ಮೈಸೂರು ಯುವಕನ ಪತ್ರಕ್ಕೆ ಸ್ಪಂದಿಸಿದ ನಮೋ: ಪ್ರಧಾನ ಸೇವಕ ಎಂಬುದು ಮತ್ತೊಮ್ಮೆ ಸಾಬೀತು

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೂರದ ಬೆಟ್ಟ ದಂತೆ ಕಾಣುತ್ತಿದ್ದ ಪ್ರಧಾನಿ ಹುದ್ದೆ ಈಗ ಕಣ್ಣ ಮುಂದೆ ಇದ್ದಂತೆ ಕಾಣುತ್ತಿದೆ ಅಂದರೆ ಪ್ರಧಾನಿಯೊಬ್ಬರು ಪ್ರತಿಯೊಬ್ಬರಿಗೂ ಹತ್ತಿರವಾಗಿದ್ದಾರೆ. ಇಂದು ಎಲ್ಲಿ ನೋಡಿದರೂ ಮೋದಿ ರವರದ್ದೆ ಮಾತು. ಅದರಲ್ಲಿಯೂ ತಮ್ಮ ಕಾರ್ಯವೈಖರಿಯಿಂದ ಪ್ರಸಿದ್ಧವಾಗಿರುವ ನರೇಂದ್ರ ಮೋದಿ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಈಗಾಗಲೇ ನರೇಂದ್ರ ಮೋದಿ ಅವರು ಹಲವಾರು ಪತ್ರಗಳಿವೆ ಸ್ಪಂದಿಸಿ ರುವುದನ್ನು ನಾವು ಕಂಡಿದ್ದೇವೆ ಆದರೆ ಈ ಪತ್ರ ಕೊಂಚ ಭಿನ್ನವಾಗಿದೆ. ಕೇವಲ ಒಬ್ಬ ವಿದ್ಯಾರ್ಥಿ ತನ್ನ ಊರಿನ ರಸ್ತೆಯ ಕುರಿತು ಬರೆದ ಪತ್ರಕ್ಕೆ ಪ್ರಧಾನಿ ಮೋದಿ ಅವರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ ಸಂಪೂರ್ಣ ವಿಷಯಕ್ಕಾಗಿ ಕೆಳಗಡೆ ಓದಿ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಣಸೂರು ಗ್ರಾಮದಲ್ಲಿ ಹಲವಾರು ವರ್ಷಗಳಿಂದಲೂ ಸರಿಯಾದ ರಸ್ತೆ ಇಲ್ಲ. ಸಂಪೂರ್ಣ ಹದಗೆಟ್ಟಿರುವ ಈ ರಸ್ತೆಯ ಬಗ್ಗೆ ನರೇಂದ್ರ ಮೋದಿ ರವರಿಗೆ ದಿಲೀಪ್ ಎಂಬ ಬಾಲ ವಿದ್ಯಾರ್ಥಿ ಸಂಪೂರ್ಣ ವಿವರಗಳನ್ನು ಪತ್ರದಲ್ಲಿ ಬರೆದು ನರೇಂದ್ರ ಮೋದಿ ರವರಿಗೆ ಪೋಸ್ಟ್ ಮಾಡುತ್ತಾನೆ.

ಪತ್ರ ಓದಿದ ಕೂಡಲೇ ನರೇಂದ್ರ ಮೋದಿ ರವರ ಕಾರ್ಯಾಲಯ ವಿದ್ಯಾರ್ಥಿಯ ಪತ್ರಕ್ಕೆ ಸ್ಪಂದಿಸಿದೆ. ಮತ್ತು ಮೈಸೂರು ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ತಾಕೀತು ಮಾಡಲಾಗಿದೆ. ವಿಷಯ ತಿಳಿದ ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಹುಣಸೂರು ಗ್ರಾಮಕ್ಕೆ ದೌಡಾಯಿಸಿ ರಸ್ತೆ ನಿರ್ಮಿಸುತ್ತಿದ್ದಾರೆ.

ಹಲವಾರು ಸುದ್ದಿವಾಹಿನಿಗಳು ಇದ್ದರೂ, ಎಷ್ಟೇ ಸುದ್ದಿ ಪ್ರಕಟವಾದರೂ, ತಮಗೆ ಸಂಬಂಧವಿಲ್ಲ ಎಂದು ಸುಮ್ಮನೆ ಕೈಕಟ್ಟಿ ಕುರುವ ರಾಜಕೀಯ ನಾಯಕರನ್ನು ನೋಡಿರುವ ನಾವು ಕೇವಲ ಒಬ್ಬ ವಿದ್ಯಾರ್ಥಿಯ ಪತ್ರಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಯನ್ನು ಸಹ ನೋಡುತ್ತಿದ್ದೇವೆ. ಹಾಗಿದ್ದರೆ ನಾವು ಈಗ ಹೇಳಬಹುದೇ ಬದಲಾಗುತ್ತಿದೆ ಭಾರತ, ಬದಲಾಯಿಸುತ್ತಿದೆ ಮೋದಿ ಸುನಾಮಿ??