ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷಗಳೇ ಕಳೆಯುತ್ತಾ ಬಂತು. ಆದರೂ ಈ ಜೋಡಿ ಎಲ್ಲರ ಗಮನ ಸೆಳೆಯುತ್ತಲೇ ಇರುತ್ತದೆ.
[do_widget id=et_ads-2]
ವಿಶ್ರಾಂತಿಗಾಗಿ ಟೀಮ್ ಇಂಡಿಯಾದಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬವನ್ನು ಪತ್ನಿಯೊಂದಿಗೆ ಉತ್ತರಾಖಂಡದ ಹರಿದ್ವಾರದಲ್ಲಿ ಆಚರಿಸಿಕೊಂಡಿದ್ದರು. ವಾಪಸ್ ಮುಂಬೈಗೆ ಬರುವ ವೇಳೆ ಪತಿ ಮೇಲೆ ಅನುಷ್ಕ ಸಿಡಿಮಿಡಿ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
[do_widget id=et_ads-4]
ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಅಭಿಮಾನಿಯೊಬ್ಬ ಇವರಿಬ್ಬರನ್ನು ಚಿತ್ರೀಕರಿಸುತ್ತಿದ್ದ ವೇಳೆ ಇದು ಎಲ್ಲರ ಗಮನಕ್ಕೆ ಬಂದಿದೆ. ಯಾವುದೋ ಕಾರಣಕ್ಕೆ ಪತಿ ಮೇಲೆ ಮುನಿಸಿಕೊಂಡಿರುವ ಅನುಷ್ಕಾ ಏನನ್ನೋ ಹೇಳುತ್ತಿದ್ದು, ಇದಕ್ಕೆ ವಿರಾಟ್ ಕೊಹ್ಲಿ ನಸುನಗುತ್ತಲೇ ಸಮಜಾಯಿಷಿ ನೀಡಿದ್ದಾರೆ.
[do_widget id=et_ads-3]