ದುಬೈನ ಭಾಷಣದಲ್ಲಿ ಹಿಂದುಗಳನ್ನು ಮತ್ತೊಮ್ಮೆ ಕೆಣಕಿದ ರಾಹುಲ್

ರಾಹುಲ್ ಗಾಂಧಿ ಅವರಿಗೆ ಮೊದಲಿನಿಂದಲೂ ಚುನಾವಣಾ ಸಮಯದಲ್ಲಿ ಹಿಂದೂಗಳು ಆಗುತ್ತಾರೆ ಎಂಬ ಆರೋಪವಿದೆ ಆದರೆ ಈ ಬಾರಿ ಚುನಾವಣೆ ಹತ್ತಿರ ಬರುತ್ತಿದ್ದರೂ ಸಹ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಹಿಂದುಗಳನ್ನು ಕೆಣಕಿದ್ದಾರೆ.

ಕಳೆದ ಪಂಚ ರಾಜ್ಯಗಳ ಚುನಾವಣೆಯ ಸಮಯದಲ್ಲಿ ತಾನು ಬ್ರಾಹ್ಮಣ ಎಂದು ಹೇಳಿಕೊಂಡು ದೇವಾಲಯಗಳ ಸುತ್ತ ಸುತ್ತಿದ ರಾಹುಲ್ ಗಾಂಧಿ ಅವರಿಗೆ ಈಗ ಹಿಂದೂ ಧರ್ಮ ಮರೆತಂತೆ ಕಾಣುತ್ತಿದೆ. ದುಬೈನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ರವರು ಹಿಂದೂ ಧರ್ಮವನ್ನು ಕೆಣಕಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?

ದುಬೈನಲ್ಲಿ ಚುನಾವಣೆಯ ಸಮಯದಲ್ಲಿ ತನಗೆ ಮತ ನೀಡಲು ಪ್ರೇರೇಪಿಸುವದಕ್ಕಾಗಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎನಿಸಿಕೊಂಡಿರುವ ರಾಹುಲ್ ಗಾಂಧಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ಮಹಾತ್ಮ ಗಾಂಧಿ ರವರ ಬಗ್ಗೆ ಮಾತನಾಡುವ ಭರದಲ್ಲಿ ಹಿಂದುಗಳನ್ನು ಕೆಣಕಿ ಬಾರಿ ತಪ್ಪು ಮಾಡಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ?

ಮಹಾತ್ಮ ಗಾಂಧಿ ರವರು ಶಾಂತಿ ಎಂಬ ಅಸ್ತ್ರವನ್ನು ಇಸ್ಲಾಂ ಧರ್ಮದಿಂದ ಪಡೆದುಕೊಂಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ದೇಶದಲ್ಲಿ ಹಿಂಸೆ ನಡೆಯುತ್ತಿದೆ ಎಂದು ಹೇಳುವ ಭರದಲ್ಲಿ ಮಹಾತ್ಮ ಗಾಂಧಿ ರವರನ್ನು ಉದ್ದೇಶಿಸಿ ಶಾಂತಿ ಎಂಬ ಅಸ್ತ್ರವನ್ನು ಇಸ್ಲಾಂ ಧರ್ಮದಿಂದ ಪಡೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಹಲವಾರುಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಕ್ರೋಶ ವ್ಯಕ್ತವಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಚುನಾವಣಾ ಹಿಂದೂ ಗಳಿಗೇನು ಗೊತ್ತು ನಿಜವಾದ ಹಿಂದೂ ಧರ್ಮದ ಗಮ್ಮತ್ತು, ಎನ್ನುವಂತಹ ಕಮೆಂಟ್ ಗಳು ಸಾಕಷ್ಟು ಬಂದಿವೆ ಅಷ್ಟೇ ಅಲ್ಲದೆ ಇನ್ನೂ ಕೆಲವರು ಈತ ದೇಶದಲ್ಲಿ ಮರ್ಯಾದೆಯನ್ನು ಹಾಳು ಮಾಡಿದ ಅಷ್ಟೇ ಅಲ್ಲದೆ ವಿದೇಶದಲ್ಲಿಯೂ ಸಹ ಭಾರತದ ಮಾನವನ್ನು ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

Post Author: Ravi Yadav