ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾಮಿಡಿ ಕಿಲಾಡಿಗಳ ಜೋಡಿ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾಮಿಡಿ ಕಿಲಾಡಿಗಳ ಜೋಡಿ

ಕೆಲವು ದಿನಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಶೋ ಇಡೀ ರಾಜ್ಯದಲ್ಲಿ ಮನೆ ಮಾತಾಗಿತ್ತು. ಸಂಜೆಯಾದಂತೆ ಟಿವಿ ಮುಂದೆ ಜನರನ್ನು ಕುಳಿತುಕೊಳ್ಳುವಂತೆ ಮಾಡಿದ್ದ ಈ ಕಾಮಿಡಿ ಕಿಲಾಡಿಗಳ ಸೋನಾ ಇಬ್ಬರು ಪರಿಚಿತರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಅಷ್ಟಕ್ಕೂ ಅವರು ಯಾರು ಗೊತ್ತಾ??

ದಾವಣಗೆರೆಯ ಸಾಮಾನ್ಯ ರೈತರು ದಿನಕ್ಕೊಂದು ಹೊತ್ತು ಊಟ ಮಾಡಲು ಪರದಾಡುವ ಅಷ್ಟು ಬಡತನ ಹೊಂದಿದ್ದರೂ ನಟನೆಯಲ್ಲಿ ಆಸಕ್ತಿಯನ್ನು ಕೈಬಿಡದೆ ಕಾಮಿಡಿ ಕಿಲಾಡಿಗಳು ಆಡಿಷನ್ ಗೆ ತೆರಳಿದ್ದ, ಅಷ್ಟೇ ಅಲ್ಲದೆ ಸೆಲೆಕ್ಟ್ ಆಗಿ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾದರು ಗೋವಿಂದೇಗೌಡ.

ಇನ್ನು ಇವರಿಗೆ ವಧುವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಈ ಕಥಾನಾಯಕಿ ನಟನೆಯೇ ಬಾರದಿದ್ದರೂ ಕ್ರಿಯೇಟಿವ್ ಪಾತ್ರಗಳನ್ನು ಮಾಡಿಕೊಂಡು ಫಿನಾಲೆ ತಲುಪಿ ಎಲ್ಲರ ಮನಗೆದ್ದಿದ್ದರು ಅವರೇ ದಿವ್ಯ.

ಇನ್ನೂ ಇಬ್ಬರು ವೀಕ್ಷಕರನ್ನು ನಗಿಸುವುದು ಅಷ್ಟೇ ಅಲ್ಲದೆ ಕಾಮಿಡಿ ಶೋ ನಲ್ಲಿ ಮನೆ ಮಾತಾಗಿದ್ದ ಈ ಜೋಡಿಯ ಮನಸು ಸಹ ಒಂದಾಗಿದೆ ಆದ ಕಾರಣದಿಂದ ದಾಂಪತ್ಯ ಜೀವನಕ್ಕೆ ಕಾಲಿಡಲು ನಿಶ್ಚಯಿಸಿದ್ದಾರೆ. ಇದೇ ತಿಂಗಳ 27ರಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ನೆರವೇರಲಿದ್ದು ಮಾರ್ಚ್ 14 ನೇ ತಾರೀಖಿನಂದು ಶೃಂಗೇರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಕಾಮಿಡಿ ಕಿಲಾಡಿ ಶೋ ಗಳ ನಡುವೆ ಒಬ್ಬರನ್ನೊಬ್ಬರನ್ನು ಇಷ್ಟಪಟ್ಟು ಕುಟುಂಬದ ಒಪ್ಪಿಗೆಯೊಂದಿಗೆ ಈ ಜೋಡಿಯು ನವ ಜೀವನವನ್ನು ಆರಂಭಿಸಲಿದೆ ಎಲ್ಲರನ್ನು ನಗುವಿನ ಅಲೆಯಲ್ಲಿ ತೇಲಿದ ಈ ಜೋಡಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಹಾರೈಸುತ್ತೇವೆ.