ಆರ್ ಸಿಬಿ ಆಟಗಾರನೇ ಪವನ್ ರವರ ಸ್ಪೂರ್ತಿಯಂತೆ ಆ ಆಟಗಾರ ಯಾರು ??

ಪ್ರೋ ಕಬ್ಬಡಿ ಸರಣಿ ಆರಂಭವಾದ ದಿನದಿಂದಲೂ ಬೆಂಗಳೂರು ತಂಡ ಚಾಂಪಿಯನ್ಸ್ ಆಗಬೇಕೆಂಬ ಕನಸು ಕೆಲವು ಗಂಟೆಗಳ ಹಿಂದಷ್ಟೇ ನೆರವೇರಿದೆ. ಇನ್ನೇನು ಪಂದ್ಯ ಸೋತಿವಿ ಎನ್ನುವಷ್ಟರಲ್ಲಿ ಆಪತ್ಭಾಂದವ ನಂತೆ ಆಟವಾಡಿದ ಪವನ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದ ಬೆಂಗಳೂರು ತಂಡವೂ ಪವನ್ ರವರ 23 ಅಂಕಗಳ ನೆರವಿನಿಂದ ಗುಜರಾತ್ ತಂಡವನ್ನು 5 ಅಂಕಗಳಿಂದ ಮಣಿಸಿತ್ತು. ಪವನ್ ರವರ ಈ ಆಟಕ್ಕೆ ಬೆಂಗಳೂರು ಅಭಿಮಾನಿಗಳು ಹುಚ್ಚೆದ್ದು ಕುಣಿದರು ಹಾಗೂ ಅವರನ್ನು ದೇವರಂತೆ ಆರಾಧಿಸಿದರು.

ಈಗ ಇದೇ ಪವನ್ ರವರು ಮಾಧ್ಯಮಗಳೊಂದಿಗೆ ನೀಡುವ ಸಂದರ್ಶನದಲ್ಲಿ ನಿಮ್ಮ ಸ್ಪೂರ್ತಿ ಯಾರು ಎಂದು ಕೇಳಿದಾಗ ಆರ್ ಸಿಬಿ ಆಟಗಾರನ ಹೆಸರು ಹೇಳಿದ್ದಾರೆ. ಐಪಿಎಲ್ ನಲ್ಲಿ ಹೆಚ್ಚು ಮನರಂಜನೆಯ ತಂಡವಾಗಿ ಗುರುತಿಸಿಕೊಂಡಿರುವ ಆರ್ಸಿಬಿ ಮೊದಲಿನಿಂದಲೂ ಪ್ರಶಸ್ತಿಗಾಗಿ ಹಾತೊರೆಯುತ್ತಿದೆ. ಆದರೆ ಈ ತಂಡದ ಆಟಗಾರರು ಪವನ್ ರವರಿಗೆ ಸ್ಫೂರ್ತಿಯಾಗಿದ್ದಾರೆ.

ಅಷ್ಟಕ್ಕೂ ಆಟಗಾರ ಯಾರು ಗೊತ್ತಾ??

ವಿಶ್ವವೇ ನಡುಗುವಂತೆ ಬ್ಯಾಟಿಂಗ್ ಮಾಡುತ್ತಿದ್ದ ಬೆಂಗಳೂರಿನ ತಂಡದ ಅಚ್ಚುಮೆಚ್ಚಿನ ಆಟಗಾರರಲ್ಲಿ ಒಬ್ಬರಾದ ಎ ಬಿ ಡಿವಿಲಿಯರ್ಸ್. ಹೌದು ಎ ಬಿ ಡಿವಿಲಿಯರ್ಸ್ ಅವರು ಹೊಡಿ ಬಡಿ ಆಟಕ್ಕೆ ಪ್ರಸಿದ್ಧರು ಅಷ್ಟೇ ಅಲ್ಲದೆ ತಂಡ ಸಂಕಷ್ಟದಲ್ಲಿ ಸಿಲುಕಿದ್ದಾಗ ಎಂತಹ ಆಟಕ್ಕೂ ಸೈ ಎನ್ನುವ ಈ ಆಟಗಾರ ಪವನ್ ರವರ ಆಟಕ್ಕೆ ಸ್ಪೂರ್ತಿಯಂತೆ.

ಐಪಿಎಲ್ ನಲ್ಲಿ 17 ನೇ ನಂಬರ್ ಜರ್ಸಿ ಧರಿಸಿ ಆಡುವ ಎ ಬಿ ಡಿ ರವರು ತಂಡವನ್ನು ಗೆಲ್ಲಿಸಿ ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಅದರಂತೆಯೇ ಬೆಂಗಳೂರು ಬುಲ್ಸ್ ತಂಡದಲ್ಲಿ 17ನೇ ನಂಬರ್ ಜರ್ಸಿ ಧರಿಸಿ ಆಡುವ  ಪವನ್ ಸಹ ಪ್ರಮುಖ ಪಾತ್ರವಹಿಸಿ ಬೆಂಗಳೂರು ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದಾರೆ.

Post Author: Ravi Yadav