ಕರ್ನಾಟಕ ಪ್ರವಾಸ ದಿಡೀರ್ ರದ್ದು ಮಾಡಿದ ಅಮಿತ್ ಶಾ: ಕಾರಣವೇನು ಗೊತ್ತಾ??

ಕರ್ನಾಟಕ ಪ್ರವಾಸ ದಿಡೀರ್ ರದ್ದು ಮಾಡಿದ ಅಮಿತ್ ಶಾ: ಕಾರಣವೇನು ಗೊತ್ತಾ??

ಅಮಿತ್ ಶಾ ರವರು ಲೋಕಸಭಾ ಚುನಾವಣೆಯ ರಣಕಹಳೆ ಯನ್ನು ಕರ್ನಾಟಕದಲ್ಲಿ ಊದಲು ಜನವರಿ 9ರಂದು ತುಮಕೂರಿನಲ್ಲಿ ಆಯೋಜಿಸಿದ್ದ ಪಕ್ಷದ ವಿವಿಧ ಸಭೆಗಳಲ್ಲಿ ಭಾಗವಹಿಸಬೇಕಾಗಿತ್ತು ಅಷ್ಟೇ ಅಲ್ಲದೆ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಸ್ವತಹ ಅಮಿತ್ ಶಾ ರವರು ಬರಲು ನಿರ್ಧರಿಸಿದ್ದರು.

ಆದರೆ ಅಮಿತ್ ಶಾ ರವರ ಕರ್ನಾಟಕ ಪ್ರವಾಸ ದಿಢೀರ್ ರದ್ದಾಗಿದೆ. ಈ ಮೂಲಕ ಕರ್ನಾಟಕ ಲೋಕಸಭಾ ಚುನಾವಣಾ ತಯಾರಿಗೆ ಕಾಲ ಇನ್ನೂ ಕೂಡಿ ಬಂದಂತೆ ಕಾಣುತ್ತಿಲ್ಲ. ಆದರೆ ಈಗಾಗಲೇ ವಿರೋಧ ಪಕ್ಷಗಳು ಲೋಕಸಭಾ ಚುನಾವಣಾ ತಯಾರಿಯಲ್ಲಿ ಮಗ್ನರಾಗಿದ್ದಾರೆ.

ಅಷ್ಟಕ್ಕೂ ಪ್ರವಾಸ ರದ್ದು ಆಗಲು ಕಾರಣವೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನವದೆಹಲಿಯಲ್ಲಿ ಹಲವಾರು ದಿನಗಳಿಂದ ಸಂಸತ್ ಅಧಿವೇಶನ ನಡೆಯುತ್ತಿದೆ. ಅಮಿತ್ ಶಾ ರವರು ಸಹ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಬೇಕಾಗಿದೆ. ಅಧಿವೇಶನದ ಅವಧಿ ವಿಸ್ತರಿಸಲಾಗಿದ್ದು ಅಮಿತ್ ಶಾ ರವರ ಹಾಜರಿ ಬಹಳ ಮುಖ್ಯವಾಗಿದೆ. ಆದ ಕಾರಣದಿಂದ ಅಮಿತ್ ಶಾ ರವರು ಕರ್ನಾಟಕ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.

ಇನ್ನುಳಿದಂತೆ ಬದಲಾದ ಪ್ರವಾಸ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅಧಿವೇಶನದ ಮುಕ್ತಾಯದ ನಂತರ ಅಮಿತ್ ಶಾ ರವರು ಕರ್ನಾಟಕಕ್ಕೆ ಬರುವುದು ಖಚಿತ ಎಂದು ಮಾಹಿತಿ ನೀಡಿರುವ ಬಿಜೆಪಿ ಕಾರ್ಯಾಲಯ, ದಿನಾಂಕ ನಿಗದಿಪಡಿಸಿದ ತಕ್ಷಣ ಬಹಿರಂಗವಾಗಿ ಘೋಷಿಸುತ್ತೇವೆ ಎಂದು ಹೇಳಿದ್ದಾರೆ.