ಜೆಡಿಎಸ್ ಗೆ ಬಿಗ್ ಶಾಕ್: ಪ್ರಜ್ವಲ್ ಸ್ಪರ್ಧಿಸಿದರೆ ಬಿಜೆಪಿ ಸೇರಲಿದ್ದಾರೆ ಕಾಂಗ್ರೆಸ್ ನಾಯಕ

ಜೆಡಿಎಸ್ ಗೆ ಬಿಗ್ ಶಾಕ್: ಪ್ರಜ್ವಲ್ ಸ್ಪರ್ಧಿಸಿದರೆ ಬಿಜೆಪಿ ಸೇರಲಿದ್ದಾರೆ ಕಾಂಗ್ರೆಸ್ ನಾಯಕ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೈತ್ರಿಯಲ್ಲಿ ಒಳಜಗಳ ಈಗಾಗಲೇ ಆರಂಭವಾಗಿದೆ ಸೀಟು ಹಂಚಿಕೆಯ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪರಸ್ಪರ ಹೊಡೆದಾಡಿ ಕೊಳ್ಳಲು ಆರಂಭಿಸಿವೆ. ಮತ್ತೊಂದು ಕಡೆ ಟಿಕೆಟ್ ಆಕಾಂಕ್ಷಿಗಳು ಸಹ ಹೆಚ್ಚಾಗುತ್ತಿದ್ದು ಪ್ರತಿಯೊಂದು ಕ್ಷೇತ್ರದಲ್ಲೂ ಭಿನ್ನಮತಗಳು ಭುಗಿಲೇಳುವ ಸಾಧ್ಯತೆ ಹೆಚ್ಚಾಗಿದೆ.

ಅದರಲ್ಲಿಯೂ ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಹಾಸನದಲ್ಲಿ ಮೊದಲಿನಿಂದಲು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಬದ್ಧ ವೈರಿಗಳಂತೆ ಕಾದಾಡುತ್ತ ಬಂದಿವೆ. ಇಂತಹ ಸಮಯದಲ್ಲಿ ಹೈ ಕಮಾಂಡ್ ನಾಯಕರು ಮೈತ್ರಿಯ ಮೊರೆಹೋದಲ್ಲಿ ಹಾಸನ ಜಿಲ್ಲೆಯನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಮೊದಲಿನಿಂದಲೂ ಸೂಪರ್ ಸಿಎಂ ಆಗಿರುವ ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಯಾವ ಒಬ್ಬ ನಾಯಕನನ್ನು ನೆಲೆಯೂರಲು ಬಿಟ್ಟಿಲ್ಲ. ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಕಾರಣ ಪ್ರತಿಬಾರಿಯೂ ದೇವೇಗೌಡರು ಹಾಸನ ಜಿಲ್ಲೆಯಲ್ಲಿ ಗೆದ್ದು ಬೀಗುತ್ತಿದ್ದರೂ, ಆದರೆ ಈ ಬಾರಿ ದೇವೇಗೌಡರು ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡಲು ಸಿದ್ಧವಾಗುತ್ತಿರುವ ವೇಳೆಯಲ್ಲಿ ಹಲವಾರು ವರ್ಷಗಳಿಂದ ಹಾಸನ ಜಿಲ್ಲೆಯನ್ನು ವಶಪಡಿಸಿಕೊಳ್ಳುವ ಕಾಂಗ್ರೆಸ್ ಕನಸು ಗರಿಗೆದರಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲಿನಿಂದಲೂ ರೇವಣ್ಣ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಗಿರುವ ಎ ಮಂಜುರವರು ಬದ್ಧ ವೈರಿಗಳಂತೆ ಪ್ರತಿಬಾರಿಯೂ ಚುನಾವಣೆಯಲ್ಲಿ ಕಾದಾಡುತ್ತಾರೆ. ಪ್ರತಿ ಬಾರಿ ಸೋಲನ್ನು ಕಂಡರೂ ಮಂಜು ರವರಿಗೆ ತಮ್ಮದೇ ಆದ ವರ್ಚಸ್ಸು ಹಾಸನ ಜಿಲ್ಲೆಯಲ್ಲಿ ಇದೆ ಎಂಬುದು ತಿಳಿದಿದೆ. ಆದ ಕಾರಣ ಈ ಬಾರಿಯಾದರೂ ಹಾಸನ ಜಿಲ್ಲೆಯನ್ನು ಗೆದ್ದು ಬೀಗಬೇಕೆಂದು ಎ ಮಂಜು ಕನಸು ಕಾಣುತ್ತಿದ್ದಾರೆ ಆದ್ರೆ ಮೈತ್ರಿ ಅದಕ್ಕೆ ಅಡ್ಡ ಬರುತ್ತಿದೆ.

ಮೈತ್ರಿ ಸರ್ಕಾರ ಮಂಜು ರವರ ಕನಸಿಗೆ ಕಲ್ಲು ಹಾಕಲು ಹೊರಟಿರುವ ಕಾರಣ ಎ ಮಂಜು ರವರಿಗೆ ಮೈತ್ರಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೆ ತನ್ನ ರಾಜಕೀಯ ಬದ್ಧ ವೈರ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದಿರುವ ಎ ಮಂಜುರವರು ಒಂದು ವೇಳೆ ಕಾಂಗ್ರೆಸ್ ಪಕ್ಷವು ಹಾಸನ ಜಿಲ್ಲೆಯನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಲ್ಲಿ  ಮಂಜುರವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ.

ತಮ್ಮ ರಾಜಕೀಯ ವೈರಿಯ ಮಗ ಲೋಕಸಭೆಗೆ ನಿಂತುಕೊಂಡಿದ್ದೇ ಆದಲ್ಲಿ ಆ ಸಮಯಕ್ಕೆ ಅವರು ಬಿಜೆಪಿಗೆ ಹೋಗುವುದಕ್ಕೂ ಹಿಂದೆ ಸರಿಯುವುದಿಲ್ಲ. ಏಕೆಂದರೆ ಹಾಸನ ಜಿಲ್ಲೆಯಲ್ಲಿ ಬೇರೆ ಯಾವ ನಾಯಕರು ಬೆಳೆಯದಂತೆ ಅಡ್ಡಗಾಲು ಹಾಕುತ್ತಿದ್ದಾರೆ ರೇವಣ್ಣ. ಈಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಸೂಪರ್ ಸಿಎಂ ಆಗಿರುವ ಇವರ ಮಗ ಲೋಕಸಭೆ ಸದಸ್ಯನಾಗಿ ಹೋದರೆ ಕಾಂಗ್ರೆಸ್​ ಕಾರ್ಯಕರ್ತರಿಗೆ ಉಳಿಗಾಲವಿಲ್ಲ.

ಮೊದಲಿನಿಂದಲೂ ಎ ಮಂಜು ಮತ್ತು ಎಚ್​ ಡಿ ರೇವಣ್ಣ ಅವರ ನಡುವೆ ರಾಜಕೀಯ ವೈಶಮ್ಯ. ಹಾಗಾಗಿ ಈ ಬಾರಿಯ ಲೋಕಸಭೆಯಲ್ಲಿ ದೇವೆಗೌಡ ಹೊರತಾಗಿ ಯಾರೇ ನಿಂತರು ನಾವು ಸುಮ್ಮನೆ ಕೂರುವುದಿಲ್ಲ ಎಂದು ಎ.ಮಂಜು ಅವರು ಗುಡುಗಿದ್ದಾರೆ.