ದುಬೈನಲ್ಲಿ ರಾಹುಲ್ ಗೆ ಮುಖಭಂಗ: ಎಲ್ಲಿ ಹೋದರೂ ಮೋದಿ ಕಾಟ ತಪ್ಪಲಿಲ್ಲ

ದುಬೈನಲ್ಲಿ ರಾಹುಲ್ ಗೆ ಮುಖಭಂಗ: ಎಲ್ಲಿ ಹೋದರೂ ಮೋದಿ ಕಾಟ ತಪ್ಪಲಿಲ್ಲ

ನರೇಂದ್ರ ಮೋದಿ ಭಕ್ತರು ಹೆಚ್ಚಾಗಿ ಇದ್ದಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಇಡೀ ಭಾರತ ದೇಶದಲ್ಲಿ ಕಾಂಗ್ರೆಸ್ ಪಕ್ಷದವರನ್ನು ಕಾಡುತ್ತಿರುವ ನಮೋ ಭಕ್ತರು ದುಬೈ ದೇಶದಲ್ಲಿಯೂ ಸಹ ಕಾಂಗ್ರೆಸ್ ಪಕ್ಷವನ್ನು ಬಿಟ್ಟಿಲ್ಲ, ಈ ಘಟನೆಯನ್ನು ನೋಡಿದರೆ ಕಾಂಗ್ರೆಸ್ ಪಕ್ಷಕ್ಕೆ ಕನಸಿನಲ್ಲಿಯೂ ಸಹ ನರೇಂದ್ರ ಮೋದಿ ರವರ ಭಯ ಕಾಡತೊಡಗುತ್ತದೆ.

ಸಾಮಾನ್ಯವಾಗಿ ಇತರ ಪಕ್ಷಗಳ ನಾಯಕರು ಪ್ರಚಾರಕ್ಕೆ ಬಂದಾಗ ನಾವು ಭಾರತದಲ್ಲಿ ಮೋದಿ ಮೋದಿ ಎಂಬ ಘೋಷಣೆಗಳು ಹಲವಾರು ಬಾರಿ ಕೇಳಿದ್ದೇವೆ. ಅದರಲ್ಲಿಯೂ ಕಾಂಗ್ರೆಸ್ ನಾಯಕಿ ರಮ್ಯಾ ರವರು ಬಂದಾಗಲಂತೂ ಮೋದಿ ರವರ ಹವಾ ತುಸು ಹೆಚ್ಚಾಗಿರುತ್ತದೆ.

ಇಂತಹದ್ದೇ ಘಟನೆ ದುಬೈ ದೇಶದಲ್ಲಿ ನಡೆದಿದ್ದು ರಾಹುಲ್ ಗಾಂಧಿ ಅವರಿಗೆ ಭಾರಿ ಮುಖಭಂಗ ಉಂಟಾಗಿದೆ ಹಾಗೂ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ಹೋಗಿದ್ದ ರಾಹುಲ್ ಗಾಂಧಿಯವರಿಗೆ ಹೋದ ತಕ್ಷಣ ವಿಘ್ನ ಎದುರಾಗಿದೆ.

ಹೌದು ನಿಮ್ಮ ಊಹೆ ನಿಜ ಇಷ್ಟರಲ್ಲಾಗಲೇ ನಿಮಗೆ ಈ ಸತ್ಯ ಏನೆಂದು ತಿಳಿದಿರುತ್ತದೆ. ರಾಹುಲ್ ಗಾಂಧಿ ರವರು ದುಬೈ ದೇಶದಲ್ಲಿ ಇಳಿದ ತಕ್ಷಣ ರಾಹುಲ್ ಗಾಂಧಿ ರವರಿಗೆ ಮೋದಿ ಮೋದಿ ಎಂಬ ಘೋಷಣೆಗಳು ಸ್ವಾಗತ ಕೋರಿವೆ ಇದರಿಂದ ಸಾಮಾನ್ಯವಾಗಿ ರಾಹುಲ್ ಗಾಂಧಿ ಅವರಿಗೆ ಮುಜುಗರ ಉಂಟಾಗಿದೆ.

https://www.facebook.com/IndiasupportBJP/videos/540468753136237/

ಭಾರತದಲ್ಲಿ ಮೋದಿ ಮೋದಿ ಘೋಷಣೆ ಎಂದು ಕೇಳಿ ಬಂದಾಗ ಹಣ ನೀಡಿ ಘೋಷಣೆ ಕೂಗಿಸಿ ಕೊಳ್ಳುತ್ತಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ಗೆ ಈಗ ಏನು ಆರೋಪ ಮಾಡಿ ಇದರಿಂದ ತಪ್ಪಿಸಿಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ ಯಾಕೆಂದರೆ ನರೇಂದ್ರ ಮೋದಿ ಹವಾ ಈಗ ಭಾರತದಲ್ಲಿ ಮಾತ್ರ ಉಳಿದಿಲ್ಲ ಬದಲಾಗಿ ವಿದೇಶದಲ್ಲಿಯೂ ಸಹ ನಮ್ಮ ಭಕ್ತರ ಸಂಖ್ಯೆ ಹೆಚ್ಚಾಗಿದೆ.