ಬಿತ್ತು ಮಹಾಘಟಬಂಧನದ ಮೊದಲನೇ ವಿಕೆಟ್: ಹೊರಬಂದ ನಾಯ್ಡು !!

ಬಿತ್ತು ಮಹಾಘಟಬಂಧನದ ಮೊದಲನೇ ವಿಕೆಟ್: ಹೊರಬಂದ ನಾಯ್ಡು !!

ಕಳೆದ ಕೆಲವು ದಿನಗಳಿಂದ ಮೋದಿಯವರನ್ನ ಸೋಲಿಸುತ್ತೇವೆ ಎಂದು ಹಗಲು ಕನಸು ಕಾಣುತ್ತಿದ್ದ ಚಂದ್ರಬಾಬು ನಾಯ್ಡು ರವರಿಗೆ ಬಿಗ್ ಶಾಕ್ ಎದುರಾಗಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲ ಎಂದು ಬಿಜೆಪಿ ಜೊತೆ ಮೈತ್ರಿ ಅನ್ನು ತೊರೆದುಕೊಂಡು ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಲು ಸಂಸತ್ತಿನಲ್ಲಿ ವೋಟಿಂಗ್ ನಡೆಸಿದ್ದ ಚಂದ್ರಬಾಬು ನಾಯ್ಡು ರವರು ಈಗ ತಮ್ಮ ಪಕ್ಷದ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ಕೆಲವು ದಿನಗಳಿಂದ ಮಹಾ ಮೈತ್ರಿಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದ ನಾಯ್ಡುರವರು ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೊತೆ ಸೇರಿಕೊಂಡು ಚುನಾವಣೆಯನ್ನು ಎದುರಿಸಿದ್ದರು. ಆದರೆ ಬುದ್ದಿವಂತರಾದ ತೆಲಂಗಾಣ ಮತದಾರರು ಕೇವಲ ಎರಡೇ ಎರಡು ಸೀಟುಗಳನ್ನು ಮಾತ್ರ ಟಿಡಿಪಿ ಪಕ್ಷಕ್ಕೆ ನೀಡಿದ್ದರು. ತೆಲಂಗಾಣದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕೆಸಿಆರ್ ಅವರು ನಾಯ್ಡು ಅವರಿಗೆ ಸರಿಯಾದ ಬುದ್ಧಿಯನ್ನು ಕಲಿಸಿದ್ದರು.

ಇದರಿಂದ ಸಾಮಾನ್ಯವಾಗಿಯೇ ಮೈತ್ರಿ ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆ ನಾಯ್ಡುರವರ ತಲೆಯಲ್ಲಿ ಹಲವಾರು ದಿನಗಳಿಂದ ಕಾಡುತ್ತಿತ್ತು. ಅಷ್ಟೇ ಅಲ್ಲದೆ ತೆಲಂಗಾಣ ಚುನಾವಣೆಯ ನಂತರ ಟಿಡಿಪಿ ಶಾಸಕರನ್ನು ಕಾಂಗ್ರೆಸ್ ಪಕ್ಷವು ಅಂದುಕೊಂಡಂತೆ  ಸರಿಯಾಗಿ ನಡೆಸಿ ಕೊಳ್ಳಲಿಲ್ಲ. ಇದರಿಂದ ಸಾಮಾನ್ಯವಾಗಿಯೇ ಟಿಡಿಪಿ ಪಕ್ಷದ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.

ಇಷ್ಟೇ ಅಲ್ಲದೆ ಈಗಾಗಲೇ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷದ ನಡುವಿನ ಮೈತ್ರಿಯನ್ನು ಹಲವಾರು ಟಿಡಿಪಿ ನಾಯಕರು ಒಪ್ಪುತ್ತಿಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ವಿರುದ್ಧ ಈ ಪಕ್ಷವನ್ನು ಸ್ಥಾಪಿಸಲಾಗಿತ್ತು ಆದರೆ ಈಗ ಕೇವಲ ಮತಗಳಿಗಾಗಿ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸುವುದು ಎಷ್ಟು ಸರಿ ಎಂದು ಪಕ್ಷದ ಹಿರಿಯ ನಾಯಕರು ಧ್ವನಿ ಎತ್ತಿದ್ದಾರೆ.  ಒಂದು ವೇಳೆ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿದರೆ ಹಲವಾರು ಶಾಸಕರು ಟಿಕೆಟ್ ಕಳೆದುಕೊಳ್ಳಬೇಕಾಗುತ್ತದೆ ಇದನ್ನು ಅರಿತಿರುವ ಹಲವಾರು ನಾಯಕರು ಚಂದ್ರಬಾಬು ನಾಯ್ಡು ರವರ ವಿರುದ್ಧ ಧ್ವನಿ ಎತ್ತಿದ್ದಾರೆ.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾಯ್ಡುರವರು ಆಂಧ್ರ ಪ್ರದೇಶದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಖಚಿತವಾಗಿಯೂ ಪಕ್ಷದಲ್ಲಿ ಆಂತರಿಕ ಯುದ್ಧ ನಡೆಯುತ್ತದೆ ಎಂದು ಖಚಿತಪಡಿಸಿಕೊಂಡು ನಾಯ್ಡುರವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ವಿಧಾನಸಭಾ ಚುನಾವಣೆಯನ್ನು ಎದುರಿಸುವುದಾಗಿ ಘೋಷಿಸಿದ್ದಾರೆ.

ಸಾಮಾನ್ಯವಾಗಿಯೇ ನಾಯ್ಡು ರವರ ಈ ನಿರ್ಧಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಆಗಿದ್ದು, ಈ ಮೈತ್ರಿಯ ಬಿರುಕು ಲೋಕಸಭಾ ಚುನಾವಣೆಯ ಮೇಲೆ ಕರಿನೆರಳು ಬೀಳಲಿದೆ ಎಂದರೆ ತಪ್ಪಾಗಲಾರದು ಏಕೆಂದರೆ ಈಗಾಗಲೇ ಬನ್ನಿ ಎತ್ತಿರುವ ಹಲವಾರು ಹಿರಿಯ ನಾಯಕರು ಎಲ್ಲರೂ ಸಂಸದರೇ, ಒಂದು ವೇಳೆ ಕಾಂಗ್ರೆಸ್ ಪಕ್ಷ ಜೊತೆಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಲ್ಲಿ ಖಚಿತವಾಗಿಯೂ ಆಗಲೂ ಸಹ ಧ್ವನಿ ಎತ್ತುವುದರಲ್ಲಿ ಅನುಮಾನವೇ ಇಲ್ಲ.

ಈ ಎಲ್ಲಾ ನಡೆ-ನುಡಿಗಳನ್ನು ಗಮನಿಸಿದರೆ ಮಹಾಘಟಬಂಧನ್ ಕೇವಲ ಒಂದು ಊಹಾಪೋಹದ ವಸ್ತು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನರೇಂದ್ರ ಮೋದಿ ಅವರನ್ನು ಸೋಲಿಸಬೇಕು ಎಂದು  ಅಸಾಧ್ಯದ ಕನಸನ್ನು ಕಟ್ಟಿಕೊಂಡಿದ್ದ ಮಹಾ ಘಟಬಂಧನ್ ಚುನಾವಣೆಗೂ ಮುನ್ನವೇ ಕೊನೆಯಾಗಲಿದೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.