ಮಮತಾ ಗೆ ಬಿಗ್ ಶಾಕ್: ಬಿಜೆಪಿ ಸೇರಿದ ಸಂಸದ, ಬಿಜೆಪಿಗೆ ಆನೆಬಲ

ಮಮತಾ ಗೆ ಬಿಗ್ ಶಾಕ್: ಬಿಜೆಪಿ ಸೇರಿದ ಸಂಸದ, ಬಿಜೆಪಿಗೆ ಆನೆಬಲ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಲ್ಲಿಯೂ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿರುವ ಬಿಜೆಪಿ ಪಕ್ಷಕ್ಕೆ ಹಾಗೂ ಜನರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿ ಗೊಳಿಸಿರುವ ಬಿಜೆಪಿ ಪಕ್ಷಕ್ಕೆ ಹಲವಾರು ನಾಯಕರು ಸೇರಿಕೊಳ್ಳುತ್ತಿದ್ದಾರೆ.

ಪಕ್ಷಿಮ ಬಂಗಾಳದಲ್ಲಿ ಕೋರ್ಟನ್ನು ಬಳಸಿಕೊಂಡು ಮಮತಾ ಬ್ಯಾನರ್ಜಿ ಅವರು ಅಮಿತ್ ಶಾ ರವರ ರಥಯಾತ್ರೆಯನ್ನು ತಡೆದಿದ್ದಾರೆ ಆದರೆ ಬಿಜೆಪಿ ಪಕ್ಷದ ಅಲೆಯನ್ನು ಮಮತಾ ಬ್ಯಾನರ್ಜಿ ಅವರ ಕೈಯಲ್ಲಿ ತಡೆಯಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.

ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ??

ತೃಣಮೂಲ ಕಾಂಗ್ರೆಸ್ ಸಂಸದರಾಗಿರುವ ಸೌಮಿತ್ರ ಖಾನ್ ರವರು ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಸೇರ್ಪಡೆಯೊಂದಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಲೋಕಸಭಾ ಚುನಾವಣಾ ರಥಯಾತ್ರೆಯನ್ನು ತಡೆಯಲು ಯಶಸ್ವಿಯಾಗಿದ್ದ ಮಮತಾ ಅವರು ಈ ವಿಷಯದಲ್ಲಿ ಸೋಲನ್ನು ಕಂಡಿದ್ದಾರೆ.

ಲೋಕಸಭಾ ಚುನಾವಣೆಗೆ ಸರ್ವ ಸನ್ನದ್ಧವಾಗಿವೆ ಬಿಜೆಪಿಯ ಯತ್ನಕ್ಕೆ ಹೊಸ ಶಕ್ತಿ ಬಂದಂತಾಗಿದ್ದು, ಇದರಿಂದ ಬಿಜೆಪಿ ಪಕ್ಷಕ್ಕೆ ಹಲವಾರು ಲೋಕಸಭಾ ಚುನಾವಣೆ ಸೀಟುಗಳು ಪಶ್ಚಿಮ ಬಂಗಾಳದಿಂದ ಉಡುಗೊರೆಯಾಗಿ ಬರಲಿವೆ ಎಂದರೆ ತಪ್ಪಾಗಲಾರದು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ವಾಧಿಕಾರಿ ಧೋರಣೆಗೆ ಬೇಸತ್ತಿರುವ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಆಡಳಿತ ನಡೆಯುತ್ತಿಲ್ಲ ಕೇವಲ ಪೊಲೀಸರ ಆಡಳಿತ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಆಡಳಿತದಿಂದ ನಾನು ಸರ್ವತೋಮುಖ ಬದಲಾವಣೆ ಬರುತ್ತದೆ ಎಂದು ನಂಬಿ ಬಿಜೆಪಿ ಪಕ್ಷಕ್ಕೆ ಸೇರಿ ಕೊಳ್ಳುತ್ತಿದ್ದೇನೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.