ರಿಲೀಸ್ ಆದ ಸಲಾಂ ರಾಕಿ ಬಾಯ್: ದಾಖಲೆಗಳು ಪುಡಿಪುಡಿ ಯೂಟ್ಯೂಬ್ ತಲ್ಲಣ
ರಿಲೀಸ್ ಆದ ಸಲಾಂ ರಾಕಿ ಬಾಯ್: ದಾಖಲೆಗಳು ಪುಡಿಪುಡಿ ಯೂಟ್ಯೂಬ್ ತಲ್ಲಣ
ಬಿಡುಗಡೆಯಾದ ಕೆಲವೇ ಕೆಲವು ದಿನಗಳಲ್ಲಿ 200 ಕೋಟಿ ಲೂಟಿ ಮಾಡಿ ಬಿಗ್ ನಟರ ಚಿತ್ರಗಳನ್ನು ಗಣನೆಗೆ ತೆಗೆದುಕೊಳ್ಳದೆ ರಾಕೆಟ್ ನಂತೆ ಮುನ್ನುಗ್ಗುತ್ತಿರುವ ಕೆಜಿಎಫ್ ಚಿತ್ರಕ್ಕೆ ಮತ್ತೊಂದು ಗರಿ ದೊರಕಿದೆ. ಕೆಜಿಎಫ್ ಚಿತ್ರ ರಿಲೀಸ್ ಆಗಿದ್ದ ದಿನದಿಂದಲೂ ಹಾಡುಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
ಅದರಲ್ಲಿಯೂ ಯಶ್ ರವರ ಸಂಪೂರ್ಣ ವಿವರವನ್ನು ನೀಡುವ ಸಲಾಂ ರಾಕಿ ಬಾಯ್ ಎಂಬ ಹಾಡಿಗೆ ಅಭಿಮಾನಿಗಳು ಬಹಳ ಕಾತುರದಿಂದ ಕೊನೆಗೂ ಆ ವಿಡಿಯೋ ಸಾಂಗ್ ನಿನ್ನೆಯಷ್ಟೇ ರಿಲೀಸ್ ಆಗಿದೆ.ಕೊನೆಗೂ ಆ ವಿಡಿಯೋ ಸಾಂಗ್ ನಿನ್ನೆಯಷ್ಟೇ ರಿಲೀಸ್ ಆಗಿದೆ ರಿಲೀಸ್ ಆಗಿದೆ ಕೆಲವೇ ಕೆಲವು ಗಂಟೆಗಳಲ್ಲಿ ಯುಟ್ಯೂಬ್ ಅಲ್ಲಾಡಿಸಿದೆ.
ದಾಖಲೆಗಳನ್ನು ಪುಡಿ ಪುಡಿ ಮಾಡಿಕೊಂಡು ಟ್ರೆಂಡಿಂಗ್ ನಲ್ಲಿ ಮೊದಲನೇ ಸ್ಥಾನದಲ್ಲಿ ಮುನ್ನುಗ್ಗುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ನಟನೆಯ ಕೆಜಿಎಫ್ ಸಿನಿಮಾದ ಹವಾ ಹೆಚ್ಚಾಗಿದೆ. ಕೆಜಿಎಫ್ ಬಿಡುಗಡೆಗೂ ಮುನ್ನ ಕೇವಲ ಲಿರಿಕ್ಸ್ ವಿಡಿಯೋವನ್ನು ಮಾತ್ರ ಚಿತ್ರತಂಡ ರಿಲೀಸ್ ಮಾಡಿತ್ತು.
ಆದರೆ ಮಂಗಳವಾರ ಸಂಜೆ ಸಲಾಂ ರಾಕಿ ಬಾಯ್ ಹಾಡಿನ ಸಂಪೂರ್ಣ ವೀಡಿಯೊವನ್ನು ಲಹರಿ ಮ್ಯೂಸಿಕ್ ಸಂಸ್ಥೆಯು ತಮ್ಮ ಖಾತೆಯಲ್ಲಿ ಬಿಡುಗಡೆ ಮಾಡಿದ್ದು ಬಿಡುಗಡೆಯಾದ ಕೇವಲ 19 ಗಂಟೆಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಜನ ಹಾಡನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಈ ಹಿಂದೆ ಯಾವ ಕನ್ನಡ ಹಾಡು ಮಾಡದ ದಾಖಲೆಯನ್ನು ಕೆಜಿಎಫ್ ಮಾಡಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.