ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಸಂಕ್ರಾಂತಿ ಹಬ್ಬ ಜೋರು ಮಾಡಿ

ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಸಂಕ್ರಾಂತಿ ಹಬ್ಬ ಜೋರು ಮಾಡಿ

ಸಂಕ್ರಾಂತಿ ಹಬ್ಬ ಬಂತು ಎಂದರೇ ಮನೆಯಲ್ಲಿ ಹಬ್ಬದ ಸಂಭ್ರಮ ಜೋರಾಗಿರುತ್ತದೆ ಅದರಲ್ಲಿಯೂ ಈಗ ದರ್ಶನ್ ಅಭಿಮಾನಿಗಳಿಗೆ ಹಬ್ಬದ ಜೊತೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಅನ್ನು ದರ್ಶನ ನೀಡಲಿದ್ದಾರೆ.

ಹಲವಾರು ತಿಂಗಳುಗಳಿಂದ ದರ್ಶನ್ ರವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಯಜಮಾನ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ. ಲಕ್ಷಾಂತರ ಅಭಿಮಾನಿಗಳು ದರ್ಶನ್ ರವರ ಈ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ.

ಇದೇ ವೇಳೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಯಜಮಾನ ಚಿತ್ರತಂಡದಿಂದ ದರ್ಶನ್ ರವರ ಪರವಾಗಿ ಭರ್ಜರಿ ಉಡುಗೊರೆ ನೀಡಲು ಸಿದ್ದರಾಗಿದ್ದಾರೆ. ಅಷ್ಟಕ್ಕೂ ಆ ಗುಡ್ ನ್ಯೂಸ್ ಏನ್ ಗೊತ್ತಾ??

ಪಿ ಕುಮಾರ್ ರವರು ನಿರ್ದೇಶಿಸುತ್ತಿರುವ ಯಜಮಾನ ಚಿತ್ರದಲ್ಲಿ ವಿ ಹರಿಕೃಷ್ಣ ರವರ ಮ್ಯೂಸಿಕ್ ನಿಂದ ಕೂಡಿರುವ ಹಾಗೂ ಚೇತನ್ ಕುಮಾರ್ ಅವರು ಲಿರಿಕ್ಸ್ ಬರೆದಿರುವ ಯಜಮಾನ ಚಿತ್ರದ ಮೊದಲ ಹಾಡನ್ನು ಸಂಕ್ರಾಂತಿ ಹಬ್ಬದ ದಿನದಂದು ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಘೋಷಿಸಿದೆ.

ಸದ್ಯದಲ್ಲಿ ಶೂಟಿಂಗ್ ಮುಗಿಯಲಿದ್ದು ಚಿತ್ರವೂ ಸಹ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ. ಒಟ್ಟಿನಲ್ಲಿ ಈ ಸಂಕ್ರಾಂತಿ ಹಬ್ಬ ದರ್ಶನ್ ರವರ ಅಭಿಮಾನಿಗಳಿಗೆ ಭರ್ಜರಿ ಹಬ್ಬ ವಾಗಲಿದೆ.