ಸಚಿವರನ್ನು ನೇರವಾಗಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ರೈತ

ಸಚಿವರನ್ನು ನೇರವಾಗಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ರೈತ

ರಾಜ್ಯ ಸರ್ಕಾರವು ತಿಂಗಳುಗಳು 6 ಸಾಧನೆಗಳು ನೂರಾರು ಎಂಬ ಫಲಕವನ್ನು ಎಲ್ಲೆಡೆ ಪಸರಿಸುತ್ತಿದೆ. ಆದರೆ ಆ ರಾಜ್ಯವು ಯಾವುದೇ ಅಭಿವೃದ್ಧಿಯನ್ನು ಕಾಣುತ್ತಿಲ್ಲ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ ಅಷ್ಟೇ ಅಲ್ಲದೆ ಇದರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ನಾವು ನೋಡಿದ್ದೇವೆ.

ಇಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡಿ ನೇರವಾಗಿ ತೋಟಗಾರಿಕಾ ಸಚಿವರನ್ನು ಸಹನೆಯ ಕಟ್ಟೆ ಒಡೆದ ರೈತ ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಯಾವ ಮಾಧ್ಯಮದವರ ಮುಂದೆ ಅಲ್ಲ ಬದಲಾಗಿ ತೋಟಗಾರಿಕ ಸಚಿವರು ಭಾಷಣ ಮಾಡುತ್ತಿದ್ದ ವೇಳೆಯಲ್ಲೇ ಸಭೆಯಲ್ಲಿ ಎದ್ದು ನಿಂತರೆ ಪ್ರಶ್ನೆಗಳ ಸರಮಾಲೆ ಗಳನ್ನು ಹರಿಸಿದ್ದಾನೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ??

ತೋಟಗಾರಿಕಾ ಸಚಿವ ರಾದ ಎಂ ಸಿ ಮನಗೂಳಿ ರವರು ಇಂದು ವಿಜಯಪುರ ನಗರದಲ್ಲಿ ಸಾವಯುವ ಮತ್ತು ಸಿರಿ ದಾನ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆಯಲ್ಲಿ ರಾಜ್ಯ ಸರ್ಕಾರ ರೈತರಿಗಾಗಿ ಅದು ಮಾಡಿದೆ ಇದು ಮಾಡಿದೆ ಎಂದು ಬೀಗುತ್ತಿರುವಾಗ ಇದ್ದಕ್ಕಿದ್ದ ಹಾಗೆ ಇದ್ದ ರೈತ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ನೀವು ಯಾವ ಸಾಧನೆಗಳನ್ನು ಮಾಡಿದ್ದೀರಿ ಯಾವ ತಾಲೂಕಿನಲ್ಲಿ ಜಾನುವಾರಗಳಿಗೆ ಮೇವು ಕೊಟ್ಟಿದ್ದೀರಿ, ಹೀಗೆ ಪ್ರಶ್ನೆ ಮಾಡುತ್ತಾ ರೈತರೊಬ್ಬರು ಸಚಿವರಾದ ಎಂ ಸಿ ಮನಗೂಳಿರವರನ್ನು ಉತ್ತರ ತೆಗೆದುಕೊಂಡಿದ್ದಾರೆ ಇನ್ನು ಇದಕ್ಕೆ ಉತ್ತರಿಸಿರುವ ಸಚಿವರು ಬರ ಅಧ್ಯಯನ ನಡೆಸಿದ್ದೇನೆ ಸಭಿ ಮಾಡಿ ಮೇವು ಒದಗಿಸಲು ಸೂಚಿಸುತ್ತೇನೆ ಎಂದು ಸಭೆಯಿಂದ ಜಾರಿಕೊಂಡರು.