ದುಡಿದ ಹಣವೆಲ್ಲಾ ದಾನ ಮಾಡಿದ ನಟಿ ಕಾಂಚನಾ ಕೈ ಬಿಡಲಿಲ್ಲ ಭಗವಂತ. ಮನಮುಟ್ಟುವ ಸ್ಟೋರಿ ಒಮ್ಮೆ ಓದಿ.

ದುಡಿದ ಹಣವೆಲ್ಲಾ ದಾನ ಮಾಡಿದ ನಟಿ ಕಾಂಚನಾ ಕೈ ಬಿಡಲಿಲ್ಲ ಭಗವಂತ. ಮನಮುಟ್ಟುವ ಸ್ಟೋರಿ ಒಮ್ಮೆ ಓದಿ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ನಟಿ ಕಾಂಚನ ಅವರ ನಟನೆ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಬರೋಬ್ಬರಿ ನೂರಾ ಐವತ್ತು ಚಿತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿ ನಂಬರ್ ಒನ್ ನಟಿಯಾಗಿ ಮೆರೆದಿದ್ದರು. ಕೇವಲ ದಕ್ಷಿಣ ಭಾರತದ ಚಿತ್ರಗಳಲ್ಲಿ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲಿಯೂ ಸಹ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡು ಹಿಂದಿ ನಟಿಯರಿಗೆ ಸ್ಪರ್ಧಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಆದರೆ ನೀವು ನೋಡಿರುವ ಅವರ ಜೀವನ ಅವರ ಜೀವನ ಕೇವಲ ಚಿತ್ರರಂಗದ ಜೀವನವಾಗಿದೆ.ಅಸಲಿಗೆ ಚಿತ್ರರಂಗದ ಹಿಂದೆ ಇರುವ ಅವರ ನೈಜ ಜೀವನವನ್ನು ನಾವು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ.

ಹುಟ್ಟಿನಿಂದಲೇ ಶ್ರೀಮಂತರಾಗಿದ್ದ ಖ್ಯಾತ ನಟಿ ಕಾಂಚನ ರವರು ವ್ಯಾಪಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಪ್ಪ ಅಮ್ಮನ ಮುದ್ದು ಮಗಳಾಗಿ ಬೆಳೆದರು. ಹಣ ಇದ್ದರೂ ತಂದೆ ತಾಯಿ ಪ್ರೀತಿ ಇವರಿಗೆ ಸಿಗಲಿಲ್ಲ,  ಬದಲಾಗಿ ಚಿಕ್ಕಂದಿನಿಂದಲೇ ಒಂಟಿಯಾಗಿ ತಮ್ಮ ಮನೆಯಲ್ಲಿ ಕಾಲ ಕಳೆದರು. ಇದೇ ಸಮಯದಲ್ಲಿ ಒಬ್ಬಂಟಿಯಾಗಿದ್ದ ಇವರು  ಸಂಗೀತ ಹಾಗೂ ನಾಟ್ಯದ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದರು.

ತದನಂತರ ಇವರ ಜೀವನದಲ್ಲಿ ಅಚಾತುರ್ಯ ನಡೆದಿತ್ತು, ತಂದೆಯು ಮಾಡಿದ ಚಿಕ್ಕ ಚಿಕ್ಕ ತಪ್ಪುಗಳಿಂದ ಅವರ ಸಂಪೂರ್ಣ ಆಸ್ತಿ ಕರಗಿಹೋಗಿತ್ತು. ಇಡೀ ಕುಟುಂಬದ ಜವಾಬ್ದಾರಿ ಕಾಂಚನ ರವರ ಹೆಗಲಿಗೇರಿತು. ಆದ ಕಾರಣದಿಂದಲೇ ಗಗನಸಖಿ ಉದ್ಯೋಗಕ್ಕೆ ಕಾಂಚನ ರವರು ಸೇರಿಕೊಂಡಿದ್ದರು.

ಉದ್ಯೋಗಕ್ಕೆ ಸೇರಿಕೊಂಡ ಇವರನ್ನು ವಿಮಾನದಲ್ಲಿ ಪ್ರಯಾಣಿಸುವಾಗ ತಮಿಳು ನಿರ್ದೇಶಕರಾಗಿರುವ ಹೆಚ್ ಡಿ ಶ್ರೀಧರ್ ಅವರು ನೋಡಿ ಕಾಂಚನಾ ರವರ ಮುಂದೆ ಸಿನಿಮಾ ಆಫರ್ ವೊಂದನ್ನು ಇಟ್ಟಿದ್ದರು. ಬಂದ ಈ ಅವಕಾಶವನ್ನು ಬೇಡ ಎನ್ನದ ಕಾಂಚನ ರವರು ಬಂದ ಅವಕಾಶವನ್ನು ಬಾಚಿಕೊಂಡು ನಂತರ ತಿರುಗಿ ನೋಡಲೇ ಇಲ್ಲ. ಮೊದಲ ಸಿನಿಮಾದಲ್ಲಿಯೇ ಅವರ ನಟನೆಯನ್ನು ಕಂಡು ಬೆಚ್ಚಿ ಬೆರಗಾದ ತಮಿಳು ಚಿತ್ರರಂಗವು ಕಾಂಚನ ರವರಿಗೆ ಹಲವಾರು ಆಫರ್ ಗಳನ್ನು ನೀಡಿದ್ದವು.

ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಇಡೀ ಚಿತ್ರರಂಗ ಗಳು ಕಾಂಚನ ಅವರನ್ನು ತಮ್ಮ ಚಿತ್ರಗಳಲ್ಲಿ ನಟಿಸುವಂತೆ ಅವಕಾಶ ನೀಡಿದ್ದರು. ಕೆಲವೇ ಕೆಲವು ವರ್ಷಗಳಲ್ಲಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಂಚನ ಅವರು ನಟಿಸಿ ಬಿಟ್ಟರು. ಇವರ ನಿಜವಾದ ಹೆಸರು ವಸಂತ ಭಾಮ ದೇವಿ, ಆದರೆ ಚಿತ್ರರಂಗಕ್ಕೆ ಬಂದ ಮೇಲೆ ಅವರ ಹೆಸರನ್ನು ಕಾಂಚನ ಎಂದು ಬದಲಾಯಿಸಿಕೊಂಡರು. ತಮ್ಮ ಅದ್ಭುತ ಸೌಂದರ್ಯ ಹಾಗೂ ನಟನೆಯ ಸಾಮರ್ಥ್ಯದಿಂದ  ಕನ್ನಡ ಚಿತ್ರರಂಗವು ಸೇರಿದಂತೆ ತೆಲುಗು ತಮಿಳ್ ಚಿತ್ರರಂಗದಲ್ಲಿ ತಮ್ಮದೇ ಆದ ಅಲೆಯನ್ನು ಸೃಷ್ಟಿಸಿದ್ದರು.

ತದನಂತರ ಎಲ್ಲವೂ ಕಾಂಚನ ರವರ ಮಯವಾಗಿತ್ತು, ಎಲ್ಲಾ ಭಾಷೆಯ ನಿರ್ದೇಶಕರು ಕಾಂಚನ್ ಅವರವರ ಕಾಲ್ ಶೀಟ್ ಗಾಗಿ ಕಾದು ಕುಳಿತಿದ್ದರು. ಇದೇ ಸಮಯದಲ್ಲಿ ಕಾಂಚನ ರವರ ಸಹೋದರಿ ಪ್ರೀತಿಸಿ ಮದುವೆಯಾಗಿ ಮನೆಯಿಂದ ಹೊರನಡೆದರು. ಇನ್ನು ಕಾಂಚನ ರವರ ಮದುವೆ ವಿಷಯ ಬಂದಾಗ ಅವರ ತಂದೆ ತಾಯಿ ಕಾಂಚನ ರವರ ವಿರುದ್ಧವಾಗಿ ನಿಂತರು. ಮದುವೆ ಮಾಡಿಕೊಟ್ಟರೆ ತಮ್ಮ ಮಗಳಿಂದ ಬರುತ್ತಿರುವ ಆದಾಯ ನಿಂತುಹೋಗುತ್ತದೆಯೋ ಎಂಬ ಆಲೋಚನೆಯಿಂದ ಮದುವೆ ಮಾಡದೆ ಇರಲು ನಿರ್ಧರಿಸಿದರು.

ತದನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಮಗಳ ಕೈಯಲ್ಲಿ ಕೆಲವು ಪತ್ರಗಳಿಗೆ ಸಹಿ ಹಾಕಿಸಿ ಕೊಳ್ಳುವ ನೆಪದಲ್ಲಿ ಆಸ್ತಿ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದರು. ಇದರಿಂದ ಸಂಪೂರ್ಣ ಆಸ್ತಿಯನ್ನು ಕಳೆದುಕೊಂಡು ಬೀದಿಗೆ ಬಂದಿದ್ದರೂ ನಟಿ ಕಾಂಚನ.  ತಮ್ಮ ಮನೆಯಿಂದ ಹೊರಬಂದು ಕೋರ್ಟ್ ನಲ್ಲಿ ಕೇಸ್ ದಾಖಲಿಸಿ ಬರೋಬ್ಬರಿ 18 ವರ್ಷಗಳ ಹೋರಾಟದಿಂದ ತಮ್ಮ ಆಸ್ತಿಯನ್ನು ಮತ್ತೆ ಗಳಿಸಿಕೊಂಡರು. ಆದರೆ ಆಸ್ತಿ ಬಂದ ಕೂಡಲೇ ಅಷ್ಟರಲ್ಲಾಗಲೇ ಜೀವನದಲ್ಲಿ ಬೇಸತ್ತಿದ್ದ ನಟಿ ಕಾಂಚನ ರವರು ತಮ್ಮ ಇಡೀ ಆಸ್ತಿಯನ್ನು ದಾನ ಮಾಡಿಬಿಟ್ಟರು.

ತದನಂತರ ಸಾಮಾನ್ಯ ಜೀವನವನ್ನು ಆರಂಭಿಸಿದ ಕಾಂಚನ ರವರು ಹಲವಾರು ಬಾರಿ ಮಾರುಕಟ್ಟೆಯಲ್ಲಿ ಹಾಗೂ ದೇವಸ್ಥಾನದ ಬಳಿ ಕಂಡುಬಂದರು. ಇದನ್ನು ನೋಡಿದ ಹಲವರು ಇವರು ನಟಿ ಕಾಂಚನಾ ಎಂದು ಗುರುತಿಸಲಾಗದಷ್ಟು  ಬದಲಾಗಿತ್ತು ಇವರ ಜೀವನ.  ಆದರೆ ಇದನ್ನು ಕಂಡ ತೆಲುಗಿನ ಖ್ಯಾತ ನಿರ್ದೇಶಕರು   ಕಾಂಚನ ರವರ ಮನವೊಲಿಸಿ ಮತ್ತೊಮ್ಮೆ ಚಿತ್ರದಲ್ಲಿ ನಟಿಸುವಂತೆ ಮಾಡಿದ್ದರು.   ಅದುವೇ ಇತ್ತೀಚೆಗೆ ತೆರೆಕಂಡ ಅರ್ಜುನ್ ರೆಡ್ಡಿ ತೆಲುಗಿನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ ಅರ್ಜುನ್ ರೆಡ್ಡಿ ಚಿತ್ರದಲ್ಲಿ ನಟಿ ಕಾಂಚನ ರವರು ನಟಿಸಿದ್ದರು.

ಈಗಲೂ ಸಹ ಸಾಮಾನ್ಯರಂತೆ ಜೀವನ ನಡೆಸುತ್ತಿರುವ ಈ ನಟಿ ಕೆಲವೊಮ್ಮೆ  ಚಿತ್ರರಂಗದ ಸಮಾರಂಭಗಳಲ್ಲಿ ಕಾಣಸಿಗುತ್ತಾರೆ.