ಮಹಾ ಸಮೀಕ್ಷೆ ಬಯಲು: ಕಮ್ಯುನಿಸ್ಟ್ ಕೋಟೆಯನ್ನು ಛಿದ್ರ ಮಾಡಿದ ಮೋದಿ ಅಲೆ

ದಕ್ಷಿಣ ಭಾರತದ ಕಮ್ಯೂನಿಸ್ಟರ ಕೋಟೆ ಯಾಗಿರುವ ಕೇರಳದಲ್ಲಿ ಎಲ್ಲಿ ನೋಡಿದರು ಈಗ ಬದಲಾವಣೆಯ ಗಾಳಿ ಕಂಡು ಬರುತ್ತಿದೆ. ಕಮ್ಯುನಿಸ್ಟರ ಭದ್ರಕೋಟೆ ಎನಿಸಿಕೊಂಡಿದ್ದ ಕೇರಳದಲ್ಲಿ ಈಗ ಇತರರ ಹವಾ ಜೋರಾಗಿ ನಡೆಯುತ್ತಿದೆ. ಇನ್ನೂ ಹತ್ತು ಹಲವಾರು ಅಂಶಗಳು ಇಂಡಿಯಾ ಟುಡೇ ಸಮೀಕ್ಷೆ ಯಲ್ಲಿ ಹೊರಬಿದ್ದಿದ್ದು ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಒಳಗೆ ಮಹಿಳೆಯರ ಪ್ರವೇಶಕ್ಕೆ ಬೆಂಬಲ ನೀಡಿದ್ದ ಎಲ್ ಡಿ ಎಫ್ ಪಕ್ಷದ ಜನಪ್ರಿಯತೆ ಬಾರಿ ಕುಸಿದಿದೆ. ಕಳೆದ ಅಕ್ಟೋಬರ್ ನಲ್ಲಿ ನಡೆದ ಸಮೀಕ್ಷೆಯಲ್ಲಿ ಶೇಕಡ 42 ರಷ್ಟು ಜನ ಪಿನರಾಯಿ ಸರ್ಕಾರವನ್ನು ಹಾಡಿ ಹೊಗಳಿದ್ದರು. ಆದರೆ ಜನರಲ್ಲಿ ಶೇಕಡ 39ರಷ್ಟು ಜನ ಮಾತ್ರ ಪಿಣರಾಯಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಇನ್ನುಳಿದಂತೆ ಬಿಜೆಪಿ ಪಕ್ಷದ ಹವಾ ಜೋರಾಗಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಖಚಿತವಾಗಿಯೂ ಮೋದಿ ಎಂಬ ಸುನಾಮಿಯು ಕೇರಳದ ಸ್ಥಳೀಯ ಪಕ್ಷಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲಿದೆ ಎಂಬ ಶಾಕಿಂಗ್ ವರದಿ ಇವರ ಹೊರಬಿದ್ದಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2016ರ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 140 ಸೀಟುಗಳ ಪೈಕಿ ಬಿಜೆಪಿ ಪಕ್ಷವು ಕೇವಲ ಒಂದೇ ಒಂದು ಸೀಟನ್ನು ಜಯಿಸಿತ್ತು. ಆದರೆ ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ ಎಂಬ ಫಲಿತಾಂಶವನ್ನು ಸಮೀಕ್ಷೆ ಹೊರಹಾಕಿದೆ.

ಶಬರಿಮಲೆ ದೇವಸ್ಥಾನದೊಳಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಕೇರಳದಲ್ಲಿ ಪ್ರತಿಭಟನೆಗಳು ನಡೆದಿದ್ದವು ಇದೇ ಸಂದರ್ಭದಲ್ಲಿ ಎಡಪಂಥೀಯ ವಿಚಾರಧಾರೆಯು ಎಲ್ಲ ಪಕ್ಷಗಳ ನಡುವೆ ಅಸ್ತಿತ್ವ ಕಂಡುಕೊಳ್ಳಲು ಹೋರಾಡುತ್ತಿದ್ದ ಬಿಜೆಪಿ ಪಕ್ಷವು ಹೊಸ ರಾಜಕೀಯ ಶಕ್ತಿಯಾಗಿ ಕೇರಳದಲ್ಲಿ ಹೊರಹೊಮ್ಮಿದೆ ಎಂದು ಶೇಕಡ 45ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನುಳಿದಂತೆ ಶೇಕಡಾ 33 ರಷ್ಟು ಮಂದಿ ಬಿಜೆಪಿ ಪಕ್ಷವು ಕೇವಲ ಶಬರಿಮಲೆ ವಿವಾದ ದಿಂದ ಹೆಸರು ಪಡೆದಿಲ್ಲ ಬದಲಾಗಿ ಸಾಕಷ್ಟು ಕೆಲಸ ಮಾಡಿ  ಕೇರಳದಲ್ಲಿ ನೆಲೆಯೂರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಒಟ್ಟಿನಲ್ಲಿ ಬಿಜೆಪಿ ಪಕ್ಷಕ್ಕೆ ಬರೋಬ್ಬರಿ 45+33= 78 ರಷ್ಟು ಜನ ಬಿಜೆಪಿ ಪಕ್ಷವು ಕೇರಳದಲ್ಲಿ ಭದ್ರವಾಗಿ ನೆಲೆಯೂರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇರಳದಲ್ಲಿ ವಿವಾದ ಭುಗಿಲೆದ್ದ ಬಳಿಕ ಮುಗಿದ ಬಳಿಕ ಇಂಡಿಯಾ ಟುಡೇ ವಾಹಿನಿಗಾಗಿ ಆಕ್ಸಿಸ್ ಮೈ ಇಂಡಿಯಾ ನಡೆಸಿದ ಈ ಸಮೀಕ್ಷೆ ಹಲವಾರು ಸಂಗತಿಗಳನ್ನು ಹೊರಹಾಕಿದ್ದು ಎಲ್ಲಾ ಸಂಗತಿಗಳನ್ನು ಕೂಡಿ ಹಾಕಿ ನೋಡಿದರೆ ಕೇರಳದಲ್ಲಿ ಈಗ ಬಿಜೆಪಿ ಪಕ್ಷದ ಹವಾ ಜೋರಾಗಿದ್ದು ಖಂಡಿತವಾಗಿಯೂ ಹಲವಾರು ಲೋಕಸಭಾ ಚುನಾವಣೆ ಸೀಟುಗಳನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಿದೆ ಎಂಬ ಅಂಶ ಕಾಣ ಸಿಗುತ್ತದೆ.

Post Author: Ravi Yadav