ವಿಶ್ವದ ಶ್ರೇಷ್ಠ ನಾಯಕನ ಪಟ್ಟ ಮೋದಿ ಮುಡಿಗೆ,ಪ್ರಶಸ್ತಿ ಪಡೆದ ಮೊದಲ ಭಾರತೀಯ

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಯಾವುದು ಉಚಿತ ಯೋಜನೆಗಳನ್ನು ನೀಡಿ ಇವರು ಪ್ರಶಸ್ತಿಗಳನ್ನು ಪಡೆದಿಲ್ಲ ಬದಲಾಗಿ ಜನಪರ ನಾಯಕ ಎಂದು ನಿರೂಪಿಸಿ ಜನರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಸದೃಢವಾಗಿ ನಾಲ್ಕು ವರ್ಷಗಳ ಕಾಲ ಮುನ್ನಡೆಸಿ ಈ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಈಗ ಮತ್ತೊಮ್ಮೆ ಮೋದಿ ಅವರು ವಿಶ್ವದ ಅತ್ಯುತ್ತಮ ಬಲಿಷ್ಠ, ಜನಪರ ನಾಯಕ ಎಂದು ಸಾರಿ ಹೇಳುವಂತೆ ಇದುವರೆಗೂ ಭಾರತದ ಯಾವ ಪ್ರಧಾನಿ ಪಡೆಯದ ಪ್ರಶಸ್ತಿಯನ್ನು ನರೇಂದ್ರ ಮೋದಿ ರವರ ಪಡೆದು ವಿಶ್ವಕ್ಕೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ.

ಅಷ್ಟಕ್ಕೂ ಆ ಪ್ರಶಸ್ತಿ ಯಾವುದು ಗೊತ್ತಾ ಮತ್ತು ಆ ಪ್ರಶಸ್ತಿಯನ್ನು ಯಾಕೆ ನೀಡಲಾಗುತ್ತದೆ ಗೊತ್ತಾ?

ನರೇಂದ್ರ ಮೋದಿ ರವರು 4 ವರ್ಷಗಳ ಕಾಲ ಭಾರತವನ್ನು ಅತ್ಯುತ್ತಮವಾಗಿ ಮುನ್ನಡೆಸಿದ ಕಾರಣಕ್ಕಾಗಿ ಫೀಲಿಪ್ ಕೊಟ್ಲರ್ ಅಂತರಾಷ್ಟ್ರೀಯ ಪ್ರಶಸ್ತಿ ನರೇಂದ್ರ ಮೋದಿ ಅವರಿಗೆ ಇಂದು ದಕ್ಕಿದೆ.

ಅವರ ಪಾರದರ್ಶಕ ಆಡಳಿತ, ಬಿಡುವಿಲ್ಲದ ಕಾರ್ಯವೈಕರಿ, ಕೆಲವು ಖಡಕ್ ನಿರ್ಧಾರಗಳಿಂದ ಭಾರತದ ಆರ್ಥಿಕತೆ ಬೆಳೆದಿದ್ದು ಸಾಮಾಜಿಕವಾಗಿ ಹಾಗೂ ತಾಂತ್ರಿಕತೆ ವಿಭಾಗದಲ್ಲಿ ಭಾರತ ಅತ್ಯಾಧುನಿಕ ದೇಶವಾಗಿ ಮಾರ್ಪಟ್ಟಿದೆ. ಆದ ಕಾರಣದಿಂದ ನರೇಂದ್ರ ಮೋದಿ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೆ ಮೇಕ್ ಇನ್ ಇಂಡಿಯಾ ಸ್ಟಾರ್ಟ್ ಅಪ್ ಇಂಡಿಯಾ ಡಿಜಿಟಲ್ ಇಂಡಿಯಾ ಹಾಗೂ ಸ್ವಚ್ಛ ಭಾರತ ಎಂಬ ಯೋಜನೆಗಳಿಂದ ಭಾರತವನ್ನು ಬೃಹತ್ ಆರ್ಥಿಕತೆ ದೇಶ ಹಾಗೂ ಉದ್ಯಮಿಗಳಿಗೆ ಸೂಕ್ತವಾದ ದೇಶ ಎಂದು ಪರಿಗಣಿಸಿದ ಕಾರಣ ನರೇಂದ್ರ ಮೋದಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಭಾರತಕ್ಕೆ ಇದೊಂದು ಐತಿಹಾಸಿಕ ದಿನ ಯಾಕೆಂದರೆ ಇದುವರೆಗೂ ಭಾರತದ ಯಾವ ಪ್ರಧಾನಿಯೂ ಸಹ ಈ ಪ್ರಶಸ್ತಿಗೆ ಭಾಜನರಾಗಿ ರಲಿಲ್ಲ ಹಾಗೂ ವಿಶ್ವದ ಅದೆಷ್ಟೋ ನಾಯಕರು ಈ ಪ್ರಶಸ್ತಿ ತಮಗೆ ದಕ್ಕಲಿ ಎಂದು ಕಾದು ಕುಳಿತಿರುತ್ತಾರೆ ಆದರೆ ನರೇಂದ್ರ ಮೋದಿ ಅವರು ಯಾವ ಪ್ರಶಸ್ತಿಗೂ ಕಾದು ನೋಡದೆ ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ದುಡಿದ ಶ್ರಮದಿಂದಾಗಿ ಅವರಿಗೆ ಈ ಪ್ರಶಸ್ತಿ ದಕ್ಕಿದೆ ಇದಕ್ಕೆ ನಿಜವಾಗಲೂ ಅವರು ಅರ್ಹರು ಎಂಬುದು ನಮ್ಮ ಅಭಿಪ್ರಾಯ ಒಂದು ವೇಳೆ ನಿಮಗೂ ಹಾಗೆ ಅನಿಸಿದರೆ ಶೇರ್ ಮಾಡಿ.

Post Author: Ravi Yadav