಗಳಿಗೆ ಮಣ್ಣು ಮುಕ್ಕಿಸಿದ ರಷ್ಯಾ ಅಧ್ಯಕ್ಷ: ಶಹಬಾಸ್ ಪುಟಿನ್

ರಷ್ಯಾದ ಅಧ್ಯಕ್ಷರಾಗಿರುವ ಪುಟಿನ್ ರವರು ತಮ್ಮ ಆಡಳಿತದ ಮೂಲಕ ಇಡೀ ರಷ್ಯಾ ಜನರ ಮನವನ್ನು ಕದ್ದಿದ್ದಾರೆ. ರಷ್ಯಾದ ವಿರೋಧಿ ರಾಷ್ಟ್ರಗಳಿಗೆ ಬಹು ದೊಡ್ಡ ತಲೆನೋವಾಗಿರುವ ರಷ್ಯಾದ ಅಧ್ಯಕ್ಷ ತನ್ನ ದೇಶವು ವಿಶ್ವದ ಯಾವುದೇ ದೇಶಗಳ ಮುಂದೆ ತಲೆ ಬಾಗುವುದು ನೋಡಲು ಸಾಧ್ಯವೇ ಇಲ್ಲ ಎಂಬ ಅಭಿವೃದ್ಧಿಯ ಮಂತ್ರವನ್ನು ಮುಂದಿಟ್ಟುಕೊಂಡು ದಶಕಗಳಿಂದ ರಷ್ಯಾ ದೇಶವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ನಾನೊಬ್ಬ ಸಾಮಾನ್ಯ ಇಂಟಲಿಜೆನ್ಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಪುಟಿನ್ ರವರು ಮುಂದೊಂದು ದಿನ ರಷ್ಯಾದ ಅಧ್ಯಕ್ಷರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ, ಆದರೆ ಇವರಿಗೆ ದೇಶದ ಮೇಲಿದ್ದ ಅಪಾರ ದೇಶಭಕ್ತಿ ಯು ಅಧ್ಯಕ್ಷರಾಗಲು ಪ್ರೇರೇಪಿಸಿತ್ತು.

ತದನಂತರ ನಡೆದದ್ದೆಲ್ಲವೂ ಇತಿಹಾಸ, ರಷ್ಯಾ ದೇಶವು ಯಾವ ಅಧ್ಯಕ್ಷರ ಕಾಲದಲ್ಲೂ ಕಾಣದಂತಹ ಅಭಿವೃದ್ಧಿಯನ್ನು ಪುಟಿನ್ ರವರ ಕಾಲದಲ್ಲಿ ಕಂಡಿತು,ಇಡೀ ವಿಶ್ವವೇ ಪುಟಿನ್ ರವರ ಆಡಳಿತ ಕಂಡು ಬೆರಗಾಗಿತ್ತು. ಇಷ್ಟೆಲ್ಲಾ ಮಾಡಿರುವ ಅಧ್ಯಕ್ಷರು ಇದೀಗ ಜೂಡೋ ಸ್ಪರ್ಧೆ ನೋಡಲು ತೆರಳಿದಾಗ , ಬಹಳ ನಿಪುಣತೆ ಹೊಂದಿರುವ ಜೂಡೋ ಪಟುಗಳನ್ನು ಸೋಲಿಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಎರಡು ಮೂರು ಪಂದ್ಯಗಳನ್ನು ಗೆದ್ದ ಪುಟಿನ್ ರವರು ಕಳೆದ ಬಾರಿಯ ಒಲಂಪಿಕ್ ಕಂಚಿನ ಪದಕದ ವಿಜೇತೆ ನಟಾಲಿಯಾಳ ಮುಂದೆ ಸೋಲನ್ನು ಕಂಡಿದ್ದಾರೆ. ಆದರೆ ಬಹಳ ನಿಪುಣರಾಗಿದ್ದ ಕೆಲವು ಜೂಡೋ ಪಟುಗಳನ್ನು ಸೋಲಿಸಿದ ಪುಟಿನ್ ಅವರು ಎಲ್ಲರ ಹುಬ್ಬೇರಿಸಿದ್ದಾರೆ.

Post Author: Ravi Yadav