ರಾಹುಲ್ ಗೆಲುವು ಮತ್ತಷ್ಟು ಕಗ್ಗಂಟು: ಅಮೇಥಿ ಗೆ ಮೋದಿ ಎಂಟ್ರಿ

ರಾಹುಲ್ ಗೆಲುವು ಮತ್ತಷ್ಟು ಕಗ್ಗಂಟು: ಅಮೇಥಿ ಗೆ ಮೋದಿ ಎಂಟ್ರಿ

ಮುಂದಿನ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿ ಪಕ್ಷಗಳು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇತ್ತ ಇಪ್ಪತ್ತಕ್ಕೂ ಹೆಚ್ಚು ಪಕ್ಷಗಳು ನರೇಂದ್ರ ಮೋದಿ ರವರ ಅಲೆಯು ಸುನಾಮಿಯಾಗಿ ಪರಿವರ್ತನೆಗೊಂಡಿರುವ ರಿಂದ ತಡೆಯಲು ಪ್ರಯತ್ನ ಪಡುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಪಕ್ಷವು ಮತ್ತೊಮ್ಮೆ ಏಕಾಂಗಿಯಾಗಿ ಬಹುಮತ ಸ್ಥಾಪಿಸಿ, ನರೇಂದ್ರ ಮೋದಿ ಅವರನ್ನು ಪ್ರಧಾನ ಸೇವಕ ರನ್ನಾಗಿ ಆಯ್ಕೆ ಮಾಡಲು ತನ್ನ ಕಾರ್ಯ ಯೋಜನೆ ಹಾಗೂ ರೂಪುರೇಷೆಗಳಲ್ಲಿ ನಿರತವಾಗಿದೆ. ಈ ಎಲ್ಲಾ ಕಾರಣಗಳಿಂದ ಮುಂದಿನ ಲೋಕಸಭಾ ಚುನಾವಣೆಯು ಭಾರೀ ಕುತೂಹಲವನ್ನು ಕೆರಳಿಸುತ್ತಾ ಮುಂದೆ ಸಾಗುತ್ತಿದೆ.

ಈತನ ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಬಾರಿ ಕೇವಲ 44 ಸೀಟುಗಳು ದೊರಕಿರುವ ಕಾರಣ ರಾಷ್ಟ್ರೀಯ ಪಕ್ಷಕ್ಕೇ ಭಾರಿ ಮುಖಭಂಗ ಉಂಟಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಮೈತ್ರಿಯನ್ನು ರಚಿಸಿಕೊಂಡು ಕಣಕ್ಕೆ ಇಳಿಯುತ್ತಿರುವ ಕಾರಣ ಸೀಟುಗಳು ಕೊಂಚ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಚುನಾವಣಾ ಪೂರ್ವ ಮೈತ್ರಿ ಗೆ ಟಕ್ಕರ್ ಕೊಡಲು ಸಿದ್ಧವಾಗಿರುವ ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷದ ಎಲ್ಲಾ ದಿಗ್ಗಜ ನಾಯಕರು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ‌. ಅದರಲ್ಲಿ ರಾಹುಲ್ ಗಾಂಧಿ ಅವರು ಸ್ಪರ್ಧಿಸುವ ಅಮೇಥಿ, ಇನ್ನು ಸೋನಿಯಾ ಗಾಂಧಿ ಅವರು ಸ್ಪರ್ಧಿಸುವ ರಾಯ ಬರೆಯಲಿ ಹಾಗೂ ಸೋಲಿಲ್ಲದ ಸರದಾರ ಎಂದು ಹೆಸರು ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರಗಳು ಭಾರಿ ಸದ್ದು ಮಾಡುತ್ತಿವೆ.

ಇನ್ನು ಈಗಾಗಲೇ ರಾಹುಲ್ ಗಾಂಧಿ ತಮ್ಮ ವಂಶಪಾರಂಪರಿಕ ಭದ್ರಕೋಟೆ ಅಮೇಥಿ ಕ್ಷೇತ್ರವನ್ನು ಬಿಟ್ಟು, ಮಧ್ಯಪ್ರದೇಶದ ಯಾವುದಾದರೂ ಒಂದು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಯಿಂದ ಸ್ಪರ್ಧಿಸಬೇಕು ಎಂಬ ಆಲೋಚನೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಬಾರಿ ರಾಹುಲ್ ಗಾಂಧಿ ರವರಿಗೆ ಕಠಿಣ ಸ್ಪರ್ಧೆ ನೀಡುವಲ್ಲಿ ಯಶಸ್ವಿಯಾಗಿದ್ದ ಸ್ಮೃತಿ ಇರಾನಿ ರವರು ಈ ಬಾರಿ ಗೆಲುವು ದಾಖಲಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಕಾರಣ ರಾಹುಲ್ ಗಾಂಧಿ ರವರು ತಮ್ಮ ವಂಶಪಾರಂಪರಿಕ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಸೋಲನ್ನು ಒಪ್ಪಿಕೊಂಡು ಕ್ಷೇತ್ರ ಬಿಡಲು ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಈಗ ರಾಹುಲ್ ಗಾಂಧಿ ರವರಿಗೆ ಮತ್ತೊಂದು ಶಾಕ್ ಎದುರಾಗಿದೆ, ಮೊದಲೇ ಸೋಲುವ ಭೀತಿಯಿಂದ ಕ್ಷೇತ್ರ ಬಿಡಲು ಸಿದ್ಧವಾಗಿದ್ದ ರಾಹುಲ್ ಗಾಂಧಿ ರವರು ಈ ಸುದ್ದಿ ಕೇಳಿದರೆ ಖಂಡಿತವಾಗಿಯೂ ಅಮೇಥಿ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಲಿದೆ. ಯಾಕೆಂದರೆ ಇಂದು ನರೇಂದ್ರ ಮೋದಿ ಅವರು ಅಮೇಥಿ ಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿರವರ ಭೇಟಿ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನು ಸಮ್ಮೇಳನ ನಡೆಯುವ ಸ್ಥಳಕ್ಕೆ ಯೋಗಿ ಆದಿತ್ಯನಾಥ ರವರು ಈಗಾಗಲೇ ಭೇಟಿ ನೀಡಿ ಸಕಲ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.

540 ಕೋಟಿ ರೂ ಯೋಜನೆಗಳನ್ನು ಅಮೇಥಿ ಕ್ಷೇತ್ರಕ್ಕೆ ನೀಡಬೇಕು ಎಂದು ಮೋದಿ ಅವರು ಈಗಾಗಲೇ ಯೋಜನೆ ಸಿದ್ಧಗೊಳಿಸಿದ್ದಾರೆ. ಈ ಎಲ್ಲ ಯೋಜನೆಗಳನ್ನು ಇಂದು ಅನುಷ್ಠಾನಗೊಳಿಸಲು ಸ್ವತಃ ನರೇಂದ್ರ ಮೋದಿರವರು ಅಮೇತಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ನರೇಂದ್ರ ಮೋದಿ ರವರ ಈ ಭೇಟಿ ಭಾರಿ ಚರ್ಚೆಗೆ ಗ್ರಾಸವಾಗಿದೆ ಮುಂದೆ ಈ ಭೇಟಿ ಯಾವ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ