ಸೇನಿಗೆ ಮತ್ತೊಂದು ಅಸ್ತ್ರ ಸೇರ್ಪಡೆ: ವಿರೋಧಿಗಳಲ್ಲಿ ನಡುಕ

ಸೇನಿಗೆ ಮತ್ತೊಂದು ಅಸ್ತ್ರ ಸೇರ್ಪಡೆ: ವಿರೋಧಿಗಳಲ್ಲಿ ನಡುಕ

ಭಾರತ ಸೇನೆಯು ನೆರೆಹೊರೆಯ ರಾಷ್ಟ್ರಗಳಿಂದ ಬಾರಿ ಸವಾಲುಗಳನ್ನು ಎದುರಿಸುತ್ತಿದೆ ಒಂದು ಕಡೆ ಚೀನಾ ದೇಶವು ಭಾರತದ ವಿರುದ್ಧ ಯಾವ ಕ್ಷಣದಲ್ಲಿ ಬೇಕಾದರೂ ಕಾಲು ಕೆರೆದು ಜಗಳಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನೊಂದು ಕಡೆ ಪಾಕಿಸ್ತಾನ ದೇಶವು ಸಹ ಇದಕ್ಕೆ ಹೊರತಲ್ಲ.

ಭಾರತದ ಸೈನಿಕರು ಎದೆಯೊಡ್ಡಿ ಯಾವ ಶಕ್ತಿಯನ್ನು ಬೇಕಾದರೂ ತಡೆದ ನಿಲ್ಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಆದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎರಡು ವಿರೋಧ ರಾಷ್ಟ್ರಗಳು ನೇರವಾಗಿ ಮುಂದೆ ಬಂದು ಹೋರಾಡುವ ಧೈರ್ಯ ಹೊಂದಿಲ್ಲ ಎರಡು ರಾಷ್ಟ್ರಗಳು ಕುತಂತ್ರ ನೀತಿಯನ್ನು ಅನುಸರಿಸಿ ಯಾವ ಸಮಯದಲ್ಲಿ ಬೇಕಾದರೂ ಕತ್ತಿ ಮಸೆಯುವ ಅವಕಾಶಗಳು ಹೆಚ್ಚಾಗಿವೆ ಆದ ಕಾರಣದಿಂದ ಪ್ರತಿ ಕ್ಷಣವೂ ಭಾರತೀಯ ಸೈನ್ಯ ಸವಾಲುಗಳನ್ನು ಎದುರಿಸುತ್ತಾ ದೇಶವನ್ನು ರಕ್ಷಿಸುತ್ತೀವೆ.

ಇಂತಹ ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ಸೈನ್ಯಕ್ಕೆ ನಿನ್ನೆಯಷ್ಟೇ ಮೋದಿ ಅವರು 2.5 ಲಕ್ಷ ಕೋಟಿ ಬಜೆಟ್ ಬದಲಾಯಿಸಿ 3 ಲಕ್ಷ ಕೋಟಿ ಬಜೆಟ್ ನೀಡುವುದಾಗಿ ಘೋಷಿಸಿದ್ದರು ಈ ಮೂಲಕ ಭಾರತೀಯ ಸೇನೆಯನ್ನು ಮತ್ತಷ್ಟು ಬಲಗೊಳಿಸುವುದು ನರೇಂದ್ರ ಮೋದಿ ಸರ್ಕಾರದ ಕನಸಾಗಿತ್ತು. ಮೋದಿ ಅವರ ಈ ಕಾರ್ಯಕ್ಕೆ ಬಾರಿ ಶ್ಲಾಘನೆಗಳು ವ್ಯಕ್ತವಾಗಿದ್ದವು, ಈಗ ಮತ್ತೊಮ್ಮೆ ಕೇವಲ 24 ಗಂಟೆಯಲ್ಲಿ ಭಾರತೀಯ ಸೇನೆಗೆ ಮತ್ತೊಂದು ಅಸ್ತ್ರವನ್ನು ಸೇರಿಸಲು ಮುಂದಾಗಿರುವ ಮೋದಿ ಸರ್ಕಾರ ವಿರೋಧ ಪಕ್ಷಗಳಲ್ಲಿ ಹಾಗೂ ವಿರೋಧಿ ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸಿದೆ.

ಬರೋಬ್ಬರಿ 40 ಸಾವಿರ ಕೋಟಿ ರು ವೆಚ್ಚದಲ್ಲಿ ದೇಶದ ಸೇನಾ ಪಡೆಗಳು ಹಾಗೂ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲು ಮುಂದಾಗಿರುವ ಮೋದಿ ಅವರ ನೇತೃತ್ವದ ಪಡೆ ಜಲಾಂತರ್ಗಾಮಿ ನಿರ್ಮಾಣ ಹಾಗೂ ಯುದ್ಧ ಟ್ಯಾಂಕ್‍ಗಳನ್ನು ಧ್ವಂಸ ಮಾಡಬಲ್ಲ ಕ್ಷಿಪಣಿಗಳನ್ನು ಹೊಂದಲು ಮಹತ್ವಪೂರ್ಣ ಯೋಜನೆಗೆ ನಾಂದಿ ಹಾಡಿದೆ.

ದೆಹಲಿಯಲ್ಲಿ ನಡೆದ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ ದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಯೋಜನೆಯನ್ವಯ 6 ಸಬ್ ಮೆರಿನ್ ಗಳನ್ನು ದೇಶಿಯವಾಗಿ ನಿರ್ಮಾಣ ಮಾಡಲಾಗುವುದು ಹಾಗೂ 5000 ಮಿಲನ್ 2d ಟ್ಯಾಂಕ್ ಪ್ರತಿರೋಧಕ ಮಾರ್ಗದರ್ಶಿ ಕ್ಷಿಪಣಿಗಳನ್ನು ಸೇನಾಪಡೆ ಗಳಿಗಾಗಿ ಖರೀದಿಸಲಾಗುತ್ತದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಅಣ್ವಸ್ತ್ರ ಸಾಮರ್ಥ್ಯದ ಎ ಎನ್ ಎಸ್ ಅರಿಹಂತ್ ಜಲಾಂತರ್ಗಾಮಿ ಗಾಗಿ ಅತ್ಯಾಧುನಿಕ ಪ್ರಬಲ ಸಿಡಿತಲೆ ಕ್ಷಿಪಣಿ ( ಟಾರ್ಪಿಡೊ) ಗಳನ್ನು ಹೊಂದಲು ಕೇಂದ್ರ ರಕ್ಷಣಾ ಸಚಿವಾಲಯವು ಅನುಮೋದನೆ ನೀಡಿದ್ದು ಈ ಮೂಲಕ ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂಬುದು ತಿಳಿದುಬಂದಿದೆ.

ಅತ್ಯಾಧುನಿಕ ಕ್ಷಿಪಣಿ ಗಳು, ಸಬ್ ಮೇರಿನ್ ಗಳು ಹಾಗೂ ಥ್ಯಾಂಕ್ ಪ್ರತಿರೋಧಕ ಮಾರ್ಗದರ್ಶಿ ಕ್ಷಿಪಣಿಗಳನ್ನು ಸೇನಾಪಡೆಗೆ ಸೇರಿಸಿಕೊಳ್ಳಲು ಕೇಂದ್ರ ಸರ್ಕಾರವು ಎಲ್ಲಾ ತಯಾರಿಗಳನ್ನು ಈಗಾಗಲೇ ಮಾಡಿಕೊಳ್ಳಲು ಸೂಚಿಸಿದೆ ಇದರಿಂದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳಿಗೆ ಮತ್ತೊಂದು ತಲೆನೋವು ಎದುರಾಗಿದ್ದು ಭಾರತೀಯ ನೌಕಾಪಡೆ ಮತ್ತಷ್ಟು ಬಲ ಗೊಳ್ಳಲಿದೆ. ಮತ್ತು ಸುದ್ದಿಗಳಿಗಾಗಿ ನಮ್ಮ ಪೇಜನ್ನು ಲೈಕ್ ಮಾಡುವ ಮೂಲಕ ಬೆಂಬಲಿಸಿ.