ಅಭಿಷೇಕ್ ಚಿತ್ರದಲ್ಲಿ ದರ್ಶನ್ ಎಂಟ್ರಿ: ಫಿಲಂ ಹಿಟ್ ಗ್ಯಾರಂಟಿ

ದರ್ಶನ್ ರವರು ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಂತೆಯೇ ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುತ್ತಿರುವ ದಿವಂಗತ ನಮ್ಮೆಲ್ಲರ ನೆಚ್ಚಿನ ಅಂಬರೀಶ್ ಅಣ್ಣನ ಪುತ್ರರಾಗಿರುವ ಅಭಿಷೇಕ್ ರವರ ಮೊಟ್ಟ ಮೊದಲ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ದರ್ಶನ್ ರವರ ಪಾತ್ರ ಹಾಗೂ ಸನ್ನಿವೇಶಗಳ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಈಗಾಗಲೇ ದರ್ಶನ್ ಹಾಗೂ ಅಭಿಷೇಕ್ ಅವರ ನಡುವಿನ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದ್ದು, ವಿದೇಶದಿಂದ ಮರಳಿ ವಾಪಸ್ಸು ಭಾರತಕ್ಕೆ ಬರುವ ದೃಶ್ಯಗಳನ್ನು ಬೆಳಗ್ಗೆಯಿಂದ ರಾತ್ರಿ 11 ಗಂಟೆವರೆಗೆ ಚಿತ್ರೀಕರಣ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರದಲ್ಲಿ ದೊಡ್ಡ ಬಂಗಲೆಯನ್ನು ಹಾಗೂ ದ ಕ್ಲಬ್ ನಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಚಿತ್ರ ನಿರ್ದೇಶಕ ರಾಗಿರುವ ನಾಗಶೇಖರ್ ಅವರು ತಮ್ಮ ಕಥೆಗೆ ತಕ್ಕಂತೆ ದರ್ಶನ್ ಅವರ ಪಾತ್ರವನ್ನು ರೂಪಿಸಿದ್ದಾರೆ.

ಅಷ್ಟಕ್ಕೂ ದರ್ಶನ್ ಅವರ ಪಾತ್ರವೇನು ಗೊತ್ತಾ??

ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಒಬ್ಬ ಬಿಜಿನೆಸ್ ಮ್ಯಾನ್, ಬಹುಕೋಟಿ ಉದ್ಯಮಿ ದೊಡ್ಡ ದೊಡ್ಡ ಮಲ್ಟಿ ಕಂಪನಿಗಳ ಒಡೆಯ ಹಾಗೂ ವಿದೇಶದಲ್ಲಿರುವ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಮೊದಲನೇ ಸ್ಥಾನವನ್ನು ಹೊಂದಿರುವ ಸಾವುಕಾರ ನಾಗಿ ದರ್ಶನ್ ರವರು ಅಮರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ಯಮಿ ಯಾಗಿರುವ ದರ್ಶನ್ ರವರು ಭಾರತಕ್ಕೆ ಬಂದ ಮೇಲೆ ಏನಾಗುತ್ತದೆ ಎಂಬುದು ಚಿತ್ರಕಥೆಯ ಮತ್ತೊಂದು ತಿರುವು.

ದರ್ಶನ್ ರವರ ಎಂಟ್ರಿ ನಂತರ ಯಾವ ತಿರುವು ಪಡೆದುಕೊಳ್ಳಲಿದೆ ಗೊತ್ತಾ??

ಶ್ರೀಮಂತ ಶ್ರೀಮಂತ ಉದ್ಯಮಿಯಾಗಿರುವ ದರ್ಶನ್ ರವರು ಚಿತ್ರದಲ್ಲಿ ಅಭಿಷೇಕ್ ರವರಿಗೆ ಅಣ್ಣನಾಗಿ ನಡೆಸಿದ್ದಾರೆ. ಒಂದು ಹಂತದಲ್ಲಿ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಕಷ್ಟಕ್ಕೆ ಸಿಲುಕಿಕೊಂಡಿರುವ ಅಭಿಷೇಕ ರವರು ಜೀವನೋತ್ಸಾಹವನ್ನು ಕಳೆದುಕೊಂಡಿರುತ್ತಾರೆ ಆದರೆ ಸಿನಿಮಾಗೆ ಮತ್ತೊಮ್ಮೆ ಮರುಜೀವ ನೀಡಲು ಹಾಗೂ ಅಭಿಷೇಕ್ ಅವರನ್ನು ಉತ್ತೇಜಿಸಲು ಅಣ್ಣ ದರ್ಶನ್ ರವರ ಎಂಟ್ರಿ ಆಗುತ್ತದೆ.

ದರ್ಶನ್ ರವರ ಮಾತುಗಳಿಂದ ಜೀವನದಲ್ಲಿ ತಾನು ತಲುಪಬೇಕಾದ ಗುರಿ ಅತ್ತ ಹೆಜ್ಜೆ ಹಾಕುವುದಕ್ಕೆ ಸ್ಪೂರ್ತಿ ತೆಗೆದುಕೊಂಡು ಅಭಿಷೇಕ್ ಅವರು ಗುರಿ ತಲುಪಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

Post Author: Ravi Yadav