ಕೊನೆಗೂ ಸೋಲೊಪ್ಪಿಕೊಂಡ ಡಿ ಕೆ ಶಿವಕುಮಾರ್ !? ಮೈತ್ರಿಗೆ ಬಿಗ್ ಶಾಕ್

ಕೊನೆಗೂ ಸೋಲೊಪ್ಪಿಕೊಂಡ ಡಿ ಕೆ ಶಿವಕುಮಾರ್ ? ಮೈತ್ರಿಗೆ ಬಿಗ್ ಶಾಕ್

0

ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದ ಕ್ಷಣದಿಂದಲೂ ಮೈತ್ರಿ ಸರ್ಕಾರಕ್ಕೆ ಇನ್ನಿಲ್ಲದ ಅಡೆ ತಡೆಗಳು ಉಂಟಾಗುತ್ತಿವೆ. ಚುನಾವಣಾ ಫಲಿತಾಂಶ ಬಂಡ ಕ್ಷಣದಿಂದಲೂ ಮೈತ್ರಿ ಸರ್ಕಾರ ರಚಿಸುವ ಉದ್ದೇಶದಿಂದ ಪಕ್ಷೇತರ ಶಾಸಕರನ್ನು ಸೆಳೆಯುವ ಕೆಲಸದಿಂದ ಹಿಡಿದು ಇಲ್ಲಿಯವರೆಗೂ ತನ್ನ ಮೈತ್ರಿಯಾ ಎಲ್ಲ ಶಾಸಕರನ್ನು ತಡೆ ಹಿಡುಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎನೀಸಿರಿವ ಡಿ ಕೆ ಶಿವಕುಮಾರ್ ರವರು ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.

ಪ್ರತಿ ಬಾರಿಯೂ ಇನ್ನೇನು ಸರ್ಕಾರ ಬೀಳುತ್ತದೆ ಎಂಬ ಊಹಾಪೋಹಗಳು ಹಬ್ಬುತ್ತಿದ್ದಂತೆ ಮೈತ್ರಿ ಸರ್ಕಾರವನ್ನು ಕಾಪಾಡುತ್ತಿದ್ದ ಟ್ರಬಲ್ ಶೂಟರ್ ಈಗ ಮೈತ್ರಿ ಸರ್ಕಾರವನ್ನು ಕಾಪಾಡಲು ಮುಂದೆ ಹೋಗುತ್ತಿಲ್ಲ. ಈ ಎಲ್ಲ ವಿದ್ಯಮಾನಗಳಿಂದ ಈಗಾಗಲೇ ಆತಂಕದಲ್ಲಿ ಇರುವ ಮೈತ್ರಿ ಸರ್ಕಾರವು ಮತ್ತಷ್ಟು ಆತಂಕಕ್ಕೆ ಒಳಗಾಗಿದೆ. ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?

ಒಂದು ಕಡೆ ಶಾಸಕರು ರಾಜೀನಾಮೆ ನೀಡುತ್ತಿದ್ದರೆ ತಡೆಯ ಬೇಕಿದ್ದ ಡಿ ಕೆ ಶಿವಕುಮಾರ್ ರವರು ಈಗ ಸುಮ್ಮನಾಗಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರಿರುವ ಸಿದ್ದರಾಮಯ್ಯ, ಪರಮೇಶ್ವರ್ ರವರ ವಿರುದ್ದ ಮುನಿಸಿಕೊಂಡಿರುವ ಡಿ ಕೆ ಶಿವಕುಮಾರ್ ರವರು ಬಾರಿ ಅಂತರವನ್ನು ಕಾಯ್ಡಕೊಂಡಿದ್ದಾರೆ. ಶಾಸಕರು ಇನ್ನೇನು ರಾಜೀನಾಮೆ ನೀಡುತ್ತೇವೆ ಎಂದಾಗ ಸದಾ ಮುಂಚೂಣಿಯಲ್ಲಿ ನಿಂತು ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದ್ದ ಅವರು ಈ ಬಾರಿ ಹೇಳಿಕೆಗೆ ಸೀಮಿತವಾಗಿದ್ದಾರೆ.

ಇಷ್ಟಲ್ಲ ನಡೆದರೂ ಮುಂಬೈ ಹೋಗುತ್ತಾರೆ ಎಂಬ ಸುದ್ದಿ ಒಂದು ಗಾಳಿ ಸುದ್ದಿ ಎಂದು ಬಯಲಾಗಿದೆ. ಈ ಸುದ್ದಿಯನ್ನು ನಿರಾಕರಿಸಿರುವ ಡಿ ಕೆ ಶಿವಕುಮಾರ್ ರವರ ಆಪ್ತ ಮೂಲಗಳು  ನರೇಂದ್ರ ಮೋದಿರವರ ಸರ್ಕಾರ ಆಯೋಜಿಸಿರುವ  ದೇಶದ ಎಲ್ಲಾ ಜಲಸಂಪನ್ಮೂಲ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಈ ವೇಳೆ ಮುಂಬೈ ನಲ್ಲಿ ಒಂದು ದಿನ ಉಳಿದುಕೊಳ್ಳಲಿದ್ದಾರೆ. ಶಿವಕುಮಾರ್ ಅವರ ಮುಂಬೈ ಪ್ರವಾಸಕ್ಕೂ ಶಾಸಕರ ಭೇಟೆಗೂ ಯಾವುದೇ ಸಂಬಂಧ ಇಲ್ಲ ಎಂಬುದು ತಿಳಿದುಬಂದಿದೆ.  ಇಷ್ಟೆಲ್ಲ ವಿದ್ಯಮಾನಗಳನ್ನು ಗಮನಿಸಿದ ಜನ ಸಾಮನ್ಯರು ಪರಿಸ್ತಿರಿ ಕೈಮೀರಿ ಹೋಗಿದೆ. ಡಿ ಕೆ ಶಿ ರವರ ಕೈಯಲ್ಲಿ ಏನು ಇಲ್ಲ. ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದಿದ್ದಾರೆ.