ಮೋದಿ ಬಜೆಟ್ ನ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನ ಹಿರಿಯ ನಾಯಕ: ಕೈಗೆ ಮತ್ತೊಮ್ಮೆ ಮುಖಭಂಗ

ಮೋದಿ ಬಜೆಟ್ ನ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನ ಹಿರಿಯ ನಾಯಕ: ಕೈಗೆ ಮತ್ತೊಮ್ಮೆ ಮುಖಭಂಗ

ನರೇಂದ್ರ ಮೋದಿ ಅವರು ಪಿಯೂಷ್ ಗೋಯಲ್ ರವರ ಬಜೆಟ್ ಮಂಡಿಸುವ ಸಮಯದಲ್ಲಿ ತಮ್ಮ ಎಡಗೈನ ಮೂಲಕ ತಟ್ಟುತ್ತಿದ್ದ ಶಬ್ದಗಳು ಹಾಗೂ ಅವರ ನಡೆ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಒಂದು ಕಡೆ ಬಿಜೆಪಿ ಪಕ್ಷದ ಬೆಂಬಲಿಗರು ಸಂಭ್ರಮದಲ್ಲಿ ತೊಡಗಿಕೊಂಡಿದ್ದರೆ ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ನಾಯಕರು ಈ ಬಜೆಟ್ ಅನ್ನು ಹೇಗೆ ದೂಷಿಸುವುದು ಎಂದು ಆಲೋಚಿಸುತ್ತಾ ಕುಳಿತಿದ್ದರು.ಕೊನೆಗೆ ವಿರೋಧ ಪಕ್ಷಗಳ ಕೈಗೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಯಾವುದೇ ಲೋಪಗಳು ಸಿಗದೇ ಇದ್ದಾಗ ಬೇರೆ ವಿಧಿಯಿಲ್ಲದೆ ಮಧ್ಯಂತರ ಬಜೆಟ್ ಎಂಬುದನ್ನು ಮರೆತು ಅದು ನೀಡಿಲ್ಲ ಇದು ನೀಡಿಲ್ಲ ಹಾಗೂ ಇದು ಕೇವಲ ಚುನಾವಣಾ ಬಜೆಟ್ ಎಂದು ಆರೋಪಗಳನ್ನು ಹೊರಿಸಲು ಆರಂಭಿಸಿದರು.

ಆದ್ಯಾಗೂ ಬಜೆಟ್ ಅನ್ನು ರಾಹುಲ್ ಗಾಂಧಿ ಅವರು ಒಪ್ಪಿಕೊಂಡ ತೆ ಕಾಣುತ್ತಿದೆ ಯಾಕೆಂದರೆ ಬಜೆಟ್ ಘೋಷಣೆಯಾದ ಕ್ಷಣದಿಂದಲೂ ಇದರ ಬಗ್ಗೆ ರಾಹುಲ್ ರವರು  ಧ್ವನಿ ಎತ್ತಿಲ್ಲ ಹಾಗೂ ಬಜೆಟ್ ಘೋಷಣೆಯ ವೇಳೆ ತಮಗೆ ಸಂಬಂಧವಿಲ್ಲ ಎಂಬಂತೆ ಗಾಡ ಯೋಚನೆಯಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕದ ಸಚಿವರಾಗಿರುವ ಹಲವಾರು ಕಾಂಗ್ರೆಸ್ ನಾಯಕರು ಬಜೆಟ್ ಅನ್ನು ವಿರೋಧಿಸುತ್ತಿದ್ದಾರೆ ಆದರೆ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ರಾಗಿರುವ ಜನಾರ್ಧನ ಪೂಜಾರಿ ರವರು ಮೋದಿ ರವರ ಬಜೆಟ್ ನ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಈ ಹಿಂದೆಯೂ ಹಲವಾರು ಬಾರಿ ಮೋದಿ ಅವರ ಬೆಂಬಲಕ್ಕೆ ನಿಂತಿದ್ದ ಕಾಂಗ್ರೆಸ್ ನಾಯಕ ಪೂಜಾರಿ ರವರು ಕೇಂದ್ರದ ಬಜೆಟ್ ಸಮಾಜದ ಪ್ರತಿಯೊಂದು ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಸಿದ್ಧಪಡಿಸಲಾಗಿದೆ. ಸಮಾಜಕ್ಕೆ ಸಮಾಧಾನ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರತಿಯೊಂದು ವರ್ಗದ ಜನತೆಗೆ ಅನುಕೂಲವಾಗುವಂತೆ ಉತ್ತಮ ಬಜೆಟ್ ಸಿದ್ಧಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ವಿಪಕ್ಷ ನಾಯಕರು ಮೋದಿ ರವರ ಬಜೆಟ್ ಕಂಡು ಅದನ್ನು ಅರಗಿಸಿಕೊಳ್ಳಲಾಗದ ದೂಷಿಸುತ್ತಿರುವ ಸಮಯದಲ್ಲಿ ಮೋದಿ ಅವರ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಗಿರುವ ಜನಾರ್ಧನ ಪೂಜಾರಿ ರವರು ನಿಂತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಮುಖಭಂಗ ಉಂಟಾಗಿದ್ದು ಜನರು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ ಬಿಡುತ್ತಾರೆ ಎಂಬ ಆತಂಕ ಎದುರಾಗಿದೆ.