ಬಿಜೆಪಿಗೆ ಬಿಗ್ ರಿಲೀಫ್ -ಕೊನೆಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಸಿಕ್ಕರೂ ಸಮರ್ಥ ನಾಯಕ

ಬಿಜೆಪಿಗೆ ಬಿಗ್ ರಿಲೀಫ್ -ಕೊನೆಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಸಿಕ್ಕರೂ ಸಮರ್ಥ ನಾಯಕ

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಇಡೀ ದೇಶ ಅಭಿವೃದ್ಧಿ ಪಥದತ್ತ ಸಾಗಿದೆ. ಇಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ, ವಿಶ್ವದ ಪ್ರತಿಯೊಂದು ದೇಶಗಳು ಭಾರತದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ಕಾತರದಿಂದ ಕಾಯುತ್ತಿವೆ. ಇದಕ್ಕೆಲ್ಲಾ ಕಾರಣ ನರೇಂದ್ರ ಮೋದಿ ರವರು ಎಂದರೆ ತಪ್ಪಾಗಲಾರದು, ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಪ್ರತಿಯೊಂದು ದಿನವೂ ಸತತ 18 ಗಂಟೆಗಳ ಕಾಲ ಕೆಲಸದಲ್ಲಿ ನಿರತರಾಗಿ ದೇಶವನ್ನು ವಿಶ್ವ ಗುರುವನ್ನು ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ಇದೀಗ ದೇಶದಲ್ಲಿ ಪ್ರತಿಯೊಂದು ಪಕ್ಷಗಳು ನರೇಂದ್ರ ಮೋದಿಯವರ ಅಲೆಯನ್ನು ತಡೆಯಲಾರದೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಒಂದಾಗಿ ನರೇಂದ್ರ ಮೋದಿ ಅವರನ್ನು ಎದುರಿಸಲು ಸಿದ್ಧರಾಗಿದ್ದಾರೆ. ಆದ ಕಾರಣದಿಂದ ಪ್ರತಿಯೊಂದು ಕ್ಷೇತ್ರಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದ್ದು, ಒಂದು ಸೀಟಿನ ಮಹತ್ವ ಏನು ಎಂಬುದು ಪ್ರತಿಯೊಂದು ಪಕ್ಷಗಳಿಗೂ ತಿಳಿದುಬಂದಿದೆ. ಇದೇ ರೀತಿ ನಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ರಾಜಕಾರಣವನ್ನು ನಾವು ಗಮನಿಸಿದಾಗ ಬಿಜೆಪಿ ಪಕ್ಷಕ್ಕೆ ಸಮರ್ಥ ನಾಯಕನ ಅಗತ್ಯವಿದೆ ಎಂಬುದು ಎಲ್ಲರಿಗೂ ತಿಳಿದು ಬಂದಿತ್ತು.

ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚಿಗೆ ಸಮರ್ಥ ನಾಯಕ ಇಲ್ಲ ಎಂಬ ಚಿಂತೆ ಬಿಜೆಪಿ ಪಕ್ಷದ ಹೈಕಮಾಂಡ್ ನಿದ್ದೆಗೆಡಿಸಿತ್ತು. ಅಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯನಿಂದ ಹಿಡಿದು ಸತತ ಮೂರು ಬಾರಿ ಸಂಸದರಾಗಿದ್ದ ಬಿಜೆಪಿ ಪಕ್ಷದ  ಡಿಸಿ ಶ್ರೀಕಂಠಪ್ಪ ನವರ ರೀತಿ  ಪಕ್ಷವನ್ನು  ಕಟ್ಟಿ,  ಜನರ ಪರ ಧ್ವನಿ ಎತ್ತಿ ಕ್ಷೇತ್ರದ ಅಭಿವೃದ್ಧಿಯನ್ನು ಮುಂಚೂಣಿಯಲ್ಲಿ  ಕೊಂಡೊಯ್ಯುವಂತಹ  ಪರ್ಯಾಯ ನಾಯಕನ ಹುಡುಕಾಟದಲ್ಲಿ ಬಿಜೆಪಿ ಪಕ್ಷ ನಿರತವಾಗಿತ್ತು.

ಇಂದಿನ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ರವರು ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದರಿಂದ ಬಿಜೆಪಿ ಪಕ್ಷಕ್ಕೆ ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮರ್ಥ ನಾಯಕ ಸಿಗದೇ ಇದ್ದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ಹೈಕಮಾಂಡ್ ಅರ್ಥ ಮಾಡಿಕೊಂಡಿತ್ತು. ಆದರೆ ಇದೀಗ ಬಿಜೆಪಿ ಪಕ್ಷಕ್ಕೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಬಿಜೆಪಿ ಹೈಕಮಾಂಡ್ ಮುಂದೆ ಇದ್ದ ಬಹುದೊಡ್ಡ ಚಿಂತೆಯನ್ನು ಉಡುಪಿ-ಚಿಕ್ಕಮಗಳೂರಿನ ಜನರೇ ನಿವಾರಣೆ ಮಾಡಿದ್ದಾರೆ. ಹೊಸ ಮುಖದತ್ತ ಒಲವು ತೋರಿರುವ ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ಜನರು ಬಿಜೆಪಿ ಪಕ್ಷಕ್ಕೆ, ನರೇಂದ್ರ ಮೋದಿ ರವರ ಕಾರ್ಯತಂತ್ರಕ್ಕೆ  ಹಾಗೂ ಉತ್ಸಾಹಕ್ಕೆ ಒಗ್ಗೂ ವಂತಹ ಪರ್ಯಾಯ ನಾಯಕರನ್ನು ಜನರೇ ಆಯ್ಕೆ ಮಾಡಿದಂತೆ ಕಂಡು ಬರುತ್ತಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೊಸ ನಾಯಕನ ಹೆಸರು ಕೇಳಿಬರುತ್ತಿದ್ದು ಬಿಜೆಪಿ ಹೈಕಮಾಂಡ್ ಇವರ ಕದ ತಟ್ಟುವುದು ಬಹುತೇಕ ಖಚಿತವಾಗಿದೆ.

ಅಷ್ಟಕ್ಕೂ ಆ ನಾಯಕ ಯಾರು ಗೊತ್ತಾ ಹಾಗೂ ಆಯ್ಕೆ ಮಾಡಿದ ಹಿಂದಿನ ಕಾರಣವಾದರೂ ಏನಿರಬಹುದು??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಮಾನ್ಯ ಕಾರ್ಯಕರ್ತರು ಒಬ್ಬ ನಾಯಕನನ್ನು ತಾವೇ ಸ್ವತಹ ಆಯ್ಕೆ ಮಾಡಬೇಕು ಎಂದರೆ ಆ ನಾಯಕ ಜನರಿಗೆ ಹತ್ತಿರವಾಗಿರಬೇಕು, ಕಾರ್ಯಕರ್ತರೊಂದಿಗೆ ಬಹಳ ಆಪ್ತವಾಗಿ ನಿಷ್ಠೆಯಿಂದ ಪಕ್ಷ ಕಟ್ಟಲು ಹಾಗೂ ಯಾವುದೇ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಉತ್ಸಾಹದಿಂದ ಮುನ್ನುಗ್ಗಬೇಕು. ಇಷ್ಟು ಸಾಲದು, ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದರೇ ಆತ ಒಬ್ಬ ಸಮರ್ಥ ಹಿಂದೂ ನಾಯಕನಾಗಿರಬೇಕು, ಈ ಎಲ್ಲಾ ಅರ್ಹತೆ ಇರುವ ನಾಯಕರನ್ನು ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಸಾಮಾನ್ಯ ಜನರು ಅಳೆದು ತೂಗಿ ಆಯ್ಕೆ ಮಾಡಿದಂತೆ ಕೇಳಿ ಬರುತ್ತಿದೆ. ಈ ಹಿಂದೆ ಹಲವಾರು ಜನಪರ ಹೋರಾಟಗಳಲ್ಲಿ ತಮ್ಮನ್ನು ತಾವು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಧ್ವನಿ ಎತ್ತಿ ಅನ್ಯಾಯದ ವಿರುದ್ಧ ಹೋರಾಡಿದ ಎರಡು ದೊಡ್ಡ ಸಹಕಾರ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿರುವ ಯಶಪಾಲ್ ಸುವರ್ಣ ರವರ ಹೆಸರು ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ಇನ್ನು ಪಕ್ಷದ ಸಂಘಟನೆ ತಮ್ಮನ್ನು ತಾವು ತೊಡಗಿಸಿಕೊಂಡು ಆರ್ ಸ್ ಸ್ ಸಂಘಟನೆಯ ನಾಯಕರಾಗಿ ಗುರುತಿಸಿಕೊಂಡು, ಸಂಘದ ಶ್ರೀ ರಕ್ಷೆಯಲ್ಲಿ ಪಕ್ಷವನ್ನು ಮುನ್ನೆಡಿಸಿಕೊಂಡು  ಪಕ್ಷಕ್ಕಾಗಿ ನಿರಂತರವಾಗಿ ದುಡಿದು ಜನರ ಪರ ಧ್ವನಿ ಎತ್ತಿರುವ ಈ ನಾಯಕನ ಹೆಸರು ಕೇಳಿಬಂದ ತಕ್ಷಣ ವಿರೋಧ ಪಕ್ಷಗಳಲ್ಲಿ ನಡುಕ ಆರಂಭವಾಗಿದ್ದು ಸದಾ ಜನರ ಅಭಿಪ್ರಾಯವನ್ನು ಮನ್ನಣೆಗೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಆಯ್ಕೆಮಾಡುವ ಬಿಜೆಪಿ ಪಕ್ಷದ ಹೈಕಮಾಂಡ್ ಯಶಪಾಲ್ ಸುವರ್ಣ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಒಂದು ಲೋಕಸಭಾ ಕ್ಷೇತ್ರವನ್ನು ಮೋದಿ ರವರಿಗೆ ಉಡುಗೊರೆಯಾಗಿ ನೀಡಲು ಯಶಪಾಲ್ ಸುವರ್ಣ ರವರು ಸಿದ್ಧರಾಗುತ್ತಿದ್ದಾರೆ.