ಮುಖ್ಯಮಂತ್ರಿಗಳಿಗೆ ಶಾಕ್: ಪ್ರಕರಣ ದಾಖಲು, ಬಂಧಿಸು ವಂತೆ ಮನವಿ

ಮುಖ್ಯಮಂತ್ರಿಗಳಿಗೆ ಶಾಕ್: ಪ್ರಕರಣ ದಾಖಲು, ಬಂಧಿಸು ವಂತೆ ಮನವಿ

ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿ ಕೊಂಡ ಮೇಲೆ ಅಭಿವೃದ್ಧಿಯ ಕೆಲಸಗಳಲ್ಲಿ ಹೆಸರು ಮಾಡುವ ಬದಲು ಸುಮ್ಮನೆ ವಿವಾದಗಳನ್ನು ಮೈಮೇಲೆ ಎಳೆದುಕೊಂಡು, ಬಾರಿ ಸದ್ದು ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಮೊದಲು ಕರ್ನಾಟಕದ ಜನರನ್ನು ದಂಗೆ ಎದ್ದೇಳಿಸುತ್ತೇನೆ ಎಂದು ಶಾಂತಿ ಕದಡುವ ಮಾತುಗಳನ್ನು ಹಾಡಿದ್ದ ಕುಮಾರಸ್ವಾಮಿ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಅದೆಷ್ಟೋ ದೇಶ ಭಕ್ತರ ರಕ್ತ ಕುಡುಯುತ್ತಿದೆ ಎಂದರೆ ತಪ್ಪಾಗಲಾರದು, ಅದೆಷ್ಟೋ ಅಭಿಮಾನಿಗಳು ಸಹ ನಾನು ನಿಮ್ಮ ಅಭಿಮಾನಿ ಮತ್ತು ಮುಸ್ಲಿಂ ಆದರೂ ನನ್ನ ದೇಶ ಉಗ್ರರನ್ನು ನಾಶಮಾಡಿದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇಡೀ ದೇಶವೇ ಇಂದು ಪುಲ್ವಾಮಾ ದಾಳಿಗೆ ಕೇಂದ್ರ ಸರ್ಕಾರವು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದೆ ಉಗ್ರರನ್ನು ನಾಶಮಾಡುವುದು ಇಡೀ ವಿಶ್ವಕ್ಕೆ ಅಗತ್ಯವಾದ ಕೆಲಸವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೆಲವು ರಾಜಕೀಯ ನಾಯಕರು, ಸೈನಿಕರ ವಿಷಯದಲ್ಲೂ ಸಹ ರಾಜಕೀಯವನ್ನು ತಂದು ದೇಶಕ್ಕೆ ಮಸಿ ಬಳೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕರ್ನಾಟಕದ ಸಚಿವರಾಗಿರುವ ಮನಗೂಳಿ ರವರು ಸಹ ಹೊರತಲ್ಲ. ಉಗ್ರರು 44 ಯೋಧರನ್ನು ಕೊಂದಾಗ ಕಾಣದ ಮಾನವೀಯತೆ ಇವರಿಗೆ ಉಗ್ರರ ಹೆಡೆಮುರಿ ಕಟ್ಟಿದಾಗ ಕಾಣುತ್ತಿದೆ ಎಂಬುದು ವಿಷಾದನೀಯ.ಇಷ್ಟೆಲ್ಲ ಒಗ್ಗಟ್ಟು ಇರುವ ಭಾರತದಲ್ಲೂ ಧರ್ಮಗಳನ್ನು ಒಡೆಯುವ ಮಾತುಗಳನ್ನು ಕುಮಾರಸ್ವಾಮಿ ರವರು ಆಡಬಾರದಿತ್ತು ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ

ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿರುವಾಗ ಮುಖ್ಯಮಂತ್ರಿಗಳಾಗಿ ಇರುವ ಕುಮಾರಸ್ವಾಮಿ ಅವರು ತನ್ನ ಹುದ್ದೆಗೆ ದಕ್ಕೆ ತರುವಂತಹ ಮಾತುಗಳನ್ನು ಮಾತನಾಡಬೇಕಿತ್ತು ಆದರೆ ಒಂದು ರಾಜ್ಯದ ಮುಖ್ಯಮಂತ್ರಿಗಳ ಸ್ಥಾನದಲ್ಲಿರುವ ಕುಮಾರಸ್ವಾಮಿ ರವರು ಸೈನಿಕರ ವಿಷಯದಲ್ಲಿ ಧರ್ಮ ಜಾತಿ ಎಂಬ ಒಡಂಬಡಿಕೆ ತಂದು ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಉಗ್ರರು ಹಿಂದುಗಳ ಆಗಿರಲಿ ಅಥವಾ ಮುಸ್ಲಿಮರಾಗಿರಲಿ ದೇಶದ ವಿಷಯ ಬಂದಾಗ ಅವರನ್ನು ಕೊಲ್ಲುವುದು ಅನಿವಾರ್ಯವಾಗಿರುತ್ತದೆ, ಅದನ್ನು ಸಂಭ್ರಮಿಸುವುದು ಪ್ರತಿಯೊಬ್ಬ ದೇಶಭಕ್ತರ ಹಕ್ಕು ಎಂದು ದೇಶಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ರವರಿಗೆ ಭಾರಿ ಛೀಮಾರಿ ಹಾಕುತಿದ್ದಾರೆ.

ಹೌದು ಉಗ್ರರು ಕೇವಲ ಮುಸ್ಲಿಮರು ಎಂದು ಎಲ್ಲರೂ ಕೊಲ್ಲಿ ಎಂದು ಹೇಳುತ್ತಿಲ್ಲ. ಆ ಉಗ್ರರ ಸ್ಥಾನದಲ್ಲಿ ಹಿಂದೂ ಭಯೋತ್ಪಾದಕರು ಇದ್ದರೂ ಸಹ ಅವರನ್ನು ಭಾರತೀಯ ವಾಯುಪಡೆ ಚೆಂಡಾಡಿದಾಗ ಖಂಡಿತವಾಗಿಯೂ ಪ್ರತಿಯೊಬ್ಬ ದೇಶಭಕ್ತನ ಸಂಭ್ರಮ ಪಡುತ್ತಾನೆ ಇಂತಹ ವಿಷಯದಲ್ಲಿ ಕುಮಾರಸ್ವಾಮಿ ಅವರು ಉಗ್ರರ ಹತ್ಯೆಯಾದಾಗ ಯಾರೊಬ್ಬರೂ ಸಂಭ್ರಮಿಸಬಾರದು ಎಂದು ಹೇಳಿಕೆ ನೀಡಿದ್ದರು.ಇಷ್ಟು ದಿವಸ ಸೈನಿಕರ ಹಾಗು ದೇಶದ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದ ಇವರು ಉಗ್ರರ ಧರ್ಮದಲ್ಲಿಯೂ ರಾಜಕೀಯದ ಹುಡುಕಿ ದೇಶ ದ್ರೋಹಿಗಳಿ ಪರೋಕ್ಷಬೆಂಬಲ ಬೆಂಬಲ ನೀಡಿದ್ದರು.

ಒಂದು ವೇಳೆ ಸಂಭ್ರಮಿಸಿದರೆ 2 ಧರ್ಮಗಳ ನಡುವೆ ಜಟಾಪಟಿ ಆರಂಭವಾಗುತ್ತದೆ ಎಂಬ ಹೇಳಿಕೆ ನೀಡಿದ್ದರು ಆದರೆ ನೆನಪಿರಲಿ ಇಲ್ಲಿ ಯಾವುದೇ ಧರ್ಮದ ಜನರನ್ನು ಕೊಂದಿದಕ್ಕಾಗಿ ಇಡೀ ದೇಶ ಸಂಭ್ರಮ ಪಡುತ್ತಿಲ್ಲ, ಇಷ್ಟೆಲ್ಲಾ ನಡೆದರೂ ನಂತರ ಕುಮಾರಸ್ವಾಮಿ ರವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಇನ್ನು ಅನಿಲ್ ಕುಮಾರ್ ಎಂಬ ದೇಶಭಕ್ತರು ಕುಮಾರಸ್ವಾಮಿ ರವರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ದೇಶಭಕ್ತಿ ಧಕ್ಕೆ ತಂದಿದೆ ಎಂದು ದೂರಿನಲ್ಲಿ ದಾಖಲಿಸಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಅದೇ ನಡೆದಲ್ಲಿ ಕುಮಾರಸ್ವಾಮಿ ಅವರು ಕಾನೂನು ಮೆಟ್ಟಿಲು ಹತ್ತ ಬೇಕಾದ ಪರಿಸ್ಥಿತಿ ಎದುರಾಗಲಿದೆ.