ಬಂಪರ್ ಯೋಜನೆ ಜಾರಿಗೆ- ಬೀದಿ ವ್ಯಾಪಾರಿಗಳು, ಚಾಲಕರು ಹಾಗೂ ಕಾರ್ಮಿಕರಿಗೆ ಶುಭ ಸುದ್ದಿ ನೀಡಿದ ಮೋದಿ

ಬಂಪರ್ ಯೋಜನೆ ಜಾರಿಗೆ- ಬೀದಿ ವ್ಯಾಪಾರಿಗಳು, ಚಾಲಕರು ಹಾಗೂ ಕಾರ್ಮಿಕರಿಗೆ ಶುಭ ಸುದ್ದಿ ನೀಡಿದ ಮೋದಿ

ಕೆಲವೇ ಕೆಲವು ವರ್ಷಗಳ ಹಿಂದೆ ಇಡೀ ಭಾರತದ ವ್ಯವಸ್ಥೆಗೆ ಒಂದು ಕಳಂಕ ವಿತ್ತು ಸರ್ಕಾರಿ ಯೋಜನೆಗಳು ಜನರಿಗೆ ಸರಿಯಾದ ಸಮಯದಲ್ಲಿ ತಲುಪುವುದಿಲ್ಲ ಹಾಗೂ ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು ಎಂದರೆ ವರ್ಷಗಳೇ ಕಳೆಯಬೇಕು ಎಂದು. ಆದರೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ತಾವು ಜಾರಿ ಮಾಡಿದ ಯೋಜನೆಗಳು ಕಾಲಕ್ಕೆ ತಕ್ಕಂತೆ ಜನರನ್ನು ತಲುಪುತ್ತಿವೆ.

ಮೊನ್ನೆಯಷ್ಟೇ ಬಜೆಟ್ ನಲ್ಲಿ ಮಂಡಿಸಿದ ನರೇಂದ್ರ ಮೋದಿ ಅವರು ಕೇವಲ 24 ಗಂಟೆಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು ಈಗ ಮತ್ತೊಂದು ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದಂತೆ ಜಾರಿಗೆ ತಂದಿದ್ದು ಬೀದಿ ವ್ಯಾಪಾರಿಗಳು ಚಾಲಕರು ಹಾಗೂ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೀದಿ ವ್ಯಾಪಾರಿಗಳು, ಚಾಲಕರು, ಹಾಗೂ ಕಾರ್ಮಿಕರು ತಾವು ದುಡಿದ ಅಷ್ಟು ದಿನ ದುಡಿದು ತದನಂತರ ಯಾವುದೇ ಪಿಂಚಣಿ ಇಲ್ಲದೆ ತಮ್ಮ ಜೀವನವನ್ನು ಇನ್ನೊಬ್ಬರ ಆಧಾರದ ಮೇಲೆ ನಡೆಸಬೇಕಿತ್ತು ಇದನ್ನು ಕಂಡ ನರೇಂದ್ರ ಮೋದಿ ಅವರು ಪ್ರತಿಯೊಬ್ಬರು ತಮ್ಮ ಕಾಲಿನ ಮೇಲೆ ತಾವು ನಿಂತು ಕೊಳ್ಳಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಈ ಯೋಜನೆಗೆ ಒತ್ತು ನೀಡಿದ್ದರು.

ಇಟ್ಟಿಗೆಗೂಡು ಕಾರ್ಮಿಕರು, ಬಟ್ಟೆ ಒಗೆಯುವವರು, ಮನೆ ಕೆಲಸದವರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣ, ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ, ಕಾರ್ಮಿಕರು, ಚರ್ಮ ಕೆಲಸಗಾರರು, ಸೇರಿದಂತೆ ಇನ್ನೂ ಹತ್ತು ಹಲವಾರು ಕಾರ್ಮಿಕ ವರ್ಗಕ್ಕೆ ಬಜೆಟ್ ನಲ್ಲಿ ಘೋಷಿಸಲಾಗಿರುವ ಪ್ರಧಾನ ಮಂತ್ರಿ ಶ್ರಮ ಯೋಗಿ ಯೋಜನೆಯ ಅಡಿಯಲ್ಲಿ ಫೆಬ್ರವರಿ 15ರಿಂದ ಪಿಂಚಣಿ ನೀಡಲು ನಿರ್ಧರಿಸಿದ್ದಾರೆ.

ಮಾಸಿಕ ಕನಿಷ್ಠ ಮೂರು ಸಾವಿರ ರೂ ಖಾತ್ರಿಯ ಪಿಂಚಣಿ ಯೋಜನೆ ಮುಂದಿನ 5 ವರ್ಷಗಳಲ್ಲಿ 10 ಕೋಟಿ ಕಾರ್ಮಿಕರಿಗೆ ತಲುಪಲಿದೆ. ಪ್ರತಿ ತಿಂಗಳು 55 ರೂ ಗಳನ್ನು ಪಾವತಿಸಿದರೆ ಅದಕ್ಕೆ ಸರ್ಕಾರ 55 ರೂ ಪಾವತಿಸಿ ಸದಸ್ಯರಿಗೆ 110 ಮಾಡುತ್ತದೆ. ಇಷ್ಟು ದಿವಸ ಐಟಿ-ಬಿಟಿ ಗಳಲ್ಲಿ ಕಾಣಿಸಿಕೊಂಡ ಯೋಜನೆಗಳು ಈಗ ಕಾರ್ಮಿಕ ವರ್ಗಕ್ಕೂ ತಲುಪುವಂತೆ ನರೇಂದ್ರ ಮೋದಿ ಅವರು ಮಾಡಿದ್ದಾರೆ.

ವಯಸ್ಸಿಗೆ ತಕ್ಕಂತೆ ತಿಂಗಳಿಗೆ ಹೆಚ್ಚು ಪಾವತಿ ಮಾಡಬೇಕಾದ ಅಗತ್ಯವಿರುತ್ತದೆ. ಆದರೆ ಸಾಮಾನ್ಯ ಕಾರ್ಮಿಕರು ಪಾವತಿ ಮಾಡಿದ ಹಣಕ್ಕೆ ಸಮನಾಗಿ ಕೇಂದ್ರ ಸರ್ಕಾರದಿಂದ ಅಷ್ಟೇ ಹಣ ಬಂದು ನಿಮ್ಮ ಖಾತೆಗೆ ಜಮಾ ಆಗುವುದರಿಂದ, ನೀವು ಜಮಾ ಮಾಡಿದ ಹಣಕ್ಕೆ ಡಬಲ್ ನೀಡಿ ನಿಮಗೆ ಪಿಂಚಣಿ ಲಭ್ಯವಾಗುತ್ತದೆ.

ಈ ಯೋಜನೆಯ ಮೂಲಕ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಕಾರ್ಮಿಕರು ತಮ್ಮ 60ನೇ ವರ್ಷದ ನಂತರ ಸರ್ಕಾರಿ ಅಧಿಕಾರಿಗಳಿಗೆ ಬರುವಂತೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಿಂದ 10 ಕೋಟಿ ಕಾರ್ಮಿಕರ ಬಾಳು ಬೆಳಗಿದಂತಾಗಿದೆ. ಸರ್ಕಾರಿ ಅಧಿಕಾರಿಗಳಂತೆ ಸಾಮಾನ್ಯ ಜನರು ಸಹ ಪ್ರತಿ ತಿಂಗಳು ಪಿಂಚಣಿ ಪಡೆದು ಬಾಳಲಿದ್ದಾರೆ.