ಸೌಮಿತ್ರ ಬಿಜೆಪಿ ಸೇರ್ಪಡೆ ಬಳಿಕ ಟಿಎಂಸಿ ಗೆ ಮತ್ತೊಂದು ಬಿಗ್ ಶಾಕ್

ಸೌಮಿತ್ರ ಬಿಜೆಪಿ ಸೇರ್ಪಡೆ ಬಳಿಕ ಟಿಎಂಸಿ ಗೆ ಮತ್ತೊಂದು ಬಿಗ್ ಶಾಕ್

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಮಿತ್ ಶಾ ರವರ ಚಾಣಕ್ಯ ತೆಗೆ ನಲುಗಿ ಹೋಗಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಈಗಾಗಲೇ ತನ್ನ ಸಂಸದರಾಗಿರುವ ಸೌಮಿತ್ರ ರವರನ್ನು ಕಳೆದುಕೊಂಡಿದೆ. ಈ ಶಾಕ್ ನಿಂದ ಹೊರ ಬರುವ ಮುನ್ನವೇ ಮಮತಾ ರವರಿಗೆ ಮತ್ತೊಂದು ಶಾಕ್ ಎದುರಾಗಿತ್ತು ಮತ್ತೊಬ್ಬ ಟಿಎಂಸಿ ಸಂಸದ ಪಕ್ಷದಿಂದ ಅಮಾನತು ಕೊಂಡಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪವನ್ನು ಹೊತ್ತಿರುವ ಸಂಸದರಾಗಿರುವ ಅನುಪಮರವರು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡು ದರಿಂದ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಚಟರ್ಜಿ ಅವರು ಹೇಳಿದ್ದಾರೆ.

ಇದೆ ವೇಳೆ ಮಾತನಾಡಿರುವ ಬಿಜೆಪಿ ಪಕ್ಷದ ಮುಖ್ಯಸ್ಥ ರಾಗಿರುವ ಮುಕುಲ್ ರಾಯ್ ರವರು ಸೌಮಿತ್ರ ಖಾನ್ ರವರು ಸೇರ್ಪಡೆಗೊಂಡಿರುವುದು ಕೇವಲ ಟ್ರೈಲರ್ ಅಷ್ಟೇ 2021 ಕು ಮುನ್ನ ಟಿಎಂಸಿ ಪಕ್ಷವು ಸಂಪೂರ್ಣವಾಗಿ ನಾಶವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಹಿಟ್ಲರ್ ನಂತೆ ವರ್ತಿಸುತ್ತದ್ದು, ಇನ್ನಷ್ಟು ಸಂಸದರು ಬಿಜೆಪಿ ಸೇರಲಿದ್ದಾರೆ ಎಂದು ರಾಯ್ ಹೇಳಿದ್ದಾರೆ ಮೂಲಗಳ ಪ್ರಕಾರ ಇನ್ನೂ ಹಲವರು ಕೂಡ ಬಿಜೆಪಿ ಸೇರಲು ತಯಾರಾಗಿದ್ದಾರೆ. ಒಟ್ಟಿನಲ್ಲಿ ಪ್ರತಿದಿನವೂ ಹೊಸ ಕುತೂಹಲವನ್ನು ಮೂಡಿಸುತ್ತಿರುವ ಲೋಕಸಭಾ ಚುನಾವಣೆಯು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.