ಮೋದಿ ವಿರುದ್ಧ ಮಂಡಿಯೂರಿದ ಕೇಜ್ರಿವಾಲ್, ಸೋಲಿಗೂ ಮುಂಚೆ ಪಲಾಯನ

ಮೋದಿ ವಿರುದ್ಧ ಮಂಡಿಯೂರಿದ ಕೇಜ್ರಿವಾಲ್, ಸೋಲಿಗೂ ಮುಂಚೆ ಪಲಾಯನ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಅಲೆಯನ್ನು ಯಾರೂ ತಡೆಯಲು ಸಾಧ್ಯವಾಗಿರಲಿಲ್ಲ. ಹಲವಾರು ವಿರೋಧ ಪಕ್ಷದ ನಾಯಕರು ಮೋದಿ ರವರ ಅಲೆ ಅಷ್ಟಾಗಿ ಇಲ್ಲ ಮೋದಿ ಅವರು ಪ್ರಧಾನಿಯಾಗುವುದಿಲ್ಲ ಎಂಬ ಭವಿಷ್ಯವನ್ನು ನುಡಿಯುತ್ತ ಬಂದಿದ್ದರು. ಇನ್ನು ಕೆಲವರು ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಪ್ರಮಾಣ ಸಹ ಮಾಡಿದ್ದರು. ಆದರೆ ಇವೆಲ್ಲವನ್ನೂ ಮೀರಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆ ಏರಿದರು.

ಈ ಎಲ್ಲ ವಿದ್ಯಮಾನಗಳ ನಡುವೆ ಮೋದಿ ಅವರನ್ನು ಸೋಲಿಸುತ್ತೇವೆ ಎಂದು ಕೇಜ್ರಿವಾಲ್ ರವರು ಬೀಗಿ, ನೇರವಾಗಿ ಮೋದಿ ರವರ ವಿರುದ್ಧ ಕಣಕ್ಕಿಳಿದಿದ್ದರು ಆದರೆ ಭಾರಿ ಅಂತರದಲ್ಲಿ ಸೋತು ಮೋದಿ ರವರ ಅಲೆಯಲ್ಲಿ ಕೊಚ್ಚಿ ಹೋಗಿದ್ದರು.

ಇಷ್ಟಕ್ಕೆ ಸುಮ್ಮನಾಗದ ಕೇಜ್ರಿವಾಲ್ ಅವರು ಪ್ರತಿ ಸಭೆಯಲ್ಲಿಯೂ ನರೇಂದ್ರ ಮೋದಿ ಅವರನ್ನು ಮುಂದಿನ ಬಾರಿ ಸೋಲಿಸುತ್ತೇವೆ, ಮೋದಿ ರವರ ಬಣ್ಣ ಬಯಲಾಗಿದೆ ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದರು. ಈತನ್ಮಧ್ಯೆ ಮತ್ತೊಮ್ಮೆ ಮೋದಿ ಅವರ ವಿರುದ್ಧ ಕೇಜ್ರಿವಾಲ್ ಅವರು ಸ್ಪರ್ಧಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಇದೀಗ ಕೇಜ್ರಿವಾಲ್ ರವರು ಉಲ್ಟಾ ಹೊಡೆದಿದ್ದಾರೆ ನರೇಂದ್ರ ಮೋದಿ ಅವರನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದ ಕೇಜ್ರಿವಾಲ್ ರವರು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗಳು ವ್ಯಕ್ತವಾಗಿವೆ. ಹೌದು ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥರಾಗಿರುವ ಅರವಿಂದ ಕೇಜ್ರಿವಾಲ್ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.

2014ರ ಸೋಲಿಗೆ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಮೊದಲಿನಿಂದಲೂ ಹೇಳುತ್ತಿದ್ದ ಕೇಜ್ರಿವಾಲ್ ಅವರು ಇದ್ದಕ್ಕಿದ್ದಂತೆ ಯು ಟರ್ನ್ ಹೊಡೆದಿರುವುದು ಎಲ್ಲರ ಹುಬ್ಬೇರಿಸಿದೆ ಆದರೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕಂಡ ವಾರಣಾಸಿಯಲ್ಲಿ ಮೋದಿ ಅವರನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದ ಕೆಜಿ ವಾಲ್ ರವರು ಹಿಂದೆ ಸರಿದಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.