ದುಬೈನಲ್ಲಿ ಬಾಲಕಿ ಪ್ರಶ್ನೆಗೆ ತಬ್ಬಿಬ್ಬಾದ ರಾಹುಲ್: ಏನ್ ಸ್ವಾಮಿ ಕಥೆ??

ದುಬೈನಲ್ಲಿ ಬಾಲಕಿ ಪ್ರಶ್ನೆಗೆ ತಬ್ಬಿಬ್ಬಾದ ರಾಹುಲ್: ಏನ್ ಸ್ವಾಮಿ ಕಥೆ??

ರಾಹುಲ್ ಗಾಂಧಿ ರವರು ಸುಖಾಸುಮ್ಮನೆ ಇನ್ನಿಲ್ಲದ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು ನಗೆ ಪಾಟಲಿಗೆ ಒಳಗಾಗುತ್ತಾರೆ ಎಂಬ ಆರೋಪವಿದೆ. ಕಳೆದ ಬಾರಿ ಮೈಸೂರಿನಲ್ಲಿ ಸಂದರ್ಶನ ಏರ್ಪಡಿಸಿದಾಗ ಎನ್ ಸಿ ಸಿ ಬಗ್ಗೆ ತಿಳಿದಿಲ್ಲ ಎಂಬ ಉತ್ತರದಿಂದ ಭಾರಿ ಟೀಕೆಗೆ ಒಳಗಾಗಿದ್ದರು. ಇನ್ನು ಸದಾ ಸಂದರ್ಶನ ಮಾಡುವುದಿಲ್ಲ ಎಂದು ಮೋದಿ ಅವರನ್ನು ಕೆಣಕುವ ರಾಹುಲ್ ರವರು ತಮ್ಮ ಸಂದರ್ಶನದಲ್ಲಿ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾಗಿದ್ದಾರೆ. ಈ ರೀತಿಯ ಹಲವಾರು ಘಟನೆಗಳು ಈಗಾಗಲೇ ನಡೆದಿವೆ. ಒಂದು ವೇಳೆ ಇದು ಹೀಗೆ ಮುಂದುವರೆದಲ್ಲಿ ರಾಹುಲ್ ಗಾಂಧಿ ರವರಿಗೆ ಚುನಾವಣಾ ಸಮಯದಲ್ಲಿ ಬಹಳ ದೊಡ್ಡ ಹೊಡೆತ ಬೀಳುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಅಷ್ಟೇ ಅಲ್ಲದೆ ಕಳೆದ ಕಳೆದ ಸಿಂಗಾಪೂರ್ ಪ್ರವಾಸ ದಲ್ಲಿಯೂ ಸಹ ಸಂದರ್ಶನ ಏರ್ಪಡಿಸಿದಾಗ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಬೆಚ್ಚಿಬಿದ್ದಿದ್ದರು. ಇನ್ನು ಹೀಗೆ ಹೇಳುತ್ತಾ ಹೋದರೆ ಹಲವಾರು ಸನ್ನಿವೇಶಗಳು ನಮಗೆ ನೆನಪಿಗೆ ಬರುತ್ತವೆ ಅದರಲ್ಲಿ ಅನೇಕ ಕಾಲೇಜುಗಳಲ್ಲಿ ನಡೆದ ಸನ್ನಿವೇಶಗಳು ಸಹ ಸೇರಿವೆ.ಈಗ ಮತ್ತೊಮ್ಮೆ ರಾಹುಲ್ ರವರು ಅದೇ ರೀತಿಯ ಮುಜುಗರಕ್ಕೆ ಒಳಗಾಗಿದ್ದಾರೆ.  ಈ ಘಟನೆ ಇಡೀ  ದೇಶವೇ ಪಸರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಇದರಿಂದ ಇಡೀ ಕಾಂಗ್ರೆಸ್ ಪಕ್ಷದ ಮುಜುಗರಕ್ಕೆ ಒಳಗಾಗಿದೆ. ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ..

ದುಬೈ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ರವರು ಭಾರತ ದೇಶದ ರಾಜಕೀಯವನ್ನು ಉದ್ದೇಶಿಸಿ ಸಂವಾದ ನಡೆಸುತ್ತಿರುವಾಗ ಕೇವಲ ಹದಿನಾಲ್ಕು ವರ್ಷದ ಪುಟ್ಟ ಬಾಲಕಿಯೊಬ್ಬಳು ಕೇಳಿದ ಎರಡು ಪ್ರಶ್ನೆಗಳಿಗೆ ರಾಹುಲ್ ರವರು ತಬ್ಬಿಬ್ಬಾಗಿ ಏನು ತೋಚಿದಂತೆ ನೋಡಿದ್ದಾರೆ.ಇದರಿಂದ ಕಾರ್ಯಕ್ರಮ ಸಹ ಕೆಲವು ಕಾಲ ಸ್ಥಗಿತಗೊಂಡಿದ್ದ ಘಟನೆಯು ಸಹ ನಡೆದಿದೆ.ಒಟ್ಟಿನಲ್ಲಿ ಈ ಪುಟ್ಟ ಬಾಲಕಿಯ ಪ್ರಶ್ನೆಗಳಿಗೆ ಉತ್ತರಿಸಲಾಗದೆ  ರಾಹುಲ್ ಬೆಪ್ಪಾಗಿದ್ದರೆ.  ಆ ಪುಟ್ಟ ಬಾಲಕಿಯ ಪ್ರಶ್ನೆಗಳು ಕೆಳಕಂಡಂತೆ ಇವೆ ಓದಿ.

೧. ನೀವು ಭಾರತ ದೇಶವನ್ನು ಜಾತಿವಾದಿ ಎಂದು ಹೇಳುತ್ತಿದ್ದೀರಿ ಹಾಗಾದರೆ ನೀವು ಗುಜರಾತಿನ ಚುನಾವಣಾ ವೇಳೆಯಲ್ಲಿ ಯಾವ ಕಾರಣಕ್ಕಾಗಿ ಮಂದಿರಗಳಿಗೆ ಭೇಟಿ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರಾಹುಲ್ ಗಾಂಧಿ ರವರಿಂದ ಉತ್ತರ ದೊರೆಯದೆ ತನ್ನ ಎರಡನೇ ಪ್ರಶ್ನೆಯನ್ನು ಬಾಲಕಿಯು ಮುಂದಿಟ್ಟಿದ್ದಾರೆ.

೨. ಸ್ವತಂತ್ರ ಭಾರತವನ್ನು ಇಲ್ಲಿಯವರೆಗೂ ಶೇಕಡ 80 ಕ್ಕೂ ಹೆಚ್ಚು ಅವಧಿ ನಿಮ್ಮ ಕಾಂಗ್ರೆಸ್ ಪಕ್ಷ ಆಳಿದೆ, ಇಲ್ಲಿಯವರೆಗೂ ಯಾವ ಬದಲಾವಣೆಯನ್ನು ತಂದಿದೆ ಎಂದು ಪ್ರಶ್ನಿಸಿದ್ದಾರೆ..

ಈ ಪ್ರಶ್ನೆಗಳಿಂದ ರಾಹುಲ್ ರವರು ತಬ್ಬಿಬ್ಬಾಗಿದ್ದಾರೆ, ಇದನ್ನು ಕಂಡ ಕಾರ್ಯಕ್ರಮದ ಆಯೋಜಕರು ಈ ಕಾರ್ಯಕ್ರಮದ ನೇರಪ್ರಸಾರವನ್ನು ಕೆಲ ಕ್ಷಣಗಳವರೆಗೆ ತಡೆಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಕೇವಲ ಹದಿನಾಲ್ಕು ವರ್ಷದ ಬಾಲಕಿಯ ಪ್ರಶ್ನೆಗಳಿಗೆ ಉತ್ತರಿಸಲಾಗದ ರಾಹುಲ್ ರವರು ಇತರ ದೇಶಗಳಿಗೆ ಹೋಗಿ ಭಾರತದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂಬುದು ನಮ್ಮ ಅಭಿಪ್ರಾಯ.