ಮಾಜಿ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಮುಖಭಂಗ: ಸೋಲಿನ ಮುನ್ಸೂಚನೆಯೇ?

ಸಿದ್ದರಾಮಯ್ಯರವರ ಅದೃಷ್ಟ ಯಾಕೋ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ ಮೊನ್ನೆಯಷ್ಟೇ ಸಿದ್ದರಾಮಯ್ಯರವರು ಭಾಷಣ ಮಾಡುತ್ತಿದ್ದ ವೇಳೆಯಲ್ಲೇ ಸಾರ್ವಜನಿಕರು ಸಿದ್ದರಾಮಯ್ಯರವರ ಭಾಷಣದ ವಿರುದ್ಧ ರೊಚ್ಚಿಗೆದ್ದ ಸಮಾವೇಶವನ್ನು ಕೆಲವು ಕ್ಷಣಗಳ ಕಾಲ ತಡೆ ಹಿಡಿಯಲಾಗಿತ್ತು.

ಈಗ ಮತ್ತೊಮ್ಮೆ ಸಿದ್ದರಾಮಯ್ಯ ರವರಿಗೆ ಮುಖಭಂಗ ವಾಗುವಂತಹ ಘಟನೆಯೊಂದು ನಡೆದಿದ್ದು ಸಮಾವೇಶದಲ್ಲಿ ಭಾಷಣ ಮಾಡಲು ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೇವಲ 15 ನಿಮಿಷದಲ್ಲಿ ತಮ್ಮ ಭಾಷಣವನ್ನು ಮುಗಿಸಿ ವಾಪಸ್ಸು ಬರಬೇಕಾದ ಪರಿಸ್ಥಿತಿ ಎದುರಾಗಿದೆ.

ಕೋಲಾರ ನಗರದಲ್ಲಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ಷೀರ ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಂವಿ ಕೃಷ್ಣಪ್ಪ ರವರ ಜನ್ಮ ಶತಮಾನೋತ್ಸವವನ್ನು ಆಚರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ರವರು ಭಾಗವಹಿಸಿದ್ದರು.

ಸಿದ್ದರಾಮಯ್ಯರವರು ಭಾಷಣ ಆರಂಭಿಸುವ ವೇಳೆಯಲ್ಲಿ ರೈತರು ಇದ್ದಕ್ಕಿದ್ದಂತೆ ಎದ್ದು ಹೊರ ನಡೆದಿದ್ದಾರೆ ಗಣ್ಯರ ಗ್ಯಾಲರಿ ಹೊರತುಪಡಿಸಿ ಸಾರ್ವಜನಿಕರಿಂದ ಸಂಪೂರ್ಣ ಕುರ್ಚಿಗಳು ಖಾಲಿಯಾಗಿತ್ತು. ಇದನ್ನು ಕಂಡ ಸಿದ್ದರಾಮಯ್ಯರವರು ಮುಜುಗರವನ್ನು ತಪ್ಪಿಸಿಕೊಳ್ಳಲು ಕೇವಲ 15 ನಿಮಿಷದಲ್ಲಿ ಭಾಷಣ ಮುಗಿಸಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸು ತಿರುಗಿದರು.

Post Author: Ravi Yadav