ದೇಶದಲ್ಲಿಯೇ ನಂಬರ್ 1 ಸಿಎಂ ಯಾರು ಗೊತ್ತಾ??? ಬೋಲೋ ಜೈ ಯೋಗಿ ಮಹರಾಜ್ ಕಿ

ದೇಶದಲ್ಲಿಯೇ ನಂಬರ್ 1 ಸಿಎಂ ಯಾರು ಗೊತ್ತಾ??? ಬೋಲೋ ಜೈ ಯೋಗಿ ಮಹರಾಜ್ ಕಿ

ದೇಶದಲ್ಲಿಯೇ ತಮ್ಮ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಭಾರಿ ಸುದ್ದಿ ಮಾಡುತ್ತಿರುವ ಮುಖ್ಯಮಂತ್ರಿಗಳು ಇಂದು ದೇಶದ ನಂಬರ್ ಒನ್ ಸಿಎಂ ಆಗಿ ಹೊರಹೊಮ್ಮಿದ್ದಾರೆ. ಅಪರಾಧಗಳಿಂದ ತುಂಬಿ ತುಳುಕುತ್ತಿದ್ದ ರಾಜ್ಯವನ್ನು ತಮ್ಮ ಅಧಿಕಾರಕ್ಕೆ ಬಂದ ತಕ್ಷಣ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡು ಅಪರಾಧ ಪ್ರಕರಣಗಳನ್ನು ಭಾರಿ ಪ್ರಮಾಣದಲ್ಲಿ ಕಡಿಮೆಗೊಳಿಸಿರುವ ಸಿಎಂ ರವರಿಗೆ ದೇಶದ ನಂಬರ್ ಒನ್ ಪಟ್ಟ ದಕ್ಕಿದೆ.

ಅಧಿಕಾರ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿರುವ ಈ ರಾಜ್ಯದ ಮುಖ್ಯಮಂತ್ರಿಗಳು, ಹಲವಾರು ಬಾರಿ ತಾವೇ ನೇರವಾಗಿ ಶಾಲೆಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ಇದ್ದಕ್ಕಿದ್ದಂತೆ ಭೇಟಿ ನೀಡಿ ಸರ್ಕಾರಿ ಅಧಿಕಾರಿಗಳ ಕಾರ್ಯ ವೈಖರಿಯನ್ನು ವೀಕ್ಷಿಸಿ ತಪ್ಪಿದ್ದಲ್ಲಿ ಅಲ್ಲೇ ಶಿಕ್ಷೆ ನೀಡಿ, ರಾಜ್ಯವನ್ನು ರಾಮರಾಜ್ಯ ಮಾಡುವಂತಹ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ??

ಇತ್ತೀಚಿಗೆ ಇಂಡಿಯಾ ಟುಡೇ  ಇನ್ಸೈಟ್ಸ್ ನೇಷನ್ ಮೂಡ ಸಂಸ್ಥೆ ಬಹಿರಂಗ ಸರ್ವ ಯೊಂದನ್ನು ಇಡೀ ದೇಶದಲ್ಲಿಯೇ ಅತ್ಯುತ್ತಮ ಮುಖ್ಯಮಂತ್ರಿ ಯಾರು ಎಂದು ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯ ವರದಿ ಬಹಿರಂಗಗೊಂಡಿದ್ದು ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ದೇಶದ ನಂಬರ್ ಒನ್ ಸಿಎಂ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ.

ಯೋಗಿ ಆದಿತ್ಯನಾಥ್ ರವರು ಉತ್ತಮ ಮುಖ್ಯಮಂತ್ರಿಯೆಂದು ಶೇಕಡಾ 40 ರಷ್ಟು ಜನ ಓಟ್ ಮಾಡಿದ್ದು ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶವಾಗಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಇದರ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಾಗಿದ್ದು, ಅಧಿಕಾರ ವಹಿಸಿಕೊಂಡ ಎರಡೇ ಎರಡು ವರ್ಷಗಳಲ್ಲಿ ಉತ್ತರ ಪ್ರದೇಶವು ಇನ್ನಿಲ್ಲದ ಅಭಿವೃದ್ಧಿಯನ್ನು ಕಂಡಿದ್ದು ರಾಮ ರಾಜ್ಯವಾಗುವತ್ತಾ ದಿಟ್ಟ ಹೆಜ್ಜೆಯನ್ನು ಇಟ್ಟಿರುವುದರಿಂದ ಯೋಗಿ ಆದಿತ್ಯನಾಥ ರವರಿಗೆ ಜನರು ಉಘೇ ಉಘೇ ಎಂದಿದ್ದಾರೆ.